Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಿಕೆಗಳಿಗೆ ಅಂಚೆ ರಿಯಾಯಿತಿ ಮುಂದುವರಿಸಲು ಪ್ರಧಾನಿಗೆ ಕೆಯುಡಬ್ಲ್ಯೂಜೆ ಒತ್ತಾಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಿಗೆ ನೀಡಲಾಗುತ್ತಿದ್ದ ಅಂಚೆ ರಿಯಾಯಿತಿಯನ್ನು ಮರುಸ್ಥಾಪಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ಸಮಸ್ಯೆಯಾಗಿರುವ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ. 

ಅಂಚೆ ಇಲಾಖೆಯ PO ORDER-PO/01/2024 (ದಿನಾಂಕ 16 ಡಿಸೆಂಬರ್ 2024) ಆದೇಶದ ಪ್ರಕಾರ, ಅಂಚೆ ರಿಯಾಯಿತಿಗೆ ಅರ್ಹತೆ ಪಡೆಯಲು ಪತ್ರಿಕೆಗಳು ಪ್ರತಿದಿನ ಅಥವಾ ಕನಿಷ್ಠ ವಾರಕ್ಕೊಮ್ಮೆ ಪ್ರಕಟವಾಗಬೇಕು ಎಂಬ ಹೊಸ ಮಾನದಂಡ ಜಾರಿಗೆ ಬಂದಿದೆ. ಇದರ ಪರಿಣಾಮವಾಗಿ ಪಾಕ್ಷಿಕ ಹಾಗೂ ಮಾಸಿಕ ನೋಂದಾಯಿತ ನಿಯತಕಾಲಿಕೆಗಳು ರಿಯಾಯಿತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ಕೆಯುಡಬ್ಲ್ಯೂಜೆ ತಿಳಿಸಿದೆ.

ಈ ಕ್ರಮದಿಂದ ಸಣ್ಣ ಮತ್ತು ಮಧ್ಯಮ ಪ್ರಕಾಶಕರಿಗೆ ಭಾರೀ ಆರ್ಥಿಕ ಹೊರೆ ಉಂಟಾಗಿದೆ. ಹಿಂದೆ ಸುಮಾರು 50 ಪೈಸೆ ದರದಲ್ಲಿ ವಿತರಣೆ ಮಾಡುತ್ತಿದ್ದ ಪ್ರತಿಗಳಿಗೆ ಈಗ 4 ರಿಂದ 5ರವರೆಗೆ ಅಂಚೆ ಶುಲ್ಕ ಪಾವತಿಸಬೇಕಾಗಿದ್ದು, ವಿತರಣಾ ವೆಚ್ಚದಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ ಎಂದು ಪ್ರಕಾಶಕರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಸಮಸ್ಯೆಗಳು, ಸಾಮಾಜಿಕ ಜಾಗೃತಿ, ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಾಮೀಣ ಜನತೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಕಟಣೆಗಳು ಡಿಜಿಟಲ್ ಮಾಧ್ಯಮದ ಪ್ರವೇಶವಿಲ್ಲದ ಓದುಗರಿಗೆ ಪ್ರಮುಖ ಮಾಹಿತಿ ಮೂಲಗಳಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

 

ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ನಿಯತಕಾಲಿಕೆಗಳು ಸಮಾಜದ ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಪ್ರಸಾರದಲ್ಲೂ ಮಹತ್ವದ ಕೊಡುಗೆ ನೀಡುತ್ತಿವೆ. ಹೀಗಾಗಿ ಪ್ರಕಟಣೆಯ ಅವಧಿಯನ್ನು ಆಧಾರವಾಗಿಟ್ಟುಕೊಂಡು ರಿಯಾಯಿತಿ ನಿರಾಕರಿಸುವ ಬದಲು, ಎಲ್ಲಾ ನೋಂದಾಯಿತ ನಿಯತಕಾಲಿಕೆಗಳಿಗೆ ಅಂಚೆ ರಿಯಾಯಿತಿ ಸೌಲಭ್ಯವನ್ನು ಮರುಸ್ಥಾಪಿಸಬೇಕು ಎಂದು ತಗಡೂರು ಅವರು ಮನವಿ ಮಾಡಿದ್ದಾರೆ.

ಈ ಕುರಿತು ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಆದೇಶವನ್ನು ಮರುಪರಿಶೀಲಿಸಿ, ದೇಶದಾದ್ಯಂತದ ಸಾವಿರಾರು ಸಣ್ಣ ಮತ್ತು ಮಧ್ಯಮ ಪ್ರಕಾಶಕರ ಹಿತಾಸಕ್ತಿಯನ್ನು ಕಾಪಾಡುವಂತೆಯೂ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಒತ್ತಾಯಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಕೆಶಿ ಸಾಮಾಜಿಕ ನ್ಯಾಯ ಪಾಲಿಸಲಿ ಅಹಿಂದ ವರ್ಗಕ್ಕೆ ರಾಜಕೀಯ ಮನ್ನಣೆ ನೀಡಲಿ-ಎಮ್ಮೆಹಟ್ಟಿ ಹನುಮಂತಪ್ಪಸಿಎಂ ಆಗಿ ಹುಟ್ಟೂರಿಗೆ ಮೊದಲ ಭೇಟಿ: ಕನಕಪುರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭವ್ಯ ಸ್ವಾಗತ, ಮೆಡಿಕಲ್ ಕಾಲೇಜಿಗೆ ಭೂಮಿಪೂಜೆ! 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ; ವಯೋಮಿತಿ 5 ವರ್ಷ ಸಡಿಲಿಕೆ!ಮತ್ತೆ ದುಬಾರಿಯಾದ ಅಡುಗೆ ಅನಿಲ; ಸಿಲಿಂಡರ್ ಬೆಲೆ 29 ಏರಿಕೆ!ಆನ್‌ಲೈನ್ ಗೇಮಿಂಗ್ ವ್ಯಸನ; 18 ವರ್ಷದ ಕಾಲೇಜು ವಿದ್ಯಾರ್ಥಿಯಿಂದ ಹತ್ಯೆಭಾರಿ ಮಳೆಗೆ ತುಂಬಿ ಹರಿದ ಹಳ್ಳ; ಅಪರಿಚಿತ ಮಹಿಳೆ ಶವ ಪತ್ತೆಭಗವಂತನಿಗೆ ಸಮರ್ಪಿತವಾದ- ಅಧಿಕ ಫಲ ಪಡೆಯುವ ಅಧಿಕ ಮಾಸ: ವೈ ರಾಜಾರಾಮ್ಪ್ರಿಯಾಂಕ್ ಖರ್ಗೆಗೆ ಸಿ.ಟಿ. ರವಿ ತಿರುಗೇಟು: ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಬಿಡುಗಡೆಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲ್ಲ, ಪ್ರಾಣ ಬೇಕಾದರೂ ಬಿಡ್ತೀವಿ: ರೈತರ ಪರ ಜೆಡಿಎಸ್ ಉಗ್ರ ಹೋರಾಟದ ಎಚ್ಚರಿಕೆಮೆಟ್ರೋದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಾಮಾನ್ಯರಂತೆ ಪ್ರಯಾಣ: ಸಾರ್ವಜನಿಕರೊಂದಿಗೆ ಸಂವಾದ!