Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾದಾರ ಮಹಾ ಸಭಾದ ನೂತನ ಅಧ್ಯಕ್ಷರಾಗಿ ತಳವಾರ ನಾಗರಾಜ್ ಆಯ್ಕೆ

Advertisement
Advertisement

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಮಾದಾರ ಮಹಾಸಭಾದ ದೊಡ್ಡಬಳ್ಳಾಪುರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ತಳವಾರ ನಾಗರಾಜ್ ಆಯ್ಕೆಯಾಗಿದ್ದಾರೆಂದು ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್. ಎಂ. ಸುಬ್ಬರಾಜು ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾದಾರ ಮಹಾಸಭಾದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಸುಬ್ಬರಾಜು ಮಾತನಾಡಿ ಸ್ವತಂತ್ರ ಬಂದು 75ವರ್ಷಗಳಾದರು ಮಾದಿಗ ಸಮುದಾಯ ಇನ್ನೂ ಹಿಂದುಳಿದ ಸಮುದಾಯವಾಗಿದೆ. ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ, ರಾಜಕೀಯ, ಆರ್ಥಿಕವಾಗಿ ಮುನ್ನಡೆಯಲು ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬಹು ಮುಖ್ಯವಾಗಿದೆ. ಹಾಗಾಗಿ ಸಮುದಾಯದ ಸಂಘಟನೆಗಾಗಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಯಿಂದ ಹೆಚ್ಚಾಗಿ ನೋಂದಣಿ ಮಾಡಿಸಬೇಕಿದೆ. ಹೆಚ್ಚಾಗಿ ಸಂಘಟನೆಯದಾಗ ಮಾತ್ರ ನಮ್ಮ ಸಮುದಾಯ ಎಲ್ಲಾ ರಂಗಗಳಲ್ಲಿಯೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ನೂತನ ಅಧ್ಯಕ್ಷ ತಳವಾರ ನಾಗರಾಜ್ ಮಾತನಾಡಿ ತಾಲೂಕು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿರುವುದು ನನಗೆ ಸಂತಸ ತಂದಿದೆ. ತಾಲೂಕಿನಲ್ಲಿ ಜಿಲ್ಲಾಧ್ಯಕ್ಷರ ಆದೇಶದಂತೆ ಹೆಚ್ಚು ನೋಂದಣಿ ಮಾಡಿಸಿ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲೂಕಿನ ಸಮಾಜದ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರನ್ನು ಒಗ್ಗೂಡಿಸಿ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದಾರ ಮಹಾಸಭಾದ ತತ್ವಾದರ್ಶಗಳಿಗೆ ದುಡಿಯಲು ಬದ್ಧನಾಗಿರುತ್ತೇನೆ. ಮುಂಬರುವ ದಿನಗಳಲ್ಲಿ ಸಮುದಾಯಕ್ಕೆ ಎಲ್ಲಾ ರಂಗಗಳಲ್ಲೂ ಮೀಸಲಾತಿ ಸಿಗಬೇಕಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಸಮುದಾಯದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕು ಮಹಾಸಭಾದ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷ ತಳವಾರ ನಾಗರಾಜ್, ಉಪಾಧ್ಯಕ್ಷ ಟಿ. ಡಿ. ಮುನಿಯಪ್ಪ, ಖಜಾಂಚಿ ಲಕ್ಕಪ್ಪ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಸುಬ್ಬರಾಜು ಘೋಷಿಸಿದರು.

ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ರಾಮಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಬಚ್ಚಳ್ಳಿ ನಾಗರಾಜು,ಜಿಲ್ಲಾ ಮುಖಂಡರಾದ ಶಿವಣ್ಣ, ದೊಡ್ಡ ತುಮಕೂರು ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಕರ್ತರ ಬೇಡಿಕೆ ಬಗ್ಗೆ ಚರ್ಚೆ, ಸಿಎಂ ಡಿಕೆಶಿ ಭೇಟಿ ಮಾಡಿದ ಕೆಯುಡಬ್ಲೂಜೆ ಅಧ್ಯಕ್ಷ ತಗಡೂರುಮಕ್ಕಳ ಅಪರಾಧಗಳು; ಕಳೆದುಹೋಗುತ್ತಿರುವ ಮುಗ್ಧತೆಎಲ್ಲಾ ಶಕ್ತಿಯೂ ನಮ್ಮೊಳಗೆ ಇದೆ ಅದರಲ್ಲಿ ವಿಶ್ವಾಸವಿರಬೇಕು:ಮಾತಾಜೀ ತ್ಯಾಗಮಯೀಗ್ಯಾರಂಟಿ ನೆಪದಲ್ಲಿ ಬೊಕ್ಕಸಕ್ಕೆ ಕನ್ನ, ತಕ್ಷಣ ಶ್ವೇತಪತ್ರ ಹೊರಡಿಸಿ: ಗೃಹಲಕ್ಷ್ಮಿ ಹಗರಣದ ವಿರುದ್ಧ ಜೆಡಿಎಸ್ ಆಕ್ರೋಶಬಿಡದಿ ಟೌನ್‌ಶಿಪ್ ಸಭೆ: ಸ್ಥಳ ಮತ್ತು ದಿನಾಂಕ ಬದಲಾಯಿಸಲು ಡಿ.ಕೆ. ಶಿವಕುಮಾರ್‌ಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಕ್ರೀಡಾ ಸಂಸ್ಥೆಗಳಿಗೆ 11.65 ಕೋಟಿ ವಿಶೇಷ ಅನುದಾನ, ಒಲಿಂಪಿಕ್ ಪದಕ ವಿಜೇತರಿಗೆ ಕೋಟ್ಯಂತರ ರೂ. ಬಹುಮಾನ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್"ಕ್ಯಾಮೆರಾ ಹಿಂದೆ ಲೂಟಿ, ಮುಂದೆ ನಾಟಕದ ಚಾಟಿ": ಡಿಕೆಶಿ-ಕೃಷ್ಣ ಬೈರೇಗೌಡ ಶೀತಲ ಸಮರ ಬಯಲಿಗೆಳೆದ ಆರ್. ಅಶೋಕ್ಗೃಹಲಕ್ಷ್ಮಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ. ರವಿ ಗಂಭೀರ ಆರೋಪ6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ನೇರ ದಾಖಲಾತಿ