Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೂನ್-2026 ಮಾಹೆಯ ಪಡಿತರ ಬಿಡುಗಡೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅನ್ನಭಾಗ್ಯ ಯೋಜನೆಯಡಿ ಮೇ ಮತ್ತು ಜೂನ್-2026ರ ಎರಡು ಮಾಹೆಗಳ ಆಹಾರಧಾನ್ಯವನ್ನು ಜೂನ್-2026ರ ಮಾಹೆಯಲ್ಲಿ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ.  ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರಧಾನ್ಯವನ್ನು ಬಯೋಮೆಟ್ರಿಕ್ (ಬೆರಳುಚ್ಚು) ನೀಡಿ ಪಡೆದುಕೊಳ್ಳಬಹುದು.

ಮೇ-2026 ಮತ್ತು ಜೂನ್-2026ರ ಎರಡು ಮಾಹೆಗಳ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 04 ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ, 05 ಸದಸ್ಯರಿಗೆ 30 ಕೆ.ಜಿ, 06 ಸದಸ್ಯರಿಗೆ 50 ಕೆ.ಜಿ,  07 ಸದಸ್ಯರಿಗೆ 70 ಕೆ.ಜಿ., 08 ಸದಸ್ಯರಿಗೆ 90 ಕೆ.ಜಿ , 09 ಸದಸ್ಯರಿಗೆ 110 ಕೆ.ಜಿ, 10 ಸದಸ್ಯರಿಗೆ 130 ಕೆ.ಜಿ ಅಕ್ಕಿ ಉಚಿತ ಪಡೆದುಕೊಳ್ಳಬೇಕು. 10 ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.

01 ರಿಂದ 03 ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗಳಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ.ಯಂತೆ ಈಗಾಗಲೇ ಎನ್.ಎಫ್.ಎಸ್.ಎ ಯೋಜನೆಯಡಿ ಮೇ-2026ರಲ್ಲಿ 35 ಕೆ.ಜಿ ಮತ್ತು ಜೂನ್-2026ರಲ್ಲಿ 35 ಕೆ.ಜಿ ಸೇರಿ ಒಟ್ಟು 70 ಕೆ.ಜಿ ಅಕ್ಕಿ ಹಾಗೂ ರಾಗಿ  ಆಹಾರಧಾನ್ಯಗಳನ್ನು ಮೇ-2026ರ ಮಾಹೆಯಲ್ಲೇ ವಿತರಣೆ ಮಾಡಲಾಗಿರುತ್ತದೆ. ಆದ್ದರಿಂದ ಇವರಿಗೆ ಜೂನ್-2026ರ ಮಾಹೆಯಲ್ಲಿ ಹಂಚಿಕೆ ಇರುವುದಿಲ್ಲ.

ಕೇಂದ್ರ ಮತ್ತು ರಾಜ್ಯ ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ  ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ದೊರೆಯಲಿದೆ. ಯಾವುದೇ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಅಥವಾ ಮಾಲೀಕರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದಲ್ಲಿ ಅಥವಾ ಹಣ ಕೇಳಿದಲ್ಲಿ ರಾಜ್ಯ ಸಹಾಯವಾಣಿ ಸಂಖ್ಯೆ 1967 ಹಾಗೂ ಜಂಟಿ ನಿರ್ದೇಶಕರ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಆಹಾರ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ ತಿಳಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ದುರಂತ: ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಭಾರಿ ಪರಿಹಾರ ಘೋಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಮುಂಗಾರು ಆಗಮನ.. ಚುರುಕು ಗೊಂಡ ಕೃಷಿ ಚಟುವಟಿಕೆನಿವೇದಿತಾ ಇಂಗ್ಲೀಷ್ ಶಾಲಾ ಮಕ್ಕಳಿಗೆ ಪರಿಸರದ ಪಾಠಬಿಜೆಪಿಯಿಂದ ಅಚ್ಚರಿಯ ನಡೆ: ದೇವೇಗೌಡರಿಗೆ ತಪ್ಪಿದ ರಾಜ್ಯಸಭೆ ಟಿಕೆಟ್‌; ಜೆಡಿಎಸ್‌ಗೆ ತಣ್ಣೀರೆರಚಿದ ಹೈಕಮಾಂಡ್!ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್‌ನಿರಾಕರಣೆ: ಕಾಂಗ್ರೆಸ್‌ವಾಗ್ದಾಳಿ!ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ: ಒಗ್ಗಟ್ಟಿನ ಕರೆ ನೀಡಿದ ಖರ್ಗೆ; ಡಿಎಂಕೆ, ಎಎಪಿ ಗೈರು!ಕೊನೆ ಕ್ಷಣದಲ್ಲಿ ರೋಚಕ ತಿರುವು ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದ ರಾಜ್ದೇವೇಗೌಡರ ಸ್ಪರ್ಧೆ ಕುರಿತು ಚರ್ಚೆ ಆಗಿರಲಿಲ್ಲ; ಕಾರ್ಯಕರ್ತರಿಗೆ ಮನ್ನಣೆ ಬಿ.ವೈ. ವಿಜಯೇಂದ್ರ ಹರ್ಷ  "ನಾನು ಸೋತಿದ್ದಕ್ಕೆ ಸಿದ್ದರಾಮಯ್ಯ ಸಿಎಂ ಆದರು, ಈ ಬಾರಿಯೂ ಅವಕಾಶ ತಪ್ಪಿತು": ಜಿ.ಪರಮೇಶ್ವರ್5 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ನಿಯಂತ್ರಕಿ!