ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ಜಿಲ್ಲೆಯ ಪತ್ರಕರ್ತರ ಸಂಘದ ಅಂಬೇಡ್ಕರ್ ಸಭಾ ಭವನದಲ್ಲಿ ಮೇ 27ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಶರತ್ ಲೋಹಿತಾಶ್ವ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗೆಳೆಯರ ಬಳಗ, ದುರ್ಗದ ಸಿರಿ ಕಲಾ ಸಂಘ, ಶರಣ ಸಾಹಿತ್ಯ ಪರಿಷತ್ತು ಹಾಗೂ ರೈತ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ನಮ್ಮೂರ ನೆಂಟರು’ ಸರಣಿ ಮಾಲಿಕೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ವಿವರಗಳು:
ಅಧ್ಯಕ್ಷತೆ: ಕೆ.ಎಂ.ವೀರೇಶ್ (ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್)
ವಿಷಯ ಪ್ರವೇಶ: ಡಾ.ಹೇಮಂತರಾಜು ಎಸ್.ಎನ್. (ಉಪನ್ಯಾಸಕರು)
ಗೌರವ ಸ್ವೀಕಾರ (ನೆಂಟುಪಚಾರ): ಶರತ್ ಲೋಹಿತಾಶ್ವ (ಚಿತ್ರನಟ ಹಾಗೂ ರಂಗಭೂಮಿ ಕಲಾವಿದರು)
ಮುಖ್ಯ ಅತಿಥಿಗಳು:
ಎನ್.ಆರ್.ಮಹಾಂತರಡ್ಡಿ – ಅಧ್ಯಕ್ಷರು, ದುರ್ಗದ ಸಿರಿ ಕಲಾ ಸಂಘ
ವಿನಾಯಕ ತೊಡರನಾಳ್ – ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ
ಹಂಪಯ್ಯನಮಾಳಿಗೆ ಧನಂಜಯ – ಜಿಲ್ಲಾ ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ಕಾರ್ಯಕ್ರಮದ ಸಮಯ ಮತ್ತು ಸ್ಥಳ: ದಿನಾಂಕ 27-05-2026ರ ಬುಧವಾರ ಮಧ್ಯಾಹ್ನ 12:00 ಗಂಟೆಗೆ, ಅಂಬೇಡ್ಕರ್ ಸಭಾ ಭವನ, ಪತ್ರಕರ್ತರ ಸಂಘ, ಚಿತ್ರದುರ್ಗ ಇಲ್ಲಿ ಕಾರ್ಯಕ್ರಮ ಜರುಗಲಿದ್ದು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ಕೋರಿದ್ದಾರೆ.



