Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಿಎಂ, ಗೃಹ ಸಚಿವರ ದೆಹಲಿ ಪ್ರವಾಸದ ಹಿಂದೆ 'ಸ್ಟಿಂಗ್' ಆಪರೇಷನ್ ಗುಟ್ಟು; ಹೆಚ್.ಡಿ.ಕುಮಾರಸ್ವಾಮಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸಂಚಲನ ಮೂಡಿಸಿರುವ
'ಸ್ಟಿಂಗ್' ಆಪರೇಷನ್ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಲು ಹಾಗೂ ಪರಿಸ್ಥಿತಿ ವಿವರಣೆಗಾಗಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ದೆಹಲಿಗೆ ತೆರಳಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೆ.ಪಿ. ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ಹಲವು ಪ್ರಮುಖ ವಿಚಾರಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಹಾಗೂ ಗೃಹಸಚಿವರ ದೆಹಲಿ ಭೇಟಿ ಹಿಂದಿನ ರಹಸ್ಯ
ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಲು ಸಿಎಂ ಮತ್ತು ಗೃಹಸಚಿವರು ದೆಹಲಿಗೆ ಹೋಗಿದ್ದರು ಎಂದು ಕುಮಾರಸ್ವಾಮಿ ದೂರಿದ್ದಾರೆ.

 "ಅಚಾನಕ್ಕಾಗಿ ನಾನು ಹೋದಾಗ ವೇಣುಗೋಪಾಲ್ ಮನೆಗೆ ಗೃಹ ಸಚಿವರು ಬಂದರು ಎಂದು ಸಿಎಂ ಹೇಳಿದ್ದಾರೆ. ಆದರೆ ಇದು ರಾಜಕೀಯವಾಗಿ ಹಗುರವಾಗಿ ತೆಗೆದುಕೊಳ್ಳುವ ವಿಷಯವಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಹಾಳು ಮಾಡುವ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು, "ಸಿದ್ದರಾಮಯ್ಯ ಅವರನ್ನು ಬಿಟ್ಟರೆ ವೋಟು ತರುವವರು ಯಾರಿದ್ದಾರೆ? ಅಂಥವರನ್ನು ಮನೆಯಲ್ಲಿ ಕೂರಿಸಿದ್ದೀರಿ. ಶಿವಕುಮಾರ್ ಹತ್ತಿರ ಇ1ರೋರ ಫೋನ್ ಡಿಟೇಲ್ಸ್ ತೆಗೆದುಕೊಂಡರೆ ಸತ್ಯ ಹೊರಬರುತ್ತದೆ" ಎಂದು ಕಿಡಿಕಾರಿದರು. ಖಾಸಗಿ ವಾಹಿನಿಯ ವ್ಯಕ್ತಿಯೊಬ್ಬರಿಗೆ ಆತಿಥ್ಯ ಹಾಗೂ ರಕ್ಷಣೆ ನೀಡಲಾಗುತ್ತಿದೆ ಎಂದೂ ಆರೋಪಿಸಿದರು.

ಬಿಡದಿ ಯೋಜನೆ ಹಾಗೂ ನೈಸ್ ಸಂಸ್ಥೆ ವಿರುದ್ಧ ವಾಗ್ದಾಳಿ
ಬಿಡದಿ ಯೋಜನೆಯ ಹೆಸರಿನಲ್ಲಿ ರೈತರ ಜಮೀನು ಕಸಿದುಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದ ಹೆಚ್‌ಡಿಕೆ
, "ನೈಸ್ ಯೋಜನೆಯಲ್ಲಿ ಆಗಿರುವ ಮೋಸದ ಬಗ್ಗೆ ನಾನು ಮಾತನಾಡಿದರೆ, ಕಂಪನಿಯ ವ್ಯಕ್ತಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ನಾನು ವಿರೋಧಿಸುತ್ತಿದ್ದೇನೆ ಎಂದು ಸಿಎಂ ತಿರುಚಿ ಮಾತನಾಡುತ್ತಾರೆ. ಜಾತಿಯ ಹೆಸರನ್ನು ಏಕೆ ಬಳಸಿಕೊಳ್ಳುತ್ತೀರಿ?" ಎಂದು ಪ್ರಶ್ನಿಸಿದರು.

ನೈಸ್ ಸಂಸ್ಥೆ ಮಾಡಿದ ಹೂಡಿಕೆಗಿಂತ ಹಲವು ಪಟ್ಟು ಅಧಿಕ ಲಾಭ ಪಡೆದಿದೆ ಎಂದ ಅವರು, "ಫಾಸ್ಟ್ ಟ್ಯಾಗ್ ಬರುವುದಕ್ಕಿಂತ ಮುಂಚೆ 60 ರಿಂದ 70 ಕೋಟಿ ಬರುತ್ತಿದ್ದ ಆದಾಯ, ಈಗ 700 ಕೋಟಿ ರೂ.ಗೆ ಏರಿಕೆಯಾಗಿದೆ. ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಲಾಗಿದೆ" ಎಂದು ಆರೋಪಿಸಿದರು.

ಮಂಡ್ಯ ಅಭಿವೃದ್ಧಿ ಹಾಗೂ ಬರ ಪರಿಹಾರ ವಿಳಂಬ
ಮಂಡ್ಯದಲ್ಲಿ ಎಆರ್‌ಎಐ ಕೇಂದ್ರ ಸ್ಥಾಪನೆಗೆ ತಾವು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ ಅವರು
, "ಮಂಡ್ಯದಲ್ಲಿ ಟೆಸ್ಟಿಂಗ್ ಸೆಂಟರ್ ಬಂದರೆ ಹಲವು ಕೈಗಾರಿಕೆಗಳು ಬರಲಿವೆ. ಆದರೆ ಸಿಎಂ ಬಜೆಟ್‌ನಲ್ಲಿ 100 ಎಕರೆ ಜಮೀನು ಘೋಷಣೆ ಮಾಡಿದ್ದರೂ ಇಲ್ಲಿಯವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕರ್ನಾಟಕಕ್ಕೆ ಬರುವುದಕ್ಕೆ ಯಾರು ತಯಾರಿಲ್ಲ, 974 ಅರ್ಜಿಗಳಿಗೆ ಕ್ಲಿಯರೆನ್ಸ್ ಕೊಟ್ಟಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, 20,164 ಕೋಟಿ ಪರಿಹಾರಕ್ಕಾಗಿ ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಡಿಸಿಎಂ ಪತ್ರ ಬರೆದಿರುವ ಬಗ್ಗೆ ವ್ಯಂಗ್ಯವಾಡಿದ ಅವರು, "ಕೇವಲ ಪತ್ರ ಬರೆದು ಕೂತರೆ ಆಗುತ್ತದೆಯೇ? ಸಮಯ ಕೇಳಿ ನೇರವಾಗಿ ಸಂಪರ್ಕಿಸಬೇಕು. ಇದುವರೆಗೂ ರೈತರಿಗೆ ಮೊದಲ ಕಂತಿನ ಪರಿಹಾರ ತಲುಪಿಲ್ಲ. ಭಾರತ್ ಜೋಡೋ ಹೆಸರಲ್ಲಿ ಸಾವಿರಾರು ಕೋಟಿ ಬಿಡುಗಡೆ ಮಾಡಿಕೊಳ್ಳುವ ಸರ್ಕಾರಕ್ಕೆ ರೈತರ ಕಷ್ಟ ಕಾಣುವುದಿಲ್ಲವೇ?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾವೇರಿ ನೀರು ಹಾಗೂ ಇತರ ಪ್ರಮುಖ ವಿಚಾರಗಳು
ರಾಜ್ಯದ ನೀರಿನ ಹಂಚಿಕೆ ಬಗ್ಗೆ ಮಾತನಾಡಿ
, "ಇಲ್ಲಿ ತಮಿಳುನಾಡಿಗೆ, ಅಲ್ಲಿ ಕೃಷ್ಣಾ ನದಿ ನೀರು ತೆಲಂಗಾಣಕ್ಕೆ ಹೋಗುತ್ತಿದೆ. ನೈಸ್ ಕಂಪನಿಗೆ ಕನಿಕರ ತೋರಿಸುವ ಸರ್ಕಾರ, ಗುಳೆ ಹೋಗುತ್ತಿರುವ ರೈತರ ಬಗ್ಗೆ ಮೊದಲು ಗಮನ ಹರಿಸಲಿ" ಎಂದರು. ದಸರಾ ಮಹೋತ್ಸವದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳನ್ನು ಪ್ರಸ್ತಾಪಿಸಿ ಪೊಲೀಸರ ವಿರುದ್ಧವೂ ವಾಗ್ದಾಳಿ ನಡೆಸಿದರು.

ವಿಜಯದಶಮಿ ಗಡುವಿನ ಕುರಿತ ಪ್ರಶ್ನೆಗೆ ಉತ್ತರಿಸುತ್ತ, "ಈಗ ನಡೆಯುತ್ತಿರುವುದೇ ಸಾಕಾಗಿದೆ. ಇದನ್ನೇ ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಸರ್ಕಾರ ಉರುಳಿದರೆ ಏನು ಮಾಡುವುದು?" ಎಂದು ಸೂಚ್ಯವಾಗಿ ತಿಳಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅ. 24 ರಂದು ರೈತರಿಗೆ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಪಾಲಿಸಿ ಪ್ರತಿಯ ವಿತರಣೆಅರದೇಶನಹಳ್ಳಿ ಶ್ರೀ ಬಗಳಮುಖಿ ದೇವಾಲಯದಲ್ಲಿ ಸಂಭ್ರಮದ ದಸರಾ ಆಚರಣೆಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 95.94 ಮತದಾನಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಶೇ.66.73 ಮತದಾನಭೀಕರ ದರೋಡೆ ನಡೆಸಿದ್ದ ಅಪ್ರಾಪ್ತರು ಸೇರಿ ಐವರ ಬಂಧನ; 10 ಜನರ ವಿರುದ್ಧ ಎಫ್‌ಐಆರ್!ಸಿಎಂ, ಗೃಹ ಸಚಿವರ ದೆಹಲಿ ಪ್ರವಾಸದ ಹಿಂದೆ 'ಸ್ಟಿಂಗ್' ಆಪರೇಷನ್ ಗುಟ್ಟು; ಹೆಚ್.ಡಿ.ಕುಮಾರಸ್ವಾಮಿಸಿದ್ದರಾಮಯ್ಯ ವಿರುದ್ಧದ ಪೆನ್‌ಡ್ರೈವ್ ರಾಜಕೀಯ ಖಂಡನೀಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ವೋಟ್‌ಸೆಳೆಯೋ ನಾಯಕರಿಲ್ಲ: ಹೆಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿಹೈಕೋರ್ಟ್‌ನಿಂದ ಕರ್ನಾಟಕ ಪೊಲೀಸರಿಗೆ ಖಡಕ್ ಎಚ್ಚರಿಕೆ:ಬೊಮ್ಮಸಂದ್ರ - ಹೊಸೂರು ಮೆಟ್ರೋ ಯೋಜನೆಗೆ ಭಾರಿ ವಿರೋಧ