LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 29 ರಿಂದಲೇ ರಾಜ್ಯಾದ್ಯಂತ ಶಾಲೆಗಳು ಆರಂಭ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆಯು ಅತ್ಯಂತ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂಬರುವ
2026-27ನೇ ಶೈಕ್ಷಣಿಕ ಸಾಲಿನ ಅಧಿಕೃತ ಕ್ಯಾಲೆಂಡರ್ ಅನ್ನು ಸರ್ಕಾರ ಪ್ರಕಟಿಸಿದ್ದು, ಮೇ 29 ರಿಂದಲೇ ರಾಜ್ಯಾದ್ಯಂತ ಶಾಲೆಗಳು ಗಂಟೆ ಬಾರಿಸಲಿವೆ. 

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಒಟ್ಟಿಗೆ ಪುನರಾರಂಭಗೊಳ್ಳಲಿವೆ.

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಈ ಬಾರಿ 18 ದಿನಗಳ ದಸರಾ ರಜೆ!
ಹೊಸ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ವಿದ್ಯಾರ್ಥಿಗಳಿಗೆ ಹಬ್ಬದ ಭರ್ಜರಿ ಉಡುಗೊರೆ ಸಿಕ್ಕಿದೆ. ಈ ವರ್ಷದ ದಸರಾ ಹಬ್ಬಕ್ಕೆ ಸತತ
18 ದಿನಗಳ ಸುದೀರ್ಘ ರಜೆಯನ್ನು ಘೋಷಿಸಲಾಗಿದೆ.

ಮೊದಲ ಶೈಕ್ಷಣಿಕ ಅವಧಿ: ಮೇ 29 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ. ದಸರಾ ರಜೆ ಆರಂಭ: ಅಕ್ಟೋಬರ್ 3 ರಿಂದಲೇ ದಸರಾ ರಜೆಗಳು ಆರಂಭವಾಗಲಿದ್ದು, ಅಕ್ಟೋಬರ್ 20 ರವರೆಗೆ (18 ದಿನಗಳು) ಮುಂದುವರಿಯಲಿವೆ.

ಅಕ್ಟೋಬರ್ 22 ರಿಂದ 2ನೇ ಅವಧಿ ಪ್ರರಾಂಭ
ದಸರಾ ರಜೆಯ ಸಡಗರ ಮುಗಿದ ತಕ್ಷಣ
, ಅಕ್ಟೋಬರ್ 22 ರಿಂದ ಎರಡನೇ ಶೈಕ್ಷಣಿಕ ಅವಧಿ ಆರಂಭವಾಗಲಿದ್ದು, ಇದು ಏಪ್ರಿಲ್ 2027 ರವರೆಗೆ ಮುಂದುವರಿಯಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ವಾರ್ಷಿಕ ಪರೀಕ್ಷೆಗಳೊಂದಿಗೆ ಈ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳಲಿದೆ.

ಶೈಕ್ಷಣಿಕ ವರ್ಷದ ಲೆಕ್ಕಾಚಾರ:
ಒಟ್ಟು ಕೆಲಸದ ದಿನಗಳು: ವರ್ಷದ
365 ದಿನಗಳ ಪೈಕಿ ಒಟ್ಟು 245 ದಿನಗಳು ಶಾಲೆಗಳು ಕಾರ್ಯನಿರ್ವಹಿಸಲಿವೆ.
ಬೋಧನಾ ದಿನಗಳು:
245 ದಿನಗಳಲ್ಲಿ 181 ದಿನಗಳನ್ನು ಸಂಪೂರ್ಣವಾಗಿ ಬೋಧನೆಗಾಗಿ ಮೀಸಲಿಡಲಾಗಿದೆ.

ಇತರ ಚಟುವಟಿಕೆಗಳು: ಉಳಿದ ದಿನಗಳನ್ನು ಪರೀಕ್ಷೆ, ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ.

ಪ್ರವೇಶಾತಿ ಗಡುವು: ರಾಜ್ಯದ ಎಲ್ಲಾ ಶಾಲೆಗಳು ಮುಂಬರುವ ಜೂನ್ 30 ರ ಒಳಗಾಗಿ ತಮ್ಮ ಶಾಲೆಯ ಎಲ್ಲಾ ದಾಖಲಾತಿ ಅಥವಾ ಪ್ರವೇಶ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಡ್ರಾಪ್‌ ಔಟ್ಸ್ ತಡೆಗೆ ವಿಶೇಷ ಆಂದೋಲನ
ಇದೇ ವೇಳೆ ಶಿಕ್ಷಣ ಇಲಾಖೆಯು ಮತ್ತೊಂದು ಶ್ಲಾಘನೀಯ ಹೆಜ್ಜೆ ಇಟ್ಟಿದ್ದು
, ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಯ ಮುಖ್ಯವಾಹಿನಿಗೆ ತರಲು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.

6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಈ ಆಂದೋಲನ ಜಾರಿಗೆ ಬರಲಿದೆ. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ, ಅವರಿಗೆ ಕೌನ್ಸಿಲಿಂಗ್ ನಡೆಸಿ ಮರು ದಾಖಲಾತಿ ಮಾಡಿಸುವ ಮೂಲಕ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರಿನ ನಿಸ್ವಾರ್ಥ ಸೇವಕ – ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಅವರ ದೂರದೃಷ್ಟಿಗೆ ಒಲಿದ ಜಲಭಾಗ್ಯಹಿರಿಯೂರು ಬರದ ನಾಡಿಗೆ ಜಲಸಂಜೀವಿನಿ: ಸಿಎಂ ಡಿ.ಕೆ ಶಿವಕುಮಾರ್ ಅವರ ಭರವಸೆಗೆ ಒಲಿದ 244 ಕೋಟಿಯ ಬೃಹತ್ ಜಲ ಯೋಜನೆ!ಕೋಟಿ ಕೋಟಿ ಅನುದಾನದ ಶಂಕುಸ್ಥಾಪನೆಗೆ 'ರಾಜಕಾಲುವೆ' ಕಂಟಕ: ಶೀಲೆಯಾಗದ ಚಿತ್ರದುರ್ಗದ ಹೈಟೆಕ್ ಬಸ್ ನಿಲ್ದಾಣದ ಕನಸು!ವರುಣನ ಕೃಪೆಗಾಗಿ ಇಪ್ಪೆಕಣಿವೆ ಭೂತರಾಯ ಸ್ವಾಮಿಗೆ ಕಾತ್ರಿಕೇನಹಳ್ಳಿ ರೈತರಿಂದ ಪೂಜೆಜಿಲ್ಲಾವಾರು ಜಿಡಿಪಿ ಪ್ರಗತಿಗೆ ವೇಗ: ನೀತಿ ಆಯೋಗದ ಸದಸ್ಯರೊಂದಿಗೆ ಸಿಎಂ ಸುದೀರ್ಘ ಚರ್ಚೆ– ಸಚಿವ ಪ್ರಿಯಾಂಕ್ ಖರ್ಗೆರಾಜ್ಯದ ಜಿಲ್ಲಾ ಜಿಡಿಪಿ ವೃದ್ಧಿಗೆ 'ಲೀಪ್' ಯೋಜನೆ: ಸಿಎಂ ಡಿ ಕೆ ಶಿವಕುಮಾರ್ ಜತೆ ನೀತಿ ಆಯೋಗದ ಸದಸ್ಯ ಕೆ.ವಿ. ರಾಜು ಚರ್ಚೆಕಾಂಗ್ರೆಸ್‌ನದ್ದು ಕೇವಲ 'ಕ್ಯಾಮೆರಾ ರಾಜಕಾರಣ', ಪ್ರಚಾರಕ್ಕಾಗಿ ಪ್ರತಿಭಟನೆ: ವಿಜಯೇಂದ್ರ ವಾಗ್ದಾಳಿಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಡಿ.ಕೆ. ಶಿವಕುಮಾರ್ಬೆಂಗ‌ಳೂರು ಟೆಕ್ ಸಮ್ಮಿಟ್ 2026: 'ಎಐ & ಬಿಯಾಂಡ್' ಥೀಮ್ ಅನಾವರಣಗೊಳಿಸಿದ ಡಿ.ಕೆ. ಶಿವಕುಮಾರ್ಕರಾರುಗಳಿಂದ ಶೇ. 75ರಷ್ಟು ಹೂಡಿಕೆ ಸಾಕಾರಗೊಳಿಸುವುದು ನಮ್ಮ ಗುರಿ – ಸಚಿವ ಎಂ.ಬಿ. ಪಾಟೀಲ್