ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಡಿ.ಕ್ರಾಸ್ ನಲ್ಲಿ ಶ್ರೀ ಮುತ್ತಾಲಮ್ಮ ಭಕ್ತ ಮಂಡಲಿಯಿಂದ 35 ನೇ ವಾರ್ಷಿಕೋತ್ಸವವು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ರೀತಿಯ ಪೂಜಾ ಕಾರ್ಯಗಳು ಭಕ್ತಾದಿಗಳಿಂದ ನೆರವೇರಿತು.ದೇವಿಯನ್ನು ಕರಗದ ರೀತಿಯಲ್ಲಿ ಹೂ ಗಳಿಂದ ಅಲಂಕರಿಸಲಾಗಿತ್ತು.
ಜಾತ್ರೆಯ ಎರಡನೆ ದಿನ ಡಿ.ಕ್ರಾಸ್ ಹಾಗೂ ಮುತ್ಸಂದ್ರದ ಭಕ್ತಾದಿಗಳಿಂದ ದೇವಿಗೆ ಆರತಿ ಬೆಳಗಿ ಕುರಿ ಕೋಳಿಗಳನ್ನು ಬಲಿ ನೀಡಲಾಯಿತು.
Also read
ಜಾತ್ರಾ ಮಹೋತ್ಸವದ ಕೊನೆ ದಿನ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಗಿತ್ತು.ನಿರಂತರ 35 ವರ್ಷಗಳಿಂದ ಮಂಡಲಿಯಿಂದ ನಿರಂತರ ಜಾತ್ರೆ ನಡೆಸುತಿದ್ದು ಜಾತ್ರೆಯಲ್ಲಿ ಡಿ.ಕ್ರಾಸ್ ಮುತ್ಸಂದ್ರ ಮತ್ತು ಸುತ್ತಲಿನ ಸಹಸ್ರಾರು ಭಕ್ತಾದಿಗಳು ಬಾಗವಹಿಸುತ್ತಾರೆ.



