Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಹುಲ್ ಗಾಂಧಿ ಪರಿಸರ ಪ್ರೇಮ ಕೇವಲ ಬೂಟಾಟಿಕೆ ಎಂದು ಆರ್. ಅಶೋಕ್ ತೀವ್ರ ವಾಗ್ದಾಳಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 "ಬಿಡದಿಯಲ್ಲಿ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಹಾಗೂ ಲಕ್ಷಾಂತರ ಮರಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಿಯಲ್ ಎಸ್ಟೇಟ್ ಮಾಫಿಯಾಗೆ ಬಲಿಯಾಗುತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಅವರ ಪರಿಸರ ಹೋರಾಟ ಕೇವಲ ಕರ್ನಾಟಕದ ಗಡಿಯವರೆಗೆ ಮಾತ್ರವೇ?" ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಪ್ರಶ್ನಿಸಿದ್ದಾರೆ.

​ಬಿಡದಿ ಭಾಗದಲ್ಲಿ ಉದ್ದೇಶಿತ 'AI ಟೌನ್‌ಶಿಪ್' ಯೋಜನೆಗಾಗಿ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಆಕ್ರೋಶ ಹೊರಹಾಕಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಪರಿಸರ ನಾಶ ಹಾಗೂ ಭೂಗಳ್ಳತನದ ಗಂಭೀರ ಆರೋಪ ಮಾಡಿದ್ದಾರೆ. ಆರ್. ಅಶೋಕ್ ಅವರು ಎತ್ತಿರುವ ಪ್ರಮುಖ ಅಂಶಗಳು ಇಲ್ಲಿವೆ.

ರಾಹುಲ್ ಗಾಂಧಿಯವರ ದ್ವಂದ್ವ ನಿಲುವು:
​ದೇಶದಾದ್ಯಂತ ಪುಕ್ಕಟೆ ಪ್ರಚಾರಕ್ಕಾಗಿ ಕ್ಷಣಾರ್ಧದಲ್ಲಿ ಪರಿಸರ ಹೋರಾಟಗಾರರಾಗಿ ಮಾರ್ಪಡುವ ರಾಹುಲ್ ಗಾಂಧಿ ಅವರು, ಮುಂಬೈನ ಆರೇ ಕಾಲೋನಿಯಲ್ಲಿ ಮರಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಾರೆ. ಗ್ರೇಟ್ ನಿಕೋಬಾರ್ ಯೋಜನೆಗೆ ನೈಸರ್ಗಿಕ ಪರಂಪರೆಯ ವಿರುದ್ಧದ ಮಹಾಪರಾಧಎಂದು ಬಿರುದು ನೀಡುತ್ತಾರೆ. ಆದರೆ, ಕರ್ನಾಟಕದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದ್ದಾಗ 2 ಲಕ್ಷ ಮರಗಳನ್ನು ಕಡಿಯಲು ಮುಂದಾಗಿದ್ದರೂ ಅವರ ಪರಿಸರ ಪ್ರೇಮ ಎಲ್ಲಿ ಮಾಯವಾಗಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಇದು AI ಟೌನ್‌ಶಿಪ್ ಅಲ್ಲ, ‘ರಿಯಲ್ ಎಸ್ಟೇಟ್ ಟೌನ್‌ಶಿಪ್’!:
​ಬೆಂಗಳೂರು ನಗರದ ಹಿತ್ತಲಲ್ಲೇ 9 ಗ್ರಾಮಗಳಲ್ಲಿ ಸುಮಾರು ಎರಡು ಲಕ್ಷ ಮರಗಳನ್ನು ಕಡಿಯಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದು ತಂತ್ರಜ್ಞಾನದ AI ಟೌನ್‌ಶಿಪ್ ಅಲ್ಲ, ಬದಲಿಗೆ ಕಾಂಗ್ರೆಸ್‌ನ ರಿಯಲ್ ಎಸ್ಟೇಟ್ ಟೌನ್‌ಶಿಪ್ ಎಂದು ಅವರು ಲೇವಡಿ ಮಾಡಿದ್ದಾರೆ.

ಪರಿಸರ ಹತ್ಯೆಯ ಆಘಾತಕಾರಿ ಅಂಕಿ-ಅಂಶಗಳು:
​ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಹಸಿರು ಸಂಪೂರ್ಣ ನಾಶವಾಗುತ್ತಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದ್ದು, ನಾಶವಾಗಲಿರುವ ಮರಗಳ ವಿವರಗಳನ್ನು ನೀಡಿದ್ದಾರೆ.

​೮೩,೫೩೬ ಅಡಿಕೆ ಮರಗಳು: ಕೊಡಲಿಗೆ ಬಲಿ. ​೮೭,೯೦೩ ತೆಂಗಿನ ಮರಗಳು: ಸಂಪೂರ್ಣ ನಾಶ. ​೧೨,೫೫೦ ಮಾವಿನ ಮರಗಳು ನೆಲಸಮ.

​ಸಾವಿರಾರು ಎಕರೆ ಫಲವತ್ತಾದ ಕೃಷಿಭೂಮಿ:
ವಶಪಡಿಸಿಕೊಳ್ಳುವ ಯೋಜನೆ.​"ರಾಗಿ, ಭತ್ತ, ತೊಗರಿ, ಕಡಲೆ, ಜೋಳ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿರುವ ರೈತರ ಬದುಕನ್ನೇ ಕಸಿದುಕೊಳ್ಳುವ ಯತ್ನ ನಡೆಯುತ್ತಿದೆ. ಇದು ಬೆಂಗಳೂರಿನ ಹಸಿರು ಶ್ವಾಸಕೋಶದ ಮೇಲಿನ ನೇರ ದಾಳಿ ಮತ್ತು ರೈತರ ಬದುಕಿಗೆ ಮಾಡುತ್ತಿರುವ ದ್ರೋಹ."
ಆರ್. ಅಶೋಕ್, ಪ್ರತಿಪಕ್ಷ ನಾಯಕ.

​ರೈತರ ಪರವಾಗಿ ಬಿಜೆಪಿ ಹೋರಾಟದ ಎಚ್ಚರಿಕೆ:
​ಕಾಂಗ್ರೆಸ್‌ಗೆ ಪರಿಸರ ಸಂರಕ್ಷಣೆ ಎಂಬುದು ಸಿದ್ಧಾಂತವೂ ಅಲ್ಲ, ಬದ್ಧತೆಯೂ ಅಲ್ಲ, ಅದು ಕೇವಲ ರಾಜಕೀಯ ಬೂಟಾಟಿಕೆ ಮತ್ತು ಮೊಸಳೆ ಕಣ್ಣೀರು ಎಂದು ಟೀಕಿಸಿರುವ ಆರ್. ಅಶೋಕ್, ಬಿಡದಿಯ ರೈತರ ಜೊತೆ ಬಿಜೆಪಿ ದೃಢವಾಗಿ ನಿಲ್ಲಲಿದೆ ಎಂದಿದ್ದಾರೆ. ಈ "ರಿಯಲ್ ಎಸ್ಟೇಟ್ ಸರ್ಕಾರ" ಕರ್ನಾಟಕದ ಪರಿಸರವನ್ನು ಹಾಗೂ ರೈತರ ಬದುಕನ್ನು ಬಲಿಕೊಡಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದ್ದು, ರಾಹುಲ್ ಗಾಂಧಿ ಅವರು ಕರ್ನಾಟಕದ ಜನತೆಗೆ ಹಾಗೂ ಬಿಡದಿಯ ರೈತರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸೂಚನೆರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆಪೂರ್ವಭಾವಿ ಸಭೆ ಉದ್ದೇಶಿಸಿ ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿದರುಕರವೇ ಕನ್ನಡಿಗರ ಬಣದಿಂದ ದಿ.ಆರ್. ಜಿ ವೆಂಕಟಾಚಲಯ್ಯನವರಿಗೆ ನುಡಿ ನಮನಅಂಬೇಡ್ಕರ್, ಬಸವಣ್ಣನವರ ವಿಚಾರ ಧಾರೆಗಳು ಜೀವಂತ : ಮಾದಾರಶ್ರೀರಕ್ತವನ್ನು ಯಾವುದೇ ಲ್ಯಾಬ್ ನಲ್ಲಿ ತಯಾರಿಸಲು ಸಾಧ್ಯವಿಲ್ಲ107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಅಂತ್ಯ: ಕಚ್ಚಾ ತೈಲ ದರ ಭಾರೀ ಕುಸಿತ!ಹಿರಿಯ ಲೇಖಕಿ ಇಂದಿರಾ ಲಂಕೇಶ್ ಇನ್ನಿಲ್ಲ: ಲಂಕೇಶ್ ಪರಂಪರೆಯ ಪ್ರೇರಕ ಶಕ್ತಿ ಅಸ್ತಂಗತ"ಖಜಾನೆ ಖಾಲಿಯಾಗಿಲ್ಲ, ಗ್ಯಾರಂಟಿ ನಿಲ್ಲಲ್ಲ": ಹತಾಶ ಬಿಜೆಪಿಗೆ ಸಿದ್ದರಾಮಯ್ಯ ಖಡಕ್ ಕೌಂಟರ್!ಬಿಡದಿ ಟೌನ್‌ಶಿಪ್ ರಾಜಕೀಯ: ಹೆಚ್‌ಡಿಕೆ ವಿರುದ್ಧ ಡಿಕೆಶಿ ಕಿಡಿ; 'ಗೃಹಲಕ್ಷ್ಮಿ' ಫಲಾನುಭವಿಗಳಿಗೆ ಶೀಘ್ರದಲ್ಲೇ ಐಡಿ ಕಾರ್ಡ್!