Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಶಯ ಕಥೆ ಭಾಗ-4: ಕುಮಾರ್ ಬಡಪ್ಪ

Advertisement
ಚಂದ್ರವಳ್ಳಿ ನ್ಯೂಸ್, ​ ಚಿತ್ರದುರ್ಗ:
ಸಂಶಯ ಕಥೆ ಭಾಗ-4: ಕುಮಾರ್ ಬಡಪ್ಪ
ಓಬಕ್ಕನಿಗೆ ಗಂಡನ ದುಡುಕುತನ ಎಂತಾದ್ದೂ ಅಂತ ಮೊದಲೇ ಗೊತ್ತಿತ್ತು, ಕದಕ್ಕೆ ಅಡ್ಡವಾದವಳೇ ಕೈ ಮುಗಿದು ನಿಂತ್ಳು.

ನನ್ನ ಮಾತು ಕೇಳು,ದುಡುಕಿ ತಪ್ಪು ಮಾಡ್ಕೊಂಡು ಗಲಾಟೆ ಮಾಡ್ಕೊಂಡ್ರೆ, ಪೊಲೀಸಿನವ್ರು,ಕೇಸು, ಕೋರ್ಟು ಅಂತ ಬೇಕಾ ನಮ್ಗೆ,ದಿನಗೂಲಿ ಮಾಡ್ಕೊಂಡು ಉಪವಾಸವಿದ್ರೂ ಮಾನಕ್ಕೆ ಬದುಕ್ತಿರೋ ಜನ ನಾವು , ಯಾರು ಏನಾದ್ರೂ ಅಂದ್ಕೊಳ್ಲಿ, ನಾವು ಸರಿ ಅದೀವಲ್ಲ, ನೀ ಹೋಗಬ್ಯಾಡ ಕೈ ಮುಗಿತೀನಿ.

ಏ ಕತ್ತೇ ಸರಿಯೇ, ಅವ್ನ ಹೆಂಡ್ತಿಗೆ ಸೂಳೆ ಅಂತೀನಿ ಕೇಳ್ತಾನ ಅವ್ನು. ಬಂದ ಕೋಪ ನೆತ್ತಿಗೇರಿದಂತಾಗಿ, ಓಬವ್ವನ್ನ ಕದದಿಂದ ಒಳ ತಳ್ಳಿದ್ದೇ ತಿಪ್ಪಯ್ಯ ಸರಾಯಿ ಅಂಗಡಿ ಕಡೆ ಬಿರುಸಾಗಿ ನಡೆಯತೊಡಗಿದ.

   ಓಬಮ್ಮ ಪಾಲಮ್ಮ ಒಂದೇ ಓಣಿಯ ಅನೋನ್ಯ ಗೆಳತಿಯರು, ತಿಪ್ಪಯ್ಯ ಗಾದ್ರಯ್ಯನಿಗೂ ಅಂತದ್ದೇ ಗೆಳೆತನ, ದುಡಿಮೆಯಲ್ಲೂ ಜೊತೆಗಾರ್ರೇ, ರಾತ್ರಿ ಡಬ್ಬದ  ಅಂಗಡಿಗೆ ಹೋಗಿ ಸಾರಾಯಿ ಪಾಕೆಟ್ ಹರಿದು ಮತ್ತೇರಿ ಮನೆ ಸೇರುವವರೆಗೂ ಇವರ ಮಾತು ಮುರಿಯುತ್ತಿರಲಿಲ್ಲ.  ಬ್ಯಾಸಿಗೆ ಬಂತೂ ಅಂತಂದ್ರೆ ರಸ್ತೆಮಾಚಿಕೆರೆಯ ಕೆರೆ ಅಂಗಳದಾಗೆ ಒಪ್ಪಂದವಾಗಿ,ಎಂಡೆ ಹೊಯ್ದು ಬಟ್ಟಿ ಸುಡೋದಂದ್ರೇ ಬಹಳ ಅಚ್ಚುಮೆಚ್ಚಿನ ಕೆಲಸ ಇವರದ್ದು .

ಜೊತೆಯ ಕೂಲಿಯವರಿಗೆಲ್ಲಾ ಹಂಚಿ ಇವರ ಭಾಗ ತೆಗೆದ್ರೂ ಒಂದಷ್ಟು ಹೆಚ್ಚಿಗೆ ದುಡ್ಡು ಉಳಿಯುತ್ತಿದ್ದುದು, ಇವರಿಬ್ಬರಿಗೆ ಮೇಸ್ತ್ರಿಯ ಅನುಭವವನ್ನೂ ಕಟ್ಟಿಕೊಟ್ಟಿತ್ತು.

ಏದು,ಉಡ,ಮೊಲ,ಆಲುವೆ,ಕೌಜ,ಪುರ್ಲೆಗಳ ಸಾರು ಪಾಲವ್ವನ ಮೆಚ್ಚಿಗೆಯಲ್ಲೋ,ಇಲ್ಲಾ ಓಬವ್ವನ ರುಚಿಯಲ್ಲೋ ಮುಗಿದುಬಿಡುತ್ತಿದ್ವು.

ಇಬ್ಬರ ಸಂಬಂಧಿಕರು ಅಲ್ಲಿಯೇ ವಾಸವಾಗಿದ್ದರೂ ಇವರ ಗೆಳೆತನದ ಮುಂದೆ ಅವರ್ಯಾರು ಸುಳಿಯುತ್ತಿರಲಿಲ್ಲ.

ಓಬವ್ವ ತಿಪ್ಪಯ್ಯನಿಗೆ ಮಕ್ಕಳಿಲ್ಲದಿದ್ರೂ ನಾಲ್ಕನೇ ಕ್ಲಾಸು ಓದೋ ಗಾದ್ರಯ್ಯನ ಮಗನೇ ಇವರಿಗೆ ಅಚ್ಚುಮೆಚ್ಚು. ಮನೆ ಅಡಿಗೆಯಿಂದ ಅಂಗಡಿ ತಿಂಡಿವರೆಗೂ ಬೋಸನಿಗೆ ಎಲ್ಲವೂ ದೊರಕುತ್ತಿದ್ವು.

ಮಗುವಿಗೆ ಇಷ್ಟೋಂದು  ಆಸೆ ಪಡುವ ಈ ಜೋಡಿಗೆ ಮಕ್ಕಳಾಗುವ ಸೂಚನೆಯೇ ಇದ್ದಂತಿರಲಿಲ್ಲ. ಮದುವೆಯಾಗಿ ಆರು ವರ್ಷವಾದರೂ ಓಬವ್ವೆಗೆ, ತಿಂಗಳ ನೀರಂತೂ ಒಮ್ಮೆಯೂ ನಿಂತಿರಲಿಲ್ಲ,ಜಗಳೂರು ಡಾಕ್ಟರ್ ಕಡೆ ಮೂರ್ನಾಲ್ಕು ಬಾರಿ ಹೋಗಿ ಬಂದಾಗಿತ್ತು.ಗೋಪಗೊಂಡವ್ವನಳ್ಳಿ ಸಿದ್ದಪ್ಪನ ಸಮಾದಿಗೆ ಮೂರು ವರ್ಷದಿಂದ ಹರಕೆ ಕಟ್ಟಿ,ಮೊಹರಂ ಹಬ್ಬದಾಗೆ ತಾಭತ್ ಹೊತ್ತು ಪೀರಲು ದೇವ್ರ ಕೆಂಡಾನೂ ತುಳಿದಾಗಿತ್ತು, ಮಾರವ್ವನ ಗುಡಿಗೂ ಮೀಸಲು ಕಟ್ಟಿ,ಮನೆದ್ಯಾವರ ಕಾಟ ಅಂತ ಕಂಚೋಬಳಸ್ವಾಮಿಗೆ ಗುಗ್ಗುರಿ ಸೇವೆಯೂ ನಡೆದಿತ್ತು.



ಆದ್ರೂವೇ ಬಯಕೆಗಳೊಂದೂ.. ಬೀಜಗಟ್ಟಿರಲಿಲ್ಲ,ಎಷ್ಟೋ ಬಾರಿ ಇಬ್ಬರಲ್ಲಿಯೇ ಚರ್ಚೆಯಾಗಿ ಇನ್ನು ಮಕ್ಕಳಾಗುವ ಮಾತು ದೇವರಿಗೇ ಬಿಟ್ಟಿದ್ದು ಅಂತ ಕೈ ಮುಗಿದಿದ್ರು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.       ನಾಳೆಗೆ.......

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ