LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಲೆಮಾರಿ ಜನಾಂಗದವರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾಯಕನಹಟ್ಟಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಅಲೆಮಾರಿ
, ಅರೆಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದಲೂ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ವಾಸಿಸುತ್ತಿರುವ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಬುಡಕಟ್ಟು ಜನಾಂಗದವರು ಇಂದಿಗೂ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.

ಬೀದಿ ದೀಪ, ರಸ್ತೆ, ಕುಡಿಯುವ ನೀರು, ಚರಂಡಿ, ಶೌಚಾಲಯ ಯಾವುದೂ ಇಲ್ಲ. ನಿವೇಶನ, ವಸತಿಗಾಗಿ ಕಳೆದ ಹತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಆಳುವ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಈಗಲಾದರೂ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಕೋಶದ ಜಿಲ್ಲಾಧ್ಯಕ್ಷ ಕೆ.ಎಂ.ನಾಗರಾಜ್ ಎಚ್ಚರಿಸಿದ್ದಾರೆ.

ಜಿಲ್ಲಾ ದೌರ್ಜನ್ಯ ತಡೆ ಕಾಯ್ದೆ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‌ಕುಮಾರ್, ಜಿ.ಗಂಗಪ್ಪ, ರಂಗಪ್ಪ, ಮಾಂತಮ್ಮ, ರಂಗಮ್ಮ, ರಾಮಣ್ಣ, ಯಶೋಧಮ್ಮ, ದ್ಯಾಮವ್ವ ಕೆಂಚಪ್ಪ, ಸಂಗೀತ, ಚಿನ್ನಮ್ಮ, ತಿಪ್ಪಮ್ಮ, ಗಂಗಮ್ಮ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರಮಗಿರಿ ಕೆರೆ ಭಾಗದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಿನ ಸಮಸ್ಯೆ ಪರಿಹಾರಕ್ಕೆ ₹1.25 ಕೋಟಿ ಅನುದಾನ ಕೋರಿ ಮನವಿಪತ್ರ ಸಲ್ಲಿಸಿದ ಸುಹಾಸ್ ಸುಧಾಕರ್ಮುದ್ದನಾಯ್ಕನಪಾಳ್ಯ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ದಿಢೀರ್ ಭೇಟಿ ದೊಡ್ಡ ತುಮಕೂರು, ಕೊಡಿಗೇಹಳ್ಳಿ ಗ್ರಾಪಂಗೆ ಡಾ. ವಾಸಂತಿ ಅಮರ್ ದಿಢೀರ್ ಭೇಟಿಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಗ್ರೀನ್ ಸಿಗ್ನಲ್: ಕೇವಲ 4 ಗಂಟೆಗೆ ತಿರುಪತಿ ತಲುಪಲು ಸಾಧ್ಯ–ಸೋಮಣ್ಣಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ –10 ಮಂದಿಗೆ ಗಂಭೀರ ಗಾಯಬರ ಎದುರಿಸಲು ಸರ್ಕಾರ ಸಿದ್ಧ: ಡಿಸಿಎಂ ಜಿ. ಪರಮೇಶ್ವರ್ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಭವಿಷ್ಯದ ವಿಚಾರ, ಬಿಜೆಪಿಯವರು ವೈಫಲ್ಯ ಒಪ್ಪಿಕೊಳ್ಳಲಿ: ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹನೀಟ್‌ ಪತ್ರಿಕೆ ಸೋರಿಕೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ವಿಶೇಷ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯ– ಪ್ರಧಾನಿ ಮೋದಿ ಘೋಷಣೆಸೆಮಿಕಂಡಕ್ಟರ್ ವಲಯದಲ್ಲಿ ಕರ್ನಾಟಕದ ಬೃಹತ್ ಜಿಗಿತ': ಸಚಿವ ಎಂ.ಬಿ ಪಾಟೀಲ್'ದೆಹಲಿಯಲ್ಲಿ ಸಂವಿಧಾನದ ಪಾಠ, ರಾಜ್ಯದಲ್ಲಿ ಗೂಂಡಾಗಿರಿ: ಕಾಂಗ್ರೆಸ್‌ ಮೌನಕ್ಕೆ ಅಶೋಕ್ ತೀವ್ರ ತರಾಟೆ'