LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪನವರಿಗೆ ಶ್ರದ್ದಾಂಜಲಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ : 
ನಗರದ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಛಲವಾದಿ ಗುರುಪೀಠದಲ್ಲಿ ನಡೆದ ಟ್ರಸ್ಟ್‌ನ ಸಭೆಯಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನಮಂತಪ್ಪನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಹೆಚ್.ಹನುಮಂತಪ್ಪನವರು ನಮ್ಮನ್ನೆಲ್ಲಾ ಅಗಲಿರುವುದು ಛಲವಾದಿ ಸಮಾಜಕ್ಕೆ ಅತೀವ ನೋವುಂಟಾಗಿದೆ.

ಗುರುಪೀಠದ ಅಭಿವೃದ್ದಿಯಾಗುವ ಸಮಯದಲ್ಲಿ ನಮ್ಮ ಜೊತೆ ಇರಬೇಕಿತ್ತು. ಸರ್ಕಾರದಿಂದ ಅನುದಾನ ತಂದು ಮಠದ ಕಟ್ಟುವ ಮೂಲಕ ಹೆಚ್.ಹನುಮಂತಪ್ಪವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದೆಂದು ತಿಳಿಸಿದರು.

ಛಲವಾದಿ ಗುರುಪೀಠ ಟ್ರಸ್ಟ್‌ನ ಉಪಾಧ್ಯಕ್ಷ ಡಾ.ಶ್ರೀಧರಮೂರ್ತಿ ಮಾತನಾಡಿ ನಾನು ವಿದ್ಯಾಸಂಸ್ಥೆ ಆರಂಭಿಸುವಾಗ ಹೆಚ್.ಹನುಮಂತಪ್ಪವರು ಸಹಾಯ ಮಾಡಿದ್ದಾರೆ. ಅನೇಕ ವರ್ಷಗಳಿಂದ ಅವರೊಂದಿಗೆ ಒಡನಾಟವಿತ್ತು. ಎಲ್ಲರನ್ನು ಅಗಲಿರುವುದು ದುಃಖದ ಸಂಗತಿ ಎಂದು ಕಂಬನಿ ಮಿಡಿದರು.

ಟ್ರಸ್ಟ್‌ನ ಖಜಾಂಚಿ ಹೆಚ್.ಸಿ.ನಿರಂಜನಮೂರ್ತಿ ಮಾತನಾಡುತ್ತ ಛಲವಾದಿ ಗುರುಪೀಠ ಟ್ರಸ್ಟ್‌ನ ಗೌರವಾಧ್ಯಕ್ಷರಾದ್ದ ಹೆಚ್.ಹನುಮಂತಪ್ಪನವರು ಮಠದ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅಭಿವೃದ್ದಿ ಪಡಿಸಬೇಕೆಂದು ಹಂಬಲಿಸುತ್ತಿದ್ದರು. ಛಲವಾದಿ ಸಮಾಜದಲ್ಲಿ ಹಿರಿಯ ಮುಖಂಡರಾಗಿದ್ದ ಅವರಲ್ಲಿ ವಿದ್ವತ್ತಿತ್ತು. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದರೆಂದು ಸ್ಮರಿಸಿದರು.

ಟ್ರಸ್ಟಿ ಎಸ್.ಎನ್.ರವಿಕುಮಾರ್ ಮಾತನಾಡಿ ಮಠದ ಅಭಿವೃದ್ದಿ, ಜನಾಂಗದ ವಿಚಾರ ಬಂದಾಗ ನನ್ನನ್ನು ಕರೆಸಿಕೊಂಡು ಮುಕ್ತವಾಗಿ ಮಾತನಾಡುತ್ತಿದ್ದರು. ಛಲವಾದಿ ಗುರುಪೀಠವನ್ನು ಅಭಿವೃದ್ದಿಪಡಿಸಿ ಬೇರೆ ಮಠಗಳಂತೆ ಶಕ್ತಿಶಾಲಿಯನ್ನಾಗಿ ಮಾಡಬೇಕೆಂಬ ಆಸೆಯಿಟ್ಟುಕೊಂಡಿದ್ದರು. ಸಮಾಜ ದೊಡ್ಡ ಆಸ್ತಿಯನ್ನು ಕಳೆದುಕೊಂಡು ಅನಾಥವಾಗಿದೆ. ಸರ್ಕಾರದಿಂದ ಅನುದಾನ ತಂದು ಅವರ ಆಸೆಯಂತೆ ಗುರುಪೀಠವನ್ನು ಅಭಿವೃದ್ದಿಪಡಿಸಲಾಗುವುದೆಂದರು.

ಛಲವಾದಿ ಗುರುಪೀಠದ ಟ್ರಸ್ಟ್‌ನ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಸಹ ಕಾರ್ಯದರ್ಶಿ ನಟರಾಜ್, ನಾಗರಾಜು, ವಕೀಲರುಗಳಾದ ಬಸವರಾಜು, ಪರಮೇಶ್ ಛಲವಾದಿ ಜನಾಂಗದ ಮಂಜುಳಮ್ಮ ಇವರುಗಳು ಶ್ರದ್ದಾಂಜಲಿಯಲ್ಲಿ ಭಾಗವಹಿಸಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೆಲ್ಲುಗುದಿಗೆ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಭಕ್ತಿ ಭಾವದಿಂದ ನಡೆದ ನಾಗ ಪಂಚಮಿ ಆಚರಣೆಬ್ಯಾಂಕ್ ಸರ್ಕಲ್ ಫುಟ್ ಪಾತ್ ಒತ್ತುವರಿ:ಸ್ಥಳೀಯರ ಆಕ್ರೋಶಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನನರಕಸದೃಶ ಬದುಕು - ಚರಂಡಿ ನೀರೆಲ್ಲಾ ರಸ್ತೆಗೆ!, ಸ್ವಚ್ಛತೆ ಇಲ್ಲದ ಊರು, ರೋಗಗಳ ತವರು!ಆ.22 ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ, ಆ.23ರಂದು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ : ರೈತ ಮುಖಂಡ ಮಹೇಶ್ವರಪ್ಪಪರಿಸರ ಮತ್ತು ಆಧ್ಯಾತ್ಮದ ಸಮನ್ವಯದ 'ನಾಗರ ಪಂಚಮಿ':ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ 'ಕ್ವಾಂಟಮ್ ಫೌಂಡ್ರಿ' ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಕನ್ನಡಿಗರ ಜೇಬಿಗೆ ಕನ್ನ: ಜೆಡಿಎಸ್ ತೀವ್ರ ಆಕ್ರೋಶ