Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಆಗ್ರಹಿಸಿ ಜೂನ್ 1 ರಂದು ಬೃಹತ್ ಪಾದಯಾತ್ರೆ

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ:
ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಪರಿಸರ ಮತ್ತು ಜನಜೀವನದ ಪುನಶ್ಚೇತನಕ್ಕೆ ಆಗ್ರಹಿಸಿ 'ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ', ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭೀಮಸಮುದ್ರ ರೈತ ಸಂಘದ ಆಶ್ರಯದಲ್ಲಿ ಜೂನ್ 01, 2026ರ ಸೋಮವಾರದಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

​ಅಂದು ಬೆಳಿಗ್ಗೆ 6 ಗಂಟೆಗೆ ಭೀಮಸಮುದ್ರದಿಂದ ಹೊರಡುವ ಪಾದಯಾತ್ರೆಯು ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಲಿದ್ದು, ಅಲ್ಲಿ ಪ್ರತಿಭಟನಾ 'ಚಲೋ' ಕಾರ್ಯಕ್ರಮ ನಡೆಯಲಿದೆ.

Advertisement

​ನಿರಂತರ 40 ವರ್ಷಗಳ ಪರಿಸರ ಹಾಗೂ ಕೃಷಿ ಹಾನಿ:
​ವರದಿಯ ಪ್ರಕಾರ, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆಯ ಗಣಿಬಾಧಿತ ಪ್ರದೇಶಗಳಾದ ಭೀಮಸಮುದ್ರ, ವಿ.ಪಾಳ್ಯ, ಬೆದರುಬೊಮ್ಮೇನಹಳ್ಳಿ, ಮೇಗಳಹಳ್ಳಿ, ಬೊಮ್ಮೇನಹಳ್ಳಿ, ಕಡ್ಲೇಗುದ್ದು, ಹಿರೇಗುಂಟನೂರು, ಹಳಿಯೂರು, ಮಾನಂಗಿ, ಸಿದ್ದಾಪುರ, ಮಾಳಪ್ಪನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ 40 ವರ್ಷಗಳಿಂದ ನಿರಂತರವಾಗಿ ಪರಿಸರ ನಾಶ, ಕೃಷಿ ಹಾನಿ, ರಸ್ತೆಗಳ ದುಸ್ಥಿತಿ ಹಾಗೂ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.

​ಅನುದಾನ ದುರ್ಬಳಕೆ ಆರೋಪ: ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಎಂಇಆರ್ *ಸಿ ಸಂಸ್ಥೆಯಿಂದ ಸುಮಾರು 500 ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನ ಬರುತ್ತಿದ್ದರೂ, ಅದು ಸರಿಯಾದ ಉದ್ದೇಶಕ್ಕೆ ಬಳಕೆಯಾಗದೆ ದುರ್ಬಳಕೆಯಾಗುತ್ತಿದೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

​ಹೊಸ ಗಣಿಗಾರಿಕೆ ಪರವಾನಗಿಗೆ ತೀವ್ರ ವಿರೋಧ:
​ಈಗಾಗಲೇ ಸಂಕಷ್ಟದಲ್ಲಿರುವ ಹಳ್ಳಿಗಳನ್ನು ಪುನಶ್ಚೇತನಗೊಳಿಸುವ ಬದಲು, ಸರ್ಕಾರವು ಭೀಮಸಮುದ್ರದ ಬಳಿ ಮತ್ತಷ್ಟು ಹೊಸ ಗಣಿ ಕಂಪನಿಗಳಿಗೆ ಪರವಾನಗಿ (ಲೈಸೆನ್ಸ್) ನೀಡಲು ಮುಂದಾಗಿದೆ. ಸುಮಾರು 500 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶವನ್ನು ವೇದಾಂತ ಲಿಮಿಟೆಡ್, ಜೆ.ಎಸ್.ಡಬ್ಲ್ಯೂ., ಪೂಜಾ ಮೈನ್ಸ್, ವಿಜಯದುರ್ಗ ಮೈನ್ಸ್, ಆರ್. ಪ್ರವೀಣ್‌ಚಂದ್ರ ಮೈನ್ಸ್ ಸೇರಿದಂತೆ ಇತರ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದ್ದು, ಇದರಿಂದ ಸ್ಥಳೀಯ ಜನ-ಜಾನುವಾರುಗಳು, ಪ್ರಾಣಿ-ಪಕ್ಷಿ ಸಂಕುಲಗಳು ಬದುಕುವುದು ದುಸ್ತರವಾಗಿದೆ. ಅರಣ್ಯ ನಾಶದಿಂದಾಗಿ ಭೀಮಸಮುದ್ರ ಕೆರೆಗೆ ಸೇರುವ ನೀರಿನ ಮಾರ್ಗಗಳು ಮುಚ್ಚಿಹೋಗಿದ್ದು, ಗುಡ್ಡದಿಂದ ಹರಿದುಬರುವ ನೀರು ರೈತರ ಜಮೀನು ನುಗ್ಗಿ ಭೂಸವಕಳಿ ಉಂಟಾಗುತ್ತಿದೆ.

​ಪ್ರಮುಖ 21 ಬೇಡಿಕೆಗಳ ಪಟ್ಟಿ:
​ಪ್ರತಿಭಟನಾಕಾರರು ಸರ್ಕಾರದ ಮುಂದೆ ಪ್ರಮುಖವಾಗಿ 21 ಅಂಶಗಳ ಬೇಡಿಕೆಯನ್ನು ಇಟ್ಟಿದ್ದಾರೆ.

​ಎಲ್ಲಾ ಗಣಿ ಗುತ್ತಿಗೆದಾರರಿಂದ ಬಾಕಿ ಇರುವ ವಾರಸುದಾರರ ವಸೂಲಾತಿ.​ಗ್ರಾಮೀಣ ರಸ್ತೆಗಳ ಮೂಲಸೌಕರ್ಯ ಹಾಗೂ ಸಾಗಾಣಿಕಾ ವೆಚ್ಚದ ಸಮರ್ಪಕ ಬಳಕೆ.
​ಗಣಿ ಬಾಧಿತ ಹಳ್ಳಿಗಳ ಜನರ ಆರೋಗ್ಯ ರಕ್ಷಣೆಗೆ ಶಾಶ್ವತ ಯೋಜನೆಗಳು.

​ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ.
​ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.
​ಬಡ ಮತ್ತು ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ.

​ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರುಕಟ್ಟೆ ವ್ಯವಸ್ಥೆ.​ಕೆ.ಎಸ್.ಆರ್.ಟಿ.ಸಿ. ಬಸ್ ಸೌಕರ್ಯಗಳ ಹೆಚ್ಚಳ.
​ಗಣಿಬಾಧಿತ ಎಲ್ಲಾ ಹಳ್ಳಿಗಳ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ.
​ಉಚಿತ ಉದ್ಯೋಗ ತರಬೇತಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ.​ಗಣಿಬಾಧಿತ ಜನರ ಹಕ್ಕುಗಳ ರಕ್ಷಣೆ.

​ಒಣಗುತ್ತಿರುವ ತೋಟಗಳಿಗೆ ತೋಟಗಾರಿಕಾ ಇಲಾಖೆಯಿಂದ ಪ್ರೋತ್ಸಾಹ. ಅರಣ್ಯ ಸಂರಕ್ಷಣೆ ಮತ್ತು ವಲಯಗಳ ಅಭಿವೃದ್ಧಿ.
​ಕೃಷಿ ಇಲಾಖೆಯಿಂದ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ.
​ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿ ಮತ್ತು ನೀರಾವರಿ ಸೌಲಭ್ಯ.
​ಗಣಿಗಾರಿಕೆಯಿಂದಾಗುವ ಧೂಳಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ.

​ಗೃಹ ಕೈಗಾರಿಕೆಗಳ ಪ್ರೋತ್ಸಾಹ ಮತ್ತು ತರಬೇತಿ.
​ಸ್ಥಳೀಯ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವಿಸ್ತರಣೆ.
​ಪೌಷ್ಟಿಕ ಆಹಾರ ಪೂರೈಕೆ ಮತ್ತು ತಾಯಿ-ಮಕ್ಕಳ ಆರೋಗ್ಯ ರಕ್ಷಣೆ.
​ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಡಿಜಿಟಲ್ ಸಾಕ್ಷರತೆ. ​ಗಣಿಬಾಧಿತ ಎಲ್ಲಾ ಹಳ್ಳಿಗಳ ಪರಿಸರ ಸಮತೋಲನ ಕಾಪಾಡುವುದು. 

​ಹೋರಾಟಗಾರರ ಕರೆ: ​"ನಮ್ಮ ಮುಂದಿನ ಪೀಳಿಗೆಗೆ ಜಲ, ಅರಣ್ಯ, ಖನಿಜ ಮತ್ತು ಬೀಜ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ," ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಆರ್. ಶಂಕರಮೂರ್ತಿ, ಕಾರ್ಯದರ್ಶಿ ಈಶ್ವರಪ್ಪ ಬಿ., ಖಜಾಂಚಿ ಬಿ. ಈರಣ್ಣ ಹಾಗೂ ಪ್ರಚಾರ ಸಮಿತಿಯ ಡಿ.ಎನ್. ಪ್ರಸನ್ನಕುಮಾರ್ ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಂ.ಪಾಳ್ಯ, ಭೀಮಸಮುದ್ರ, ಬೊಮ್ಮೇನಹಳ್ಳಿ, ಹಿರೇಗುಂಟನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು