ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಸವನಹಳ್ಳಿ ಗ್ರಾಮದ ಭಾರತಿ ಹಾಗೂ ರಮೇಶ್ ದಂಪತಿಯ ಪುತ್ರ, ಆರನಕಟ್ಟೆ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆರ್.ರತನ್ (13) ಗುರುವಾರ ಬೆಳಿಗ್ಗೆ (ದಿನಾಂಕ: 22-10-2026) ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಗುರುವಾರ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಕಸವನಹಳ್ಳಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ನೀರಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಆಟವಾಡುವ ವಯಸ್ಸಿನ ಮಗನನ್ನು ಕಳೆದುಕೊಂಡ ಭಾರತಿ ಹಾಗೂ ರಮೇಶ್ ದಂಪತಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಅಕಾಲಿಕ ಮರಣದಿಂದ ಕಸವನಹಳ್ಳಿ ಹಾಗೂ ಆರನಕಟ್ಟೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ, ದುಃಖತಪ್ತ ರಾಮಚಂದ್ರ ಕಸವನಹಳ್ಳಿ ಹಾಗೂ ಕುಟುಂಬದವರಲ್ಲಿ ತೀವ್ರ ಶೋಕ ಆವರಿಸಿದೆ.



