Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರೈತರು ಡೈರಿಗೆ ಗುಣಮಟ್ಟದ ಹಾಲು ಹಾಕುವ ಮೂಲಕ ಲಾಭ ಪಡೆಯಲಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ : 
ಗುಣಮಟ್ಟದ ಹಾಲನ್ನು ಡೈರಿಗೆ ಹಾಕುವ ಮೂಲಕ ಸಹಕಾರ ನೀಡುವಂತೆ ಶಿವಮೊಗ್ಗ
, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿರ್ದೇಶಕ ಜಿ.ಬಿ.ರೇವಣಸಿದ್ದಪ್ಪ ಅಧ್ಯಕ್ಷರು, ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು.

ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಅಧ್ಯಕ್ಷರು, ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಆರು ತಿಂಗಳಿಗೊಮ್ಮೆ ಕಾರ್ಯದರ್ಶಿ, ಅಧ್ಯಕ್ಷರುಗಳ ಸಭೆ ಕರೆದು ಕುಂದುಕೊರತೆಗಳನ್ನು ಆಲಿಸಿಕೊಂಡು ಬರುತ್ತಿದ್ದೇವೆ. ಒಕ್ಕೂಟದಿಂದ ಸಂಘಗಳಿಗೆ ಏನು ಕೊಡುತ್ತೇವೆನ್ನುವುದು ಅಧ್ಯಕ್ಷರುಗಳ ಗಮನದಲ್ಲಿರಬೇಕು. ಹಾಗಾಗಿ ಮುಂದಿನ ಸಲ ಅಧ್ಯಕ್ಷರುಗಳನ್ನು ಸಭೆಗೆ ಕರೆತರುವಂತೆ ಕಾರ್ಯದರ್ಶಿಗಳಿಗೆ ತಾಕೀತು ಮಾಡಿದರು.

ಎಂಟು ಲಕ್ಷ ಲೀಟರ್ ಸಾಮರ್ಥ್ಯದ ಡೈರಿಯನ್ನು ಚಿತ್ರದುರ್ಗದಲ್ಲಿ ಮಾಡುತ್ತೇವೆ. ದಾವಣಗೆರೆಯಲ್ಲಿಯೂ ಕೂಡ ಡೈರಿ ನಿರ್ಮಾಣವಾಗಲಿದೆ. ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿದಂತಾಗುತ್ತದೆ. ಒಗ್ಗಟ್ಟಾಗಿ ಸಂಘವನ್ನು ನಡೆಸಿಕೊಂಡು ಹೋಗಿ ನಾವುಗಳು ಹಸ್ತಕ್ಷೇಪ ಮಾಡುವುದಿಲ್ಲ. ಒಂಬತ್ತುವರೆ ಲಕ್ಷ ಲೀಟರ್ ಹಾಲು ಪ್ರತಿನಿತ್ಯವೂ ನಮಗೆ ಬರುತ್ತದೆ. ಇದರಲ್ಲಿ ಖರ್ಚಾಗುವುದು ಕೇವಲ ಮೂರು ಲಕ್ಷ ಲೀ.ಮಾತ್ರ. ಉಳಿದ ಹಾಲನ್ನು ಬೇರೆ ಬೇರೆ ಘಟಕಗಳಿಗೆ ಕಳಿಸಿ ಬೆಣ್ಣೆ, ತುಪ್ಪ, ಹಾಲಿನ ಪೌಡರ್ ಹಾಗೂ ಇತರೆ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುವುದು. ಹಾಲನ್ನು ಪುಡಿಯಾಗಿ ಪರಿವರ್ತಿಸಲು ಒಂದು ಲೀಟರ್‌ಗೆ ಆರು ರೂ.ಗಳ ಖರ್ಚಾಗುತ್ತದೆ. ಮೂರು ತಾಲ್ಲೂಕಿನಿಂದ ಸೇರಿ ೫೭ ಕಂಪ್ಯೂಟರ್‌ಗಳು ಬೇಕು. ಇನ್ನು ಮೂರು ತಿಂಗಳಲ್ಲಿ ಪೂರೈಸಲಾಗುವುದೆಂದು ಹೇಳಿದರು.

ಶಿಮುಲ್ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ ನಿಮ್ಮ ಕುಂದುಕೊರತೆಗಳನ್ನು ಆಲಿಸಿದ್ದೇವೆ. ೬೮ ಸಂಘಗಳಿಂದ ದಿನವಹಿ ಐವತ್ತು ಲಕ್ಷ ಲೀ.ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ತೊಂದರೆಯಾಗಬಾರದೆಂದು ಮ್ಯಾಟ್, ಮೆಷಿನ್ ಹಾಗೂ ಕ್ಯಾನ್‌ಗಳನ್ನು ಕೊಡುತ್ತಿದ್ದೇವೆ. ಚಿತ್ರದುರ್ಗದಲ್ಲಿ ಹಾಲಿನ ಡೈರಿ ಮಾಡುತ್ತೇವೆ. ಮುಂದೆ ದಾವಣಗೆರೆಯಲ್ಲಿಯೂ ಮಾಡುವುದಾಗಿ ತಿಳಿಸಿದರು.
ಗುಣಮಟ್ಟದ ಹಾಲು ಹಾಕಿದರೆ ಮುಂದಿನ ದಿನಗಳಲ್ಲಿ ಕಡಿಮೆ ಲಾಭಾಂಶವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಸಭೆಗಳನ್ನು ನಡೆಸುತ್ತಿರಲಿಲ್ಲ. ಅನೇಕ ಕೆಲಸಗಳು ಸ್ಥಗಿತಗೊಂಡಿದ್ದವು. ಈ ವರ್ಷ ಹದಿನೈದು ಕೋಟಿ ರೂ.ಲಾಭ ಗಳಿಸಿದ್ದು, ಬೋನಸ್ ರೂಪದಲ್ಲಿ ಲಾಭಾಂಶವನ್ನು ನೀಡಿದ್ದೇವೆ. ಉಳಿದ ಹಣ ಹೊಂದಿಸಲು ಆಗುತ್ತಿಲ್ಲ. ಬೇರೆ ಬೇರೆ ಘಟಕಗಳಿಗೆ ಹಾಲನ್ನು ಕಳಿಸಿ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ೨೮೦ ಸಂಘಗಳಿದ್ದವು. ಈಗ ೩೬೦ ರಿಂದ ೩೮೦ ಕ್ಕೆ ಏರಿಕೆಯಾಗಿದೆ.

ಚಳ್ಳಕೆರೆ, ಹೊಸದುರ್ಗ ಭಾಗಗಳಲ್ಲಿಯೂ ಹೊಸ ಸಂಘಗಳಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ೫೨೧೨ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಿದ್ದೇವೆ. ಎರಡು ಲಕ್ಷ ಲೀ.ಸಾಮರ್ಥ್ಯದ ಡೈರಿ ಚಿತ್ರದುರ್ಗದಲ್ಲಿ ಆಗಬೇಕು. ಕಾಲ ವ್ಯಯ ಮಾಡಬೇಡಿ. ಅಭಿವೃದ್ದಿಗೆ ಸಹಕರಿಸಿ ಎಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದರು.

ನಿರ್ದೇಶಕ ರವಿಕುಮಾರ್ ಮಾತನಾಡಿ ತುಂಬಾ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ಮಿಲ್ಕಿಂಗ್ ಮೆಷಿನ್, ಮ್ಯಾಟನ್ನು ಅವಸರವಾಗಿ ಖರೀದಿಸುವುದು ಬೇಡ. ಮೊದಲು ದಾವಣಗೆರೆ, ಶಿವಮೊಗ್ಗದವರು ಖರೀದಿಸಲಿ ಅವುಗಳ ಗುಣಮಟ್ಟ ನೋಡಿ ನಾವುಗಳು ಖರೀದಿ ಮಾಡೋಣ. ಲೇಟಾಗಿ ಡೈರಿಗೆ ಹಾಲು ತೆಗೆದುಕೊಂಡು ಹೋದರೆ ನಾವುಗಳು ಹೊಣೆಯಲ್ಲ. ಕಲ್ಯಾಣ ಟ್ರಸ್ಟ್‌ನಲ್ಲಿರುವ ಹಣವನ್ನು ಮುಂದಿನ ದಿನಗಳಲ್ಲಿ ಹೆಚ್ಚು ಮಾಡೋಣ ಎಂದು ಹೇಳಿದರು.

ವ್ಯವಸ್ಥಾಪಕ ಸತೀಶ್, ಉಪ ವ್ಯವಸ್ಥಾಪಕ ಮುಕುಂದ, ಅಶ್ವಿನಿ, ರಂಜಿತ ಇವರುಗಳು ವೇದಿಕೆಯಲ್ಲಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ