Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಥಳೀಯ ಸ್ವಾಭಿಮಾನವಾ? ಅಥವಾ ಚುನಾವಣಾ ಕಾಲದ ದ್ವಂದ್ವ ರಾಜಕೀಯವಾ?

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಥಳೀಯ ಸ್ವಾಭಿಮಾನವಾ…? ಅಥವಾ ಚುನಾವಣಾ ಕಾಲದ ದ್ವಂದ್ವ ರಾಜಕೀಯವಾ…? — ಹಿರಿಯೂರಿನ ರಾಜಕೀಯದ ನಗ್ನ ಸತ್ಯ ಅನಾವರಣ!.....

ಹಿರಿಯೂರು ವಿಧಾನಸಭೆ ಉಪಚುನಾವಣೆಯ ಹೊತ್ತಿಗೆ ಕೆಲವರು ಸ್ಥಳೀಯ ಸ್ವಾಭಿಮಾನಎಂಬ ಘೋಷಣೆಯನ್ನು ಹೊತ್ತು ಬೀದಿಗಿಳಿದಿದ್ದಾರೆ. ಆದರೆ ಪ್ರಶ್ನೆ ಏನು ಅಂದ್ರೆ. ಈ ಸ್ವಾಭಿಮಾನ ಇಷ್ಟು ವರ್ಷ ಎಲ್ಲಿತ್ತು…? ಯಾವ ಮೋರಿಯಲ್ಲಿ ಬೀಗ ಹಾಕಿ ಇಟ್ಟಿದ್ದ್ರಿ…?

1989ರಲ್ಲಿ ಮೊದಲ ಬಾರಿಗೆ ಹಿರಿಯೂರು ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ದಿವಗಂತ ಹೆಚ್.ಕೆ ಕುಮಾರಸ್ವಾಮಿ ಅವರು  ಸ್ಪರ್ಧೆ ಮಾಡಿದಾಗ ನಿಮ್ಮ ಸ್ವಾಭಿಮಾನ ನಿದ್ರಿಸುತ್ತಿತ್ತಾ…?

1999ರಲ್ಲಿ ಲಂಬಾಣಿ ಸಮುದಾಯದ ವಕೀಲರಾದ ಕಾಶಿ ವಿಶ್ವನಾಥ್ ನಾಯಕ ಅವರನ್ನು ಅಭ್ಯರ್ಥಿ ಮಾಡಿದಾಗ ನಿಮ್ಮ ಎದೆ ಒಳಗಿನ ಸ್ಥಳೀಯ ರಕ್ತ ಕುದಿಯಲಿಲ್ಲವೇ…?

2004ರಲ್ಲಿ ಸ್ಥಳೀಯ ಪ್ರಬಲ ನಾಯಕರಾಗಿದ್ದ ಮಾದಿಗ ಜನಾಂಗದ ಜಿಎಸ್ ಮಂಜುನಾಥ್ ಹಾಗೂ ಬೋವಿ ಜನಾಂಗದ ಭೀಮಯ್ಯ ಅವರನ್ನು ಕಡೆಗಣಿಸಿ ಹೊರಗಿನವರಿಗೆ ಮಣೆ ಹಾಕಿದಾಗ, ನಿಮ್ಮ ಬಾಯಿಗೆ ಬೀಗ ಹಾಕಲಾಗಿತ್ತಾ…?

2008ರಲ್ಲಿ ಮರುವಿಂಗಡಣೆಯ ನಂತರ ಗೀತಾ ನದಿ ಗೌಡ, ಲಕ್ಷ್ಮಿಕಾಂತ್, ಯಶೋಧರ್ ಜಿಎಸ್ ಮಂಜುನಾಥ್ ಆರ್ ಮಂಜುನಾಥ್ ಸೇರಿದಂತೆ ಅನೇಕ ಅಭ್ಯರ್ಥಿಗಳು ಕಣಕ್ಕಿಳಿದಾಗ ಸ್ಥಳೀಯ ಸ್ವಾಭಿಮಾನಎಂಬ ಕೊಗು ಏಕೆ ಇರ್ಲಿಲ್ಲ ಧ್ವನಿ ಪೆಟ್ಟಿಗೆ ಸತ್ತೋಗಿತ್ತಾ.......????

2013ರಲ್ಲಿ ಸ್ಥಳೀಯರಾದ ಎಂ. ಜಯಣ್ಣ ಮತ್ತು ದಿವಂಗತ ಸಿದ್ದೇಶ್ ಯಾದವ್ ಇದ್ದಾಗ ಏಕೆ ಜನರು ಒಗ್ಗಟ್ಟಾಗಲಿಲ್ಲ…? 2018ರಲ್ಲಿ ಡಿ. ಯಶೋಧರ್ ಅವರನ್ನು ಏಕೆ ಗೆಲ್ಲಿಸಲಿಲ್ಲ…? 2023ರಲ್ಲಿ ರವೀಂದ್ರ ಅವರನ್ನು ಏಕೆ ಕೈಹಿಡಿಯಲಿಲ್ಲ…? ಆಗ ಮೌನವಾಗಿದ್ದವರು ಇಂದು ಮಾತ್ರ ಸ್ಥಳೀಯಎಂಬ ಹೆಸರಿನಲ್ಲಿ ಎದೆ ಬಡಿದುಕೊಳ್ಳುವುದು ರಾಜಕೀಯ ದ್ವಂದ್ವವಲ್ಲವೇ…?

ನಿಜ ಹೇಳಬೇಕಂದ್ರೆ, ಹಿರಿಯೂರಿನ ಜನರಿಗೆ ಹೊಸ ಮುಖ ಬೇಕಾ ಬೇಡವಾ ಅನ್ನೋದನ್ನು ಜನತೆಯೇ ತೀರ್ಮಾನ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಚುನಾವಣೆ ಬಂದಾಗ ಸ್ವಾಭಿಮಾನಎಂಬ ಭಾವನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದೇ ಜನರು ಕಳೆದ ಎರಡು-ಮೂರು ವರ್ಷಗಳಿಂದ ಹೊರಗಿನ ನಾಯಕರ ಜೊತೆ ವೇದಿಕೆ ಹಂಚಿಕೊಂಡರುಜಾತ್ರೆಗಳಲ್ಲಿ ಓಡಾಡಿದರುಮದುವೆಗಳಲ್ಲಿ ಫೋಟೋ ತೆಗೆಸಿಕೊಂಡರುರಾಜಕೀಯ ಸಭೆಗಳಲ್ಲಿ ಹೊಗಳಿಕೆ ಮಾತು ಆಡಿದರು
ಆಗ ಹೊರಗಿನ ಅಭ್ಯರ್ಥಿಗಳು ಒಳ್ಳೆಯವರಾಗಿದ್ದರು
, ಇಂದು ಮಾತ್ರ ಪ್ರಶ್ನೆ ಏಕೆ…? ಪ್ರಶ್ನೆ ಕೇಳಬೇಕಾದರೆ ಎಲ್ಲರಿಗೂ ಒಂದೇ ರೀತಿಯಾಗಿ ಕೇಳಬೇಕು.

ಇಂದೋ ಹೊರಗಡೆ ಅಭ್ಯರ್ಥಿಗಳನ್ನ ಟಾರ್ಗೆಟ್ ಮಾಡಿ ಸ್ವಾಭಿಮಾನದ ರಾಜಕೀಯ ಮಾಡುವುದರಲ್ಲಿ ಅರ್ಥವೇ ಏನಾದ್ರು ಅರ್ಥ ಇದ್ದೀಯ...?

ತಾವುಗಳೇಲ್ಲ ಹೊರಗಡೆಯವರನ್ನ ರೆಡ್ ಕಾರ್ಪೊರೇಟ್  ಹಾಕಿ ಸ್ವಾಗತ ಮಾಡಿ ಇವತ್ತು ತಮ್ಮಗಳ ಬುಡಕ್ಕೆ ಬಂದಾಗ ಸ್ಥಳೀಯ ಸ್ವಾಭಿಮಾನಿಗಳ ಎಂಬ ಕಿಚ್ಚು ಬಂತಾ....???

 ಅಂದು ನಿಮ್ಮ ಕಣ್ಣಿಗೆ ಸ್ಥಳೀಯ ಸ್ವಾಭಿಮಾನಿಗಳು ಯಾರು ಕಾಣಲಿಲ್ವಾ.....??? ಚಿತ್ರದುರ್ಗ ಲೋಕಸಭೆ ರಾಜಕೀಯ ಇತಿಹಾಸದ ಪುಟಗಳನ್ನು ಒಮ್ಮೆ ತೆರೆದು ನೋಡಿ, 1996 ಲೋಕಸಭೆ, 1999, 2014, 2019 ಮತ್ತು 2024…
ಎಷ್ಟೋ ಬಾರಿ ವಿವಿಧ ಪಕ್ಷಗಳು ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಆಗ ಯಾರೂ
ಸ್ಥಳೀಯ ಸ್ವಾಭಿಮಾನದ ಕೂಗು ಹಾಕಲಿಲ್ಲ.

ಹೀಗಿರುವಾಗ 2026ರ ಉಪಚುನಾವಣೆ ಮಾತ್ರ ಕೆಲವರ ಕಣ್ಣಿಗೆ ಸ್ವಾಭಿಮಾನದ ಯುದ್ಧವಾಗಿ ಕಾಣುವುದು ರಾಜಕೀಯದ ದೊಡ್ಡ ವ್ಯಂಗ್ಯ. ಜನತೆ ಈಗ ಜಾಗೃತರಾಗಿದ್ದಾರೆ.

ಯಾರು ನಿಜವಾದ ಹೋರಾಟಗಾರರುಯಾರು ಚುನಾವಣಾ ಕಾಲದ ಸ್ವಾಭಿಮಾನವಾದಿಗಳುಅನ್ನೋದಕ್ಕೆ ಉತ್ತರವನ್ನು ಈ ಬಾರಿ ಮತಪೆಟ್ಟಿಗೆಯೇ ನೀಡಲಿದೆ..!
ಲೇಖನ:ಶ್ರೀನಿವಾಸ್ ಕೆಟಿ, ಬೆಂಗಳೂರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿಯಪ್ಪನವರ ಅನುಭವಕ್ಕೆ ತಕ್ಕಂತೆ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಬ್ಲಾಕ್ ಕಾಂಗ್ರೆಸ್ ಆಗ್ರಹಸೂಪರ್ಡೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಧ ನಂದಕುಮಾರ್ರವರಿಗೆ ಅಭಿನಂದನಾ ಸಮಾರಂಭರಾಜಕೀಯ ಮುತ್ಸದ್ದಿ ಮುನಿಯಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಮಾದಾರ ಮಹಾಸಭಾ ಒತ್ತಾಯಸ್ಥಳೀಯ ಸ್ವಾಭಿಮಾನವಾ? ಅಥವಾ ಚುನಾವಣಾ ಕಾಲದ ದ್ವಂದ್ವ ರಾಜಕೀಯವಾ?ಹಿರಿಯೂರು ಜೆಡಿಎಸ್ ಭದ್ರ ಕೋಟೆಗೆ ಒಳ ಒಪ್ಪಂದದ ಗೆದ್ದಲು ಹಿಡಿದಿದೆಯೇ? ಕಾರ್ಯಕರ್ತರ ಕಣ್ಣೀರಿನ ಪ್ರಶ್ನೆ?ಜೂನ್ 3 ರಂದು ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಆಯ್ಕೆ; ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣವಚನರಾಜಭವನಕ್ಕೆ ಡಿ.ಕೆ.ಶಿ ಭೇಟಿ: ಸರ್ಕಾರ ರಚನೆಗೆ ಹಕ್ಕು ಮಂಡನೆ; ಜೂನ್ 3ಕ್ಕೆ ಪ್ರಮಾಣವಚನಕ್ಕೆ ಸಿದ್ಧತೆ!ಖಾಸಗಿ ಶಾಲೆಯ ಸಭಾಂಗಣದಲ್ಲಿ ಭೀಕರ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ!ಸಿಎಲ್‌ಪಿ ಸಭೆಗೂ ಮುನ್ನ ರಾಜ್ಯಪಾಲರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್: