Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕ ಬಾಲಕೃಷ್ಣ ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದಾರೆ: ಆರ್. ಅಶೋಕ್ ತೀಕ್ಷ್ಣ ವಾಗ್ದಾಳಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಗೆ ಮಂತ್ರಿ ಸ್ಥಾನ ಸಿಗದ ಹತಾಶೆಯಿಂದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ವಿರೋಧ ಪಕ್ಷದ ನಾಯಕರನ್ನು ನಿಂದಿಸಲು ಶುರು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

​ಸಾಜಿಕ ಜಾಲತಾಣಗಳಲ್ಲಿ ಶಾಸಕ ಬಾಲಕೃಷ್ಣ ವಿರುದ್ಧ ಕಿಡಿಕಾರಿರುವ ಆರ್. ಅಶೋಕ್, ಮಂತ್ರಿ ಪದವಿಗಾಗಿ ಕಾಂಗ್ರೆಸ್ ಶಾಸಕರು ನಡೆಸುತ್ತಿರುವ ಕಸರತ್ತನ್ನು ತಮಾಷೆ ಮಾಡಿದ್ದಾರೆ. ಅವರ ಹೇಳಿಕೆಯ ಪ್ರಮುಖಾಂಶಗಳು ಇಲ್ಲಿವೆ.

​ಮಂತ್ರಿ ಸ್ಥಾನಕ್ಕಾಗಿ ತೇಜೋವಧೆಯ ತಂತ್ರ!:
​ಕಳೆದ ಮೂರು ವರ್ಷಗಳಿಂದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ವಕಾಲತ್ತು ವಹಿಸಿ, ಮಾಧ್ಯಮಗಳ ಮುಂದೆ ನಿರಂತರವಾಗಿ ಹೇಳಿಕೆ ಕೊಟ್ಟು, ಒಂಟಿ ಕಣ್ಣಲ್ಲಿ ಕಣ್ಣೀರು ಸುರಿಸುತ್ತಿದ್ದ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಈಗ ನಿರಾಸೆಯಾಗಿದೆ. ಮಂತ್ರಿ ಸ್ಥಾನ ಸಿಗದ ಹತಾಶೆಯಿಂದ ಅವರು ವಿರೋಧ ಪಕ್ಷದ ನಾಯಕರನ್ನು ನಿಂದಿಸಲು ಶುರು ಮಾಡಿದ್ದಾರೆ. ನನ್ನನ್ನು ಬೈದರೆ, ತೇಜೋವಧೆ ಮಾಡಿದರೆ ಹೈಕಮಾಂಡ್ ಹಾಗೂ ನಾಯಕರ ಕಣ್ಣಿಗೆ ಬಿದ್ದು ಮಂತ್ರಿ ಸ್ಥಾನ ಸಿಗಬಹುದು ಎನ್ನುವ ಆಸೆಯಿಂದ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.

​'ನನ್ನನ್ನು ಬೈದಿದ್ದಕ್ಕಾದರೂ ಮಂತ್ರಿ ಸ್ಥಾನ ಸಿಗಲಿ':
​"
ಮೂರು ವರ್ಷಗಳ ನಿರಂತರ ಅಚಲ ಸ್ವಾಮಿನಿಷ್ಠೆಗಾಗಿ ಅಲ್ಲದಿದ್ದರೂ, ಕನಿಷ್ಠ ವಿರೋಧ ಪಕ್ಷದ ನಾಯಕನಾದ ನನ್ನನ್ನು ಬೈದಿದ್ದಕ್ಕಾದರೂ ಡಿ.ಕೆ.ಶಿವಕುಮಾರ್ ಅವರು ಬಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಕೊಡಿಸಲಿ ಎಂದು ಆಶಿಸುತ್ತೇನೆ." ಆರ್. ಅಶೋಕ್, ಪ್ರತಿಪಕ್ಷ ನಾಯಕ.

​ನಾಲಿಗೆಗೆ ಸದಾಚಾರ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ:
​ಮಂತ್ರಿ ಸ್ಥಾನ ಸಿಕ್ಕಮೇಲಾದರೂ ಆ ಮಾಗಡಿ ರಂಗನಾಥ ಸ್ವಾಮಿ ಅವರು ಶಾಸಕ ಬಾಲಕೃಷ್ಣ ಅವರಿಗೆ ಸದ್ಬುದ್ಧಿ ಕೊಡಲಿ. ಆಚಾರವಿಲ್ಲದ ಅವರ ನಾಲಿಗೆಗೆ ಸ್ವಲ್ಪ ಸದಾಚಾರ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಆರ್. ಅಶೋಕ್ ಅವರು ತಮ್ಮ ಹೇಳಿಕೆಯಲ್ಲಿ ಲೇವಡಿ ಮಾಡಿದ್ದಾರೆ.

​ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ಮಂತ್ರಿ ಸ್ಥಾನದ ಆಕಾಂಕ್ಷಿಗಳ ಆಕ್ರೋಶದ ನಡುವೆ, ಆರ್. ಅಶೋಕ್ ಅವರ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸೂಚನೆರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆಪೂರ್ವಭಾವಿ ಸಭೆ ಉದ್ದೇಶಿಸಿ ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿದರುಕರವೇ ಕನ್ನಡಿಗರ ಬಣದಿಂದ ದಿ.ಆರ್. ಜಿ ವೆಂಕಟಾಚಲಯ್ಯನವರಿಗೆ ನುಡಿ ನಮನಅಂಬೇಡ್ಕರ್, ಬಸವಣ್ಣನವರ ವಿಚಾರ ಧಾರೆಗಳು ಜೀವಂತ : ಮಾದಾರಶ್ರೀರಕ್ತವನ್ನು ಯಾವುದೇ ಲ್ಯಾಬ್ ನಲ್ಲಿ ತಯಾರಿಸಲು ಸಾಧ್ಯವಿಲ್ಲ107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಅಂತ್ಯ: ಕಚ್ಚಾ ತೈಲ ದರ ಭಾರೀ ಕುಸಿತ!ಹಿರಿಯ ಲೇಖಕಿ ಇಂದಿರಾ ಲಂಕೇಶ್ ಇನ್ನಿಲ್ಲ: ಲಂಕೇಶ್ ಪರಂಪರೆಯ ಪ್ರೇರಕ ಶಕ್ತಿ ಅಸ್ತಂಗತ"ಖಜಾನೆ ಖಾಲಿಯಾಗಿಲ್ಲ, ಗ್ಯಾರಂಟಿ ನಿಲ್ಲಲ್ಲ": ಹತಾಶ ಬಿಜೆಪಿಗೆ ಸಿದ್ದರಾಮಯ್ಯ ಖಡಕ್ ಕೌಂಟರ್!ಬಿಡದಿ ಟೌನ್‌ಶಿಪ್ ರಾಜಕೀಯ: ಹೆಚ್‌ಡಿಕೆ ವಿರುದ್ಧ ಡಿಕೆಶಿ ಕಿಡಿ; 'ಗೃಹಲಕ್ಷ್ಮಿ' ಫಲಾನುಭವಿಗಳಿಗೆ ಶೀಘ್ರದಲ್ಲೇ ಐಡಿ ಕಾರ್ಡ್!