Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವರುಣಾರ್ಭಟ: ಕೆಎಸ್‌ಆರ್‌‌ಟಿಸಿ ನೂತನ ಬಸ್ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ತ

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸ್ಮಾರ್ಟ್ ಸಿಟಿ ನಗರವಾದ ತುಮಕೂರಿನಲ್ಲಿ ವ್ಯಾಪಕ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಮುಂಗಾರು ಮಳೆಯ ಅಬ್ಬರಕ್ಕೆ ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಸಂಪೂರ್ಣವಾಗಿ ಜಲಾವೃತಗೊಂಡು, ಅಕ್ಷರಶಃ ದೊಡ್ಡ ಕೆರೆಯಂತೆ ಗೋಚರಿಸಿತು. 

Advertisement

ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು, ಪರದಾಡಿದ ಪ್ರಯಾಣಿಕರುಮಳೆ ನೀರು ಬಸ್ ನಿಲ್ದಾಣದ ಆವರಣದೊಳಗೆ ನುಗ್ಗಿದ್ದರಿಂದ ಬಸ್​ಗಳ ಸಂಚಾರ ಹಾಗೂ ಪ್ರಯಾಣಿಕರ ಓಡಾಟಕ್ಕೆ ಭಾರೀ ಅಡಚಣೆಯುಂಟಾಯಿತು. ಗಲೀಜು ನೀರಿನಲ್ಲೇ ಪ್ರಯಾಣಿಕರು ಪರದಾಡುವಂತಾಗಿದ್ದು, ಅವೈಜ್ಞಾನಿಕ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣವೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  

ಶಾಲಾ ಆವರಣಗಳು ಜಲಾವೃತ ಮತ್ತು ಹವಾಮಾನ ಇಲಾಖೆ ಎಚ್ಚರಿಕೆಶಾಲಾ-ಕಾಲೇಜುಗಳಿಗೆ ಅಡಚಣೆ: ಬಸ್ ನಿಲ್ದಾಣದ ಜೊತೆಗೆ ನಗರದ ಹಲವಾರು ಶಾಲಾ ಆವರಣಗಳು ಹಾಗೂ ಕೆಳಮಟ್ಟದ ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ.

ವಿದ್ಯುತ್ ಹಾಗೂ ಸಂಚಾರ ವ್ಯತ್ಯಯ: ಭಾರೀ ಮಳೆಯ ಪರಿಣಾಮ ನಗರದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸಾರ್ವಚನಿಕ ಸಂಚಾರಕ್ಕೂ ತೊಂದರೆಯಾಗಿದೆ. 

ಯೆಲ್ಲೋ ಅಲರ್ಟ್ ಘೋಷಣೆ: ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದ್ದು, ಮುಂಬರುವ ದಿನಗಳಲ್ಲೂ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ.   ಸದ್ಯ ಜಿಲ್ಲಾಡಳಿತವು ಮಳೆಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.  

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಹೋರಾಟಗಾರರಿಗೆ ಕೃತಜ್ಞತೆ ಸಮರ್ಪಣೆಯಾಗಬೇಕು- ಜೆ.ಯಾದವರೆಡ್ಡಿದಸರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭೂಮಿಕಾ ಎಸ್ ತಗಡೂರು- ದೇವಿಕಾ ಜೋಡಿವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯದಲ್ಲೇ ಪ್ರಥಮ ಬಾರಿಗೆ ‘ಉರ್ದು ಹಬ್ಬ’: ಸಚಿವ ಯು.ಟಿ.ಖಾದರ್ಏಷ್ಯನ್ ಗೇಮ್ಸ್: 4x400 ಮೀ. ರಿಲೇ ಓಟದಲ್ಲಿ ಭಾರತದ ಮಹಿಳೆಯರಿಗೆ ಚಿನ್ನದ ಗರಿ; ಕರ್ನಾಟಕದ ಪೂವಮ್ಮಗೆ ಹೆಮ್ಮೆ!ನೈಸ್ ವಿವಾದ: ಡಿಕೆಶಿ - ಎಚ್ಡಿಕೆ ನಡುವೆ ತಾರಕಕ್ಕೇರಿದ ವಾಕ್ಸಮರ; ವಿಧಾನಸಭೆಯಲ್ಲೇ ಚರ್ಚೆಗೆ ಪ್ರತಿ ಸವಾಲು!ಸೌಜನ್ಯ ಪ್ರಕರಣದ ಎಸ್‌ಐಟಿ ತನಿಖೆಗೆ ಆರಂಭದಲ್ಲೇ ಹಿನ್ನಡೆ: ತಂಡದಿಂದ ಹೊರಗುಳಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಪತ್ರNICE ಯೋಜನೆ ಅಕ್ರಮ ಆರೋಪ: ಡಿಕೆಶಿ ಸಮರ್ಥಿಸುತ್ತಿರುವ ಸಚಿವರ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿಚುನಾವಣಾ ಆಯೋಗದ ನಿರ್ಧಾರ: ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳಲ್ಲಿ ಫಾರ್ಮ್-6 ರಲ್ಲಿದ್ದ ಹೆಚ್ಚುವರಿ ಘೋಷಣೆ ರದ್ದುಚುನಾವಣಾ ಆಯೋಗ ಪ್ರಜಾಪ್ರಭುತ್ವದ ಮೂಲಾಧಾರವನ್ನೇ ಅಲುಗಾಡಿಸುತ್ತಿದೆ: ಮಲ್ಲಿಕಾರ್ಜುನ ಖರ್ಗೆಎಂಜಿನಿಯರ್ ಪರ್ವೇಜ್ ನಾಪತ್ತೆ ಪ್ರಕರಣ: ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಪತ್ತೆ!