Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಂಗಳೂರು, ವಿಜಯಪುರದಲ್ಲಿ ಹೂಡಿಕೆಗೆ 'ಟೋನ್ಬೊ ಇಮೇಜಿಂಗ್' ಆಸಕ್ತಿ

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ರಾಜ್ಯದ ರಕ್ಷಣಾ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು, ಬೆಂಗಳೂರು ಮೂಲದ ಸ್ವದೇಶಿ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾದ ‘ಟೋನ್ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್’ ಬೆಂಗಳೂರು ಹಾಗೂ ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ.

​ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಸಭೆ ನಡೆಸಿದ ಸಂಸ್ಥೆಯ ಮುಖ್ಯಸ್ಥರು, ಕರ್ನಾಟಕದಲ್ಲಿ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆ ಕುರಿತು ವಿಸ್ತೃತ ಚರ್ಚೆ ನಡೆಸಿದರು.

​ಸಂಸ್ಥೆಯಿಂದ 2 ಮಹತ್ವದ ಪ್ರಸ್ತಾವನೆ: ​ಬೆಂಗಳೂರಿನಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ: ಬೆಂಗಳೂರಿನ ಐಟಿಐಆರ್ 2ನೇ ಹಂತದಲ್ಲಿ 5 ಎಕರೆ ಪ್ರದೇಶದಲ್ಲಿ ‘ಹೈ-ಪವರ್ ಮೈಕ್ರೋವೇವ್’ (HPM) ತಂತ್ರಜ್ಞಾನದ ವಿನ್ಯಾಸ ಮತ್ತು ಉತ್ಪಾದನಾ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

​ವಿಜಯಪುರದಲ್ಲಿ 130 ಎಕರೆ ವಿಸ್ತೀರ್ಣದ ಪರೀಕ್ಷಾ ಘಟಕ: ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದ 130 ಎಕರೆ ಜಾಗದಲ್ಲಿ ಹೈ-ಪವರ್ ಮೈಕ್ರೋವೇವ್ ಹಾಗೂ ಮುಂದಿನ ತಲೆಮಾರಿನ ‘ಡೈರೆಕ್ಟೆಡ್ ಎನರ್ಜಿ’ ತಂತ್ರಜ್ಞಾನಗಳ ಪರೀಕ್ಷೆ, ಮೌಲ್ಯಮಾಪನ, ಕ್ಷೇತ್ರ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಅತ್ಯಾಧುನಿಕ ಘಟಕ ಸ್ಥಾಪಿಸಲು ಆಸಕ್ತಿ ವಹಿಸಲಾಗಿದೆ.

​ಕೌಂಟರ್-ಡ್ರೋನ್ ತಂತ್ರಜ್ಞಾನಕ್ಕೆ ಹೊಸ ವೇಗ: ವಿಶೇಷವಾಗಿ, ಪ್ರಸ್ತುತ ಭದ್ರತಾ ಕ್ಷೇತ್ರದಲ್ಲಿ ಸವಾಲಾಗಿರುವ ಡ್ರೋನ್‌ಗಳು ಹಾಗೂ ಡ್ರೋನ್ ಸಮೂಹಗಳನ್ನು ಸಮರ್ಥವಾಗಿ ಎದುರಿಸುವ 'ಕೌಂಟರ್-ಡ್ರೋನ್' ತಂತ್ರಜ್ಞಾನ ಅಭಿವೃದ್ಧಿಗೆ ಈ ಘಟಕವು ಅತ್ಯಂತ ಮಹತ್ವದ ಕೊಡುಗೆ ನೀಡಲಿದೆ ಎಂದು ತಿಳಿಸಲಾಗಿದೆ.

​ಈ ಎರಡೂ ಬೃಹತ್ ಯೋಜನೆಗಳನ್ನು ಸಾಕಾರಗೊಳಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (#KIADB) ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ನಿಯಮಾನುಸಾರ ಅಗತ್ಯ ಸೌಲಭ್ಯ ಹಾಗೂ ಸಹಕಾರ ಒದಗಿಸುವುದಾಗಿ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು: ಶಿವಾನಂದ ತಗಡೂರು 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ 10 ವರ್ಷ ಜೈಲು, ₹6.84 ಲಕ್ಷ ದಂಡಬಸ್ ಪ್ರಯಾಣ ಹಾಗೂ ಹಾಲು ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿಕೆಶಿ: ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ಬಸ್ ದರವೂ ಕಡಿತಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡನೆ: ಸಾರ್ವಜನಿಕ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹಕಾಂಗ್ರೆಸ್‌ನಿಂದ ಸಾಂವಿಧಾನಿಕ ಸಂಸ್ಥೆಗಳಿಗೆ ಅಪಮಾನ, ದೇಶಹಿತದ ಚಿಂತನೆ ಇಲ್ಲ: ಹರೀಶ್ ದ್ವಿವೇದಿ ಕಿಡಿ​ಪ್ರಿಯಕರನಿಂದಲೇ ಯುವತಿ ಭೀಕರ ಕೊಲೆ; ನಾಪತ್ತೆ ನಾಟಕವಾಡಿದ ಖಾಕಿ!​ ರಾಜ್ಯ ಸಾರಿಗೆ ಬಸ್ ದರ ಭಾರಿ ಏರಿಕೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಟಿಕೆಟ್ ಬೆಲೆ ಹೆಚ್ಚಳ, ಮಧ್ಯರಾತ್ರಿಯಿಂದಲೇ ಜಾರಿಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: ‘ಭಾರತದಲ್ಲೂ ಇದೇ ಬದಲಾವಣೆ ಶೀಘ್ರ’ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ವಿರುದ್ಧ ಕನ್ನಡಿಗರ ಆಕ್ರೋಶ: ಬೇಷರತ್ ಕ್ಷಮೆಗೆ ಆಗ್ರಹ