ವೈದ್ಯರಿಗೆ ನಮನ
ಜನಸೇವೆ ಜನಾರ್ದನ ಸೇವೆ ಎಂದು ಸೇವಿ ಸಲ್ಲುತ್ತಿರುವ ಎಲ್ಲಾ ವೈದ್ಯರಿಗೂ ಹಾರ್ದಿಕ ಶುಭಾಶಯಗಳು..
ಜೀವ ರಕ್ಷಕರು ವೈದ್ಯ ಈ ನಾರಾಯಣರು
ಥರಹೇವಾರಿ ವೈದ್ಯಶಾಸ್ತ್ರ ಪಾರಾಯಣರು
ಮೃದು ಮಾತಿನಲ್ಲಿ ಸಂಕಟ ಬಗ್ಗೆ ಹರಿಸುವ ವೆಂಕಟರಮಣರು
ತನುಮನಗಳಿಗಂಟಿದ ಆತಂಕಕಾರಿ
ರೋಗಿಹರಣರು..
ಪ್ರತಿಫಲಾಪೇಕ್ಷಯಿಲ್ಲದೆ ಸೇವೆಗೈಯ್ಯುವ
ದಣಿವರಿಯದ ಕರ್ಮಯೋಗಿಗಳು
ಹಗಲಿರುಳೆನ್ನದೆ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಸಿಪಾಯಿಗಳು..
ಪಶು ಪಕ್ಷಿ ಪರಸ್ಪರ ಸ್ವಾಸ್ಥ್ಯ ಕಾವಲಿಗರು
ಪಾಶ ಬಿಡಿಸಿ ಯಮನ ಬೇದರಿಸುವ ಸವಾಲಿಗರು
ವಿಷ ಬಿತ್ತಿ ಇಲ್ಲದ ನಿರ್ಮಲ ಮನಸ್ಸಿನ ವೃತ್ತಿನಿರತರು,
ಈಶ ಸೇವೆಗಿಂತ ಜನಸೇವೆಗೆ ಮುಡಿಪಾದ ಶಕ್ತಿದಾತರು..
Also read
ಸೈನಿಕರು ದೇಶ ಕಾಯಲು ಯಾವಾಗಲೂ ಸಿದ್ಧರಾಗಿರುತ್ತಾರೆ ಹಾಗೇ ರೋಗಿಗಳ ವಾಸಿ ಮಾಡಲು ವೈದ್ದರು ಸಿದ್ದರಾಗಿರುತ್ತಾರೆ.. ಕವಿತೆ:ಅಮೃತಾ ಸಿದ್ದಪಾ ಚೌಧರಿ ವಿಜಯಪುರ



