LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಿರುಮಗೊಂಡನಹಳ್ಳಿ ರೈಲ್ವೇ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರ ಆಗ್ರಹ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೊಕಿನ ತೂಬಗೆರೆ ಹೋಬಳಿ ತಿರುಮಗೊಂಡಹಳ್ಳಿಯ ರೈಲ್ವೆ ಗೇಟ್ ಪದೇ ಪದೇ ಮುಚ್ಚುವುದರಿಂದ ಸುಮಾರು ಘಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ
, ವಾಹನ ಸವಾರರು, ಶಾಲಾ ಮಕ್ಕಳು ಹಾಗೂ ತುರ್ತು ಸೇವೆಗಳ ವಾಹನಗಳಿಗೆ ತೀವ್ರ ತೊಂದರೆಯಾಗಿದೆ. ಇದಕ್ಕೆ  ದೀರ್ಘಕಾಲದ ಪರಿಹಾರವಾಗಿ ರೈಲ್ವೆ ಮೇಲ್ಸೇತುವೆ  ನಿರ್ಮಿಸದಿರುವುದು. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜವಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.

 ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿಯ ಶ್ರೀಕ್ಷೇತ್ರ  ಘಾಟಿ ಸುಬ್ರಮಣ್ಯ ದೇವಾಲಯವು ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ದಾರ್ಮಿಕ ಹಾಗು ನಾಗಾರಾಧನೆಯ ಪ್ರಮುಖ ಕ್ಷೇತ್ರವು ಹೌದು.

ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.   ದೇವಸ್ಥಾನಕ್ಕೆ ಹೋಗಲು ರೈಲ್ವೆ ಗೇಟ್ ಪದೇ ಪದೇ ಮುಚ್ಚುವುದರಿಂದ ಸಮಸ್ಯೆಯಾಗಿದೆ. ದೂರದ ಊರಿನಿಂದ ಬಂದು ದೇವರ ದರ್ಶನ ಮುಗಿಸಿ ನಮ್ಮ ಕೆಲಸ ಕಾರ್ಯಗಳಿಗೆ ತುರ್ತಾಗಿ ಹೋಗಲು ರೈಲ್ವೆ ಗೇಟ್ ಮುಚ್ಚಿದಾಗ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಕಿಲೋ ಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ವಾಹನ ಸವಾರರು, ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ತುರ್ತು ಸೇವೆಗಳಿಗೆ ಅಡ್ಡಿ-
ರೈಲ್ವೆ ಗೇಟ್ ಮುಚ್ಚುವುದರಿಂದ ಆಂಬ್ಯುಲೆನ್ಸ್‌ ನಂತಹ ತುರ್ತು ವಾಹನಗಳು ಸಿಲುಕಿ
, ಗರ್ಭಿಣಿಯರು ಮತ್ತು ವೃದ್ಧರಿಗೆ ಆಸ್ಪತ್ರೆ ತಲುಪಲು ತೀವ್ರ ತಡವಾಗುವುದು.ತುರ್ತು ಸೇವೆಗಳಿಗೆ  ತುಂಬಾ ತೊಂದರೆ ಯಾಗುತ್ತಿದ್ದು

ಗೇಟ್ ತೆರೆಯುವವರೆಗೆ ಕಾಯಬೇಕಾಗುತ್ತದೆ.ಪರಿಸ್ಥಿತಿ ಎದುರಾಗಿದೆ

*ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅಡ್ಡಿ,
ರೈಲ್ವೆ ಗೇಟ್ ಪದೇ ಪದೇ ಮುಚ್ಚುವುದರಿಂದ ತರಕಾರಿ ಸಾಗಾಟ ತಡವಾಗಿ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ. ಸಮಯಕ್ಕೆ ಸರಿಯಾಗಿ ಮಾರುಕಟ್ಟೆ ತಲುಪದ ತರಕಾರಿಗಳು ಹಾಳಾಗುತ್ತವೆ. ಈ ಸಮಸ್ಯೆಗೆ ಪರಿಹಾರವಾಗಿ ರೈಲ್ವೆ ಮೇಲ್ಸೇತುವೆ  ನಿರ್ಮಾಣ ಅಗತ್ಯವಾಗಿದೆ.

ಭಕ್ತರಿಗೂ  ರೈತರಿಗೂ  ತುರ್ತು ಸೇವೆಗಳಿಗೂ  ರೈಲ್ವೆ  ಗೇಟ್ ಮುಚ್ಚುವುದರಿಂದ ತೊಂದರೆ ಯಾಗುತ್ತಿದೆ ಎಂದು ಸಂಬಂದ ಪಟ್ಟ ಅಧಿಕಾರಿಗಳಿಗೂ ಹಾಗು ಸಂಸದರಿಗೂ ತಿರುಮಗೊಂಡನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿ ಎಂದು ಸಾರ್ವಜನಿಕರಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ರೈಲ್ವೆ ಗೇಟ್ ಮುಚ್ಚುವುದರಿಂದ ಸಾರ್ವಜನಿಕರಿಗೆ ನಿತ್ಯವೂ ಸಾಕಷ್ಟು ತೊಂದರೆಗಳಾಗುತ್ತವೆ. ನಿರ್ದಿಷ್ಟವಾಗಿ ದೊಡ್ಡ ಪಟ್ಟಣಗಳು ​​ಮತ್ತು ನಗರ ಪ್ರದೇಶಗಳಲ್ಲಿ ಇರುವ ಕಾರ್ಖಾನೆ ಹಾಗೂ ಕಛೇರಿಗಳಿಗೆ ತೆರಳಲು ಹಾಗು  ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
 ಹಾಡೋನಹಳ್ಳಿ  ಮುನೇಗೌಡ, ಕಟ್ಟಡ  ಗುತ್ತಿಗೆದಾರ.

ದೇವಸ್ಥಾನ, ಮಠಗಳು ಅಥವಾ ಧಾರ್ಮಿಕ ಕೇಂದ್ರಗಳಿಗೆ ಹೋಗುವ ಮಾರ್ಗಗಳಲ್ಲಿ ರೈಲ್ವೆ ಗೇಟ್ ಘಂಟೆ ಗಟ್ಟಲೆ ಮುಚ್ಚುವುದರಿಂದ ಭಕ್ತರು ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಇದರಿಂದ ದಟ್ಟಣೆ ಉಂಟಾಗಿ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತದೆ. ರೈಲ್ವೆ ಇಲಾಖೆಯು ರೈಲುಗಳ ಸುರಕ್ಷತೆಗಾಗಿ ಗೇಟ್‌ಗಳನ್ನು ಮುಚ್ಚುವುದು ಅನಿವಾರ್ಯವಾದರೂ, ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಸ್ಥಳಗಳಲ್ಲಿ ಮೇಲ್ಸೇತುವೆ  ಅಥವಾ ಸುರಂಗ ಮಾರ್ಗ  ನಿರ್ಮಿಸುವುದು ಅತ್ಯಂತ ಅಗತ್ಯವಾಗಿದೆ.
ರವಿಕುಮಾರ್ ಭಕ್ತ

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರಿನ ನಿಸ್ವಾರ್ಥ ಸೇವಕ – ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಅವರ ದೂರದೃಷ್ಟಿಗೆ ಒಲಿದ ಜಲಭಾಗ್ಯಹಿರಿಯೂರು ಬರದ ನಾಡಿಗೆ ಜಲಸಂಜೀವಿನಿ: ಸಿಎಂ ಡಿ.ಕೆ ಶಿವಕುಮಾರ್ ಅವರ ಭರವಸೆಗೆ ಒಲಿದ 244 ಕೋಟಿಯ ಬೃಹತ್ ಜಲ ಯೋಜನೆ!ಕೋಟಿ ಕೋಟಿ ಅನುದಾನದ ಶಂಕುಸ್ಥಾಪನೆಗೆ 'ರಾಜಕಾಲುವೆ' ಕಂಟಕ: ಶೀಲೆಯಾಗದ ಚಿತ್ರದುರ್ಗದ ಹೈಟೆಕ್ ಬಸ್ ನಿಲ್ದಾಣದ ಕನಸು!ವರುಣನ ಕೃಪೆಗಾಗಿ ಇಪ್ಪೆಕಣಿವೆ ಭೂತರಾಯ ಸ್ವಾಮಿಗೆ ಕಾತ್ರಿಕೇನಹಳ್ಳಿ ರೈತರಿಂದ ಪೂಜೆಜಿಲ್ಲಾವಾರು ಜಿಡಿಪಿ ಪ್ರಗತಿಗೆ ವೇಗ: ನೀತಿ ಆಯೋಗದ ಸದಸ್ಯರೊಂದಿಗೆ ಸಿಎಂ ಸುದೀರ್ಘ ಚರ್ಚೆ– ಸಚಿವ ಪ್ರಿಯಾಂಕ್ ಖರ್ಗೆರಾಜ್ಯದ ಜಿಲ್ಲಾ ಜಿಡಿಪಿ ವೃದ್ಧಿಗೆ 'ಲೀಪ್' ಯೋಜನೆ: ಸಿಎಂ ಡಿ ಕೆ ಶಿವಕುಮಾರ್ ಜತೆ ನೀತಿ ಆಯೋಗದ ಸದಸ್ಯ ಕೆ.ವಿ. ರಾಜು ಚರ್ಚೆಕಾಂಗ್ರೆಸ್‌ನದ್ದು ಕೇವಲ 'ಕ್ಯಾಮೆರಾ ರಾಜಕಾರಣ', ಪ್ರಚಾರಕ್ಕಾಗಿ ಪ್ರತಿಭಟನೆ: ವಿಜಯೇಂದ್ರ ವಾಗ್ದಾಳಿಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಡಿ.ಕೆ. ಶಿವಕುಮಾರ್ಬೆಂಗ‌ಳೂರು ಟೆಕ್ ಸಮ್ಮಿಟ್ 2026: 'ಎಐ & ಬಿಯಾಂಡ್' ಥೀಮ್ ಅನಾವರಣಗೊಳಿಸಿದ ಡಿ.ಕೆ. ಶಿವಕುಮಾರ್ಕರಾರುಗಳಿಂದ ಶೇ. 75ರಷ್ಟು ಹೂಡಿಕೆ ಸಾಕಾರಗೊಳಿಸುವುದು ನಮ್ಮ ಗುರಿ – ಸಚಿವ ಎಂ.ಬಿ. ಪಾಟೀಲ್