ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ೧೨ನೇ ಶತಮಾನದ ಸಮಾನತೆ ಸಾರಿದ ಬಸವಣ್ಣನವರ ವಿಚಾರಧಾರೆಗಳನ್ನು ಗ್ರಾಮೀಣ ಭಾಗದ ಜನರಿಗೆ ಉಣಬಡಿಸುವ ಕಾರ್ಯಮಾಡುತ್ತಿರುವ ನಗರಂಗೆರೆ ಗ್ರಾಮಪಂಚಾಯಿತಿ ಹಿತರಕ್ಷಣಾವೇದಿಕೆ ಮತ್ತು ಮೂರ್ತಿ ಇಂಡಸ್ಟ್ರೀಸ್ ಶ್ಲಾಘನೀಯಕಾರ್ಯವೆಂದು ಚಿತ್ರದುರ್ಗದ ಮಾದರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಿದ್ದಾಪುರಗ್ರಾಮದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸಮಾನತೆಯ ಹರಿಕಾರ ಬಸವಣ್ಣನವರ ಜಯಂತಿಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ದೇಶದ ಮಹಾನ್‌ವ್ಯಕ್ತಿಗಳ ಸಾಧನೆಕುರಿತು, ಅವರ ಜೀವನಹೋರಾಟ ಕುರಿತಾದ ವಿಚಾರ ಗ್ರಾಮೀಣ ಭಾಗದ ಜನರಿಗೆ ತಿಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಜನರಲ್ಲೂ ಸಂವಿಧಾನ ಮತ್ತು ಬಸವಣ್ಣನವರ ಚಿಂತನೆಗಳ ಬಗ್ಗೆ ಜಾಗೃತಿ ಮೂಡುವಂತಾಗಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಗ್ರಾಮದ ಹಿರಿಯ ಮುಖಂಡ ಎಸ್.ಯಲ್ಲಪ್ಪ, ನಮ್ಮ ಗ್ರಾಮದಲ್ಲಿ ಇಂದು ಎರಡು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗ್ರಾಮಸ್ಥರು ಹೆಚ್ಚಿನಸಂಖ್ಯೆಯಲ್ಲಿ ಈಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಂತಹ ಕಾರ್ಯಕ್ರಮದಿಂದ ಎಲ್ಲರಲ್ಲೂ ಸ್ನೇಹ, ಭಕ್ತಿ, ಭಾವಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ಇನ್ನೂ ಎರಡುವಾರಗಳ ಕಾಲ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣನವರ ಚಿಂತನಮಂಥನ ಸಭೆ ನಡೆಯಲಿದೆ. ಗ್ರಾಮೀಣ ಭಾಗದ ಜನರಲ್ಲಿ ನಾಡಿಗೆ ಅಪರೂಪ, ಅಮೂಲ್ಯಕೊಡುಗೆ ನೀಡಿದ ಅಂಬೇಡ್ಕರ್, ಬಸವಣ್ಣನವರ ವಿಚಾರಧಾರೆಗಳನ್ನು ಹೆಚ್ಚು, ಹೆಚ್ಚು ತಿಳಿಸುವ ಉದ್ದೇಶ ಇದರಲಿ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಸಿ ಸತೀಶ್‌ಕುಮಾರ್, ರುದ್ರಮುನಿಯಪ್ಪ, ಸಿದ್ದಾಪುರಶೇಖರಪ್ಪ, ಎಚ್.ಎಸ್.ಸೈಯದ್, ನಿರಂಜನ, ತಿಪ್ಪೇರುದ್ರಪ್ಪ, ಕಾರ್ತಿಕ್ ಎಸ್.ಮೂರ್ತಿ, ಮಾಜಿ ತಾಪಂ ಸದಸ್ಯ ಸಮರ್ಥರಾಯ, ಕೊರ್‍ಲಕುಂಟೆತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.



