ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಅಯ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರವಾಸಿ ಮಂದಿರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ನಡೆದ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಯಲ್ಲಿ ತಾಲ್ಲೂಕು ಉಪಾಧ್ಯಕ್ಷರಾಗಿ ವರದನಹಳ್ಳಿ ಮುನೀಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆಂಪಣ್ಣ ರವರನ್ನು ಅಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ಪಿ ವೆಂಕಟೇಶ್ ಮಾತನಾಡಿ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಅಂಬೇಡ್ಕರ್ ರವರ ಆಶಯದಂತೆ ಮೂಲಭೂತ ಸೌಲಭ್ಯ ಹಾಗು ಜಮೀನು ರಹಿತರಿಗೆ ಜಮೀನು ನೀಡಿ ಅವರುಗಳನ್ನು ಸಮಾಜ ಮುಖ್ಯ ಭೂಮಿಕೆಗೆ ತಂದು ಸಮಾನತೆಯ ಬದುಕು ನೀಡಿವಲ್ಲಿ ಈಗಿನ ಸರ್ಕಾರಗಳು ವಿಫಲವಾಗಿವೆ.
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಆಮಿಷ ಒಡ್ಡಿ ಮತಗಳನ್ನು ಕಬಳಿಸಿ ತದನಂತರ ಅವರನ್ನು ಮೂಲೆಗುಂಪು ಮಾಡಿ ಬಡವವನನ್ನು ತುಳಿದು ಶ್ರೀಮಂತ ಇನ್ನಷ್ಟು ಬಲಾಡ್ಯ ನಾಗಿರುವ ವ್ಯವಸ್ಥೆ ಈಗಿನ ರಾಜಕಾರಣದಲ್ಲಿ ನಡೆಯುತ್ತಿದೆ. ಅದರಿಂದ ನಾವುಗಳು ನಮ್ಮ ಹಕ್ಕನ್ನು ಪಡೆಯುವಲ್ಲಿ ಸನ್ನದ್ಧರಾಗಿ ಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರುಗಳಾದ ಪಿ ಮಹದೇವ್, ರಾಜಕುಮಾರ, ಮಂಜುನಾಥ್, ಜಿಲ್ಲಾ ಮಹಿಳಾ ಕಾರ್ಯದರ್ಶಿ ಹೇಮಾ ಚಕ್ರಪಾಣಿ, ಜಿಲ್ಲಾ ಕಾರ್ಯದರ್ಶಿ ಚಿಕ್ಕ ರಂಗಣ್ಣ, ತಾಲ್ಲೂಕು ಅಧ್ಯಕ್ಷ ನಂಜೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಎಂ ದಾಳಪ್ಪ, ಕಾರ್ಯದರ್ಶಿ ಕೆ. ವೆಂಕಟೇಶ್, ನಗರ ಅಧ್ಯಕ್ಷ ರವಿಕುಮಾರ್, ಹೊಸಕೋಟೆ ಶ್ರೀನಿವಾಸ್, ಮುನಿಯಪ್ಪ ಇನ್ನೂ ಅನೇಕ ಮುಖಂಡರು ಹಾಜರಿದ್ದರು.


