Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಮಿಳುನಾಡು ರಾಜಕೀಯ ಹೈಡ್ರಾಮಾ ಅಂತ್ಯ: ಇಂದು ವಿಜಯ್ ಸಿಎಂ ಆಗಿ ಪ್ರಮಾಣವಚನ?

Advertisement
Advertisement

ಚಂದ್ರವಳ್ಳಿ ನ್ಯೂಸ್, ಚೆನ್ನೈ:
ತಮಿಳುನಾಡಿನಲ್ಲಿ ಕಳೆದ ಐದು ದಿನಗಳಿಂದ ಮನೆಮಾಡಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆಬಿದ್ದಿದೆ. ನಟ ವಿಜಯ್ ನೇತೃತ್ವದ
'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಮೈತ್ರಿಕೂಟಕ್ಕೆ ಅಗತ್ಯ ಬಹುಮತ ಸಾಬೀತುಪಡಿಸಲು 120 ಶಾಸಕರ ಬೆಂಬಲ ಸಿಕ್ಕಿದ್ದು, ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.

ಬಹುಮತದ ಅಂಕಿ-ಅಂಶ:
ವಿಜಯ್ ನೇತೃತ್ವದ ಮೈತ್ರಿಕೂಟಕ್ಕೆ ಆರಂಭದಲ್ಲಿ 116 ಶಾಸಕರ ಬೆಂಬಲವಿತ್ತು (ಇದರಲ್ಲಿ ಕಾಂಗ್ರೆಸ್‌ನ 5 ಹಾಗೂ ಎಡಪಂಥೀಯ ಪಕ್ಷಗಳ 4 ಶಾಸಕರು ಸೇರಿದ್ದಾರೆ).
ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ವಿಸಿಕೆ (ವಿಸಿಕೆ
) ಪಕ್ಷದ ಇಬ್ಬರು ಶಾಸಕರ ಬೆಂಬಲ ಘೋಷಿಸಿತು.
ಐಯುಎಂಎಲ್ (ಐಯುಎಂಎಲ್
): ಇಬ್ಬರು ಶಾಸಕರು ಬೆಂಬಲ ಸೂಚಿಸಿದರು. ಇದರೊಂದಿಗೆ ಮೈತ್ರಿಕೂಟದ ಒಟ್ಟು ಬಲ 120ಕ್ಕೆ ಏರಿಕೆಯಾಗಿದ್ದು, ಮ್ಯಾಜಿಕ್ ನಂಬರ್ ದಾಟುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ.

ರಾಜ್ಯಪಾಲರ ಭೇಟಿ - ಪ್ರವಾಸ ರದ್ದು:
ಶಾಸಕರ ಬೆಂಬಲದ ಪತ್ರದೊಂದಿಗೆ ವಿಜಯ್ ಅವರು ಶನಿವಾರ ಸಂಜೆ
'ಲೋಕಭವನ'ಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ನಿಗದಿತ ಎರಡು ದಿನಗಳ ಕೇರಳ ಪ್ರವಾಸವನ್ನು ರದ್ದುಗೊಳಿಸಿರುವುದು ವಿಶೇಷ.

ಇಂದು ಪದಗ್ರಹಣ:
ಕಳೆದ ನಾಲ್ಕು ದಿನಗಳಿಂದ ಸತತ ಪ್ರಯತ್ನ ನಡೆಸಿದ್ದ ವಿಜಯ್
, ಐದನೇ ಬಾರಿ ರಾಜ್ಯಪಾಲರನ್ನು ಭೇಟಿಯಾದಾಗ ಯಶಸ್ಸು ಕಂಡಿದ್ದಾರೆ. ಮೈತ್ರಿಕೂಟದ ಸಂಖ್ಯಾಬಲಕ್ಕೆ ತೃಪ್ತಿ ವ್ಯಕ್ತಪಡಿಸಿರುವ ರಾಜ್ಯಪಾಲರು ಸರ್ಕಾರ ರಚಿಸಲು ಹಸಿರು ನಿಶಾನೆ ತೋರಿದ್ದಾರೆ. ಮೂಲಗಳ ಪ್ರಕಾರ, ಮೇ 10 ರಂದು ಮಧ್ಯಾಹ್ನ 3 ಗಂಟೆಗೆ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಶತಪ್ರಯತ್ನಗಳ ನಂತರ ತಮಿಳುನಾಡು ರಾಜಕೀಯದಲ್ಲಿ ಸಂಭವಿಸಿರುವ ಈ ಬದಲಾವಣೆ ಇಡೀ ದೇಶದ ಗಮನ ಸೆಳೆದಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಕರ್ತರ ಬೇಡಿಕೆ ಬಗ್ಗೆ ಚರ್ಚೆ, ಸಿಎಂ ಡಿಕೆಶಿ ಭೇಟಿ ಮಾಡಿದ ಕೆಯುಡಬ್ಲೂಜೆ ಅಧ್ಯಕ್ಷ ತಗಡೂರುಮಕ್ಕಳ ಅಪರಾಧಗಳು; ಕಳೆದುಹೋಗುತ್ತಿರುವ ಮುಗ್ಧತೆಎಲ್ಲಾ ಶಕ್ತಿಯೂ ನಮ್ಮೊಳಗೆ ಇದೆ ಅದರಲ್ಲಿ ವಿಶ್ವಾಸವಿರಬೇಕು:ಮಾತಾಜೀ ತ್ಯಾಗಮಯೀಗ್ಯಾರಂಟಿ ನೆಪದಲ್ಲಿ ಬೊಕ್ಕಸಕ್ಕೆ ಕನ್ನ, ತಕ್ಷಣ ಶ್ವೇತಪತ್ರ ಹೊರಡಿಸಿ: ಗೃಹಲಕ್ಷ್ಮಿ ಹಗರಣದ ವಿರುದ್ಧ ಜೆಡಿಎಸ್ ಆಕ್ರೋಶಬಿಡದಿ ಟೌನ್‌ಶಿಪ್ ಸಭೆ: ಸ್ಥಳ ಮತ್ತು ದಿನಾಂಕ ಬದಲಾಯಿಸಲು ಡಿ.ಕೆ. ಶಿವಕುಮಾರ್‌ಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಕ್ರೀಡಾ ಸಂಸ್ಥೆಗಳಿಗೆ 11.65 ಕೋಟಿ ವಿಶೇಷ ಅನುದಾನ, ಒಲಿಂಪಿಕ್ ಪದಕ ವಿಜೇತರಿಗೆ ಕೋಟ್ಯಂತರ ರೂ. ಬಹುಮಾನ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್"ಕ್ಯಾಮೆರಾ ಹಿಂದೆ ಲೂಟಿ, ಮುಂದೆ ನಾಟಕದ ಚಾಟಿ": ಡಿಕೆಶಿ-ಕೃಷ್ಣ ಬೈರೇಗೌಡ ಶೀತಲ ಸಮರ ಬಯಲಿಗೆಳೆದ ಆರ್. ಅಶೋಕ್ಗೃಹಲಕ್ಷ್ಮಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಟಿ. ರವಿ ಗಂಭೀರ ಆರೋಪ6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ನೇರ ದಾಖಲಾತಿ