Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಳ್ಳಿ ಧ್ವನಿಗಳು ಭಾಗ-2: ಕುಮಾರ್ ಬಡಪ್ಪ

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅದ್ಯಾಕೋ ಏನೋ ತುಂಬಾನೆ ಹೊತ್ತಿಂದ ಮನ್ಸೇ ಸ್ತಿಮಿತದಲ್ಲಿರಲಿಲ್ಲ ಶಾಸಕ ಗಾಡಿ ಮಂಜಪ್ಪನಿಗೆ, ಕೂರಲೂ ಆಗ್ದೆ, ನಿಲ್ಲಲೂ ಆಗ್ದೇ ಅತ್ತಿಂದಿತ್ತ ಚಡಪಡಿಸುತ್ತಾ ತಿರುಗಾಡ್ತಲೇ ಇದ್ದ. ನಿಶ್ಯಬ್ಧ ತುಂಬಿದ ಕೋಣೆಯಲ್ಲಿ ಫ್ಯಾನಿನ ಸದ್ದೇ ತುಂಬಿ ಹೋಗಿತ್ತು.

ಮೊಬೈಲ್ ಟ್ರಿಣ್ ಗುಟ್ಟತೊಡಗಿ, ಅದೇ ಫೋನ್ ಗಾಗಿಯೇ ಏನೋ ಶಾಸಕರು ಕಾಯುತ್ತಿದ್ದುದು, ರಿಸೀವ್ ಮಾಡ್ಕೊಂಡು ಹಲೋ.....
ಹಲೋ..ಅಣ್ಣ ನಾನು ನಿಸಾರ್ ಮಾತಾಡೋದು. ಎಷ್ಟು ಹೊತ್ತು ನಿನ್ನ ಫೋನಿಗೆ ಕಾಯೋದು, ಸೋಂಬೇರಿಗಳ ಯಾವುದಾದ್ರೂ ಬರೋದಿದ್ರೇ  ಹಿಂದೇನೆ ಬಿದ್ದಿರ್ತೀರ, ಅಲ್ಲಿಯದು ಏನ್ ಸುದ್ದಿ ಅನ್ನೋದಾದ್ರೂ ತಿಳಸ್ಬೇಕಲ್ಲ. ಅಣ್ಣ ತಾಲ್ಲೂಕ್ ಆಫೀಸ್ ಬಾಗ್ಲಿಗೆ ಕೋನಾಪುರದ ಸುಮಾರು 300 ಮಂದಿ ಇರಬಹುದು, ಧರಣಿ ಕುಂತವ್ರೆ, ಕಛೇರಿ ಒಳಗೆ ಯಾರನ್ನೂ ಬಿಡ್ತಾಯಿಲ್ಲಾ, ಸಾಹೇಬ್ರು ಇನ್ನೂ ಬಂದಿಲ್ಲ, ಹೆಂಗಸರು ಮಕ್ಕಳು ಮುದುಕರೆಲ್ಲಾ ಬಂದವ್ರೆ, ಆಗ್ಲೇ ನ್ಯೂಸ್ ನವ್ರೂ ಸುತ್ತುವರೆದಿದ್ದಾರೆ, ದೇವಪ್ಪನ ಜೊತೆ ಇರ್ತಾನಲ್ಲ ಆ ಓಬಳೇಶ,ಅವ್ನೇ ಮುಂದೆ ಇರೋದು, ಫೀಡರ್ ಕಾಲುವೆ ಆಗ್ದೇ ಹೋದ್ರೆ, ನಮ್ಮ ಪ್ರಾಣಗಳಿಗೆ ಸಂಚಕಾರ ತಂದ್ಕೊತೀವಿ ಅಂತ ಕೂಗಾಡ್ತಾವ್ನೆ, R O ಪ್ರಾಣೇಶ್, S I ನರೇಂದ್ರಬಾಬು, ತುಂಬಾ ಹೊತ್ತಿನಿಂದ ಸಮಾಧಾನ ಪಡಿಸೋಕೆ ಪ್ರಯತ್ನ ಪಟ್ರೂ ಆಗ್ಲಿಲ್ಲ, ಲಾಟಿಚಾರ್ಜ್ ಆಗಿ ಹಳ್ಳಿಗರಿಗೆ ಏಟು ಬಿದ್ದಿದಾವೆ. ಆಸ್ಪತ್ರೆ ವ್ಯಾನ್ ಬಂದು ಹಾಕ್ಕೊಂಡು ಹೋಯ್ತು.

ಓಬಳೇಶಿಗೂ ಸೇರಿ 20 ಜನನ ಅರೆಸ್ಟ್ ಮಾಡಿದ್ದಾರೆ, ನೀವು ಸ್ವಲ್ಪ ಯೋಚನೆ ಮಾಡೋದು ಅನುಕೂಲ ಅಂತ ಅನಸ್ತೈತೆ ಅಣ್ಣ. ಏ ಕತ್ತೆ ಆ ದಿನ ಬಂದಾಗ ಇಲ್ಲ ಅಂದು, ಇಷ್ಟೆಲ್ಲಾ ಆದಮೇಲೆ ಅವರತ್ರ ಹೋದ್ರೆ ಮಾಧ್ಯಮದವ್ರು ನನ್ನ ಸುಮ್ನೆ ಬಿಡ್ತಾರೆನೋ ಪೇಪರ್ ನಲ್ಲಿ ಮಾನ ತೆಗೆದು ಬೀದಿಗೆ ಬಿಡ್ತಾರೆ ಮತ್ತೆ ಏನ್ ಮಾಡೋದು ಹೇಳಿ ಅಲ್ಲಿ ಏನ್ ನಡಿತೈತೋ ಅದನ್ನ ಗಮನಿಸಿ, ಇನ್ನೊಂದು ಸಾರಿ ಫೋನ್ ಮಾಡು, ತಹಶೀಲ್ದಾರ್ ಗೆ ಫೋನ್ ಮಾಡಿದಿನಿ ಅವರು ಈಗ ಅಲ್ಲಿಗೆ ಬರೋದಿಲ್ಲ, ಜಿಲ್ಲಾ ಮಂತ್ರಿ ಸೋಮೇಂದ್ರು ಅವ್ರು ನನಗೆ ಬೇಕಾದವ್ರೇ, ನಾನ್ ಮಾತಾಡ್ಕೊಳ್ತೀನಿ ಇನ್ನೂ ಸ್ವಲ್ಪ ಜನ ಆಸ್ಪತ್ರೆಗೆ ಸೇರಿದ್ರೂ ಪರ್ವಾಗಿಲ್ಲ ಅವ್ರು ಅಂದ್ಕೊಂಡಿರೋ ಕೆಲ್ಸ ಆಗಬಾರ್ದು ಅಷ್ಟೇ.

ಅದೇನು ಮಾಡ್ಕೋತಾರೋ ಮಾಡ್ಕೊಳ್ಳಿ, DYSP ಗೆ ಫೋನ್ ಮಾಡ್ತೀನಿ, ಒಳಗಿರೋರಿಗೂ ಸ್ವಲ್ಪ ರಿಪೇರಿ ಆಗ್ಲಿ, ಬುದ್ಧಿ ಬರಲಿ ಸೂಳೆಮಕ್ಕಳಿಗೆ. ಆಗ ಮತ್ತೆ ನನ್ನತ್ರಾನೇ ಬರಬೇಕಲ್ಲಾ, ಆಗ ನೋಡ್ಕೋತೀನಿ ಈಗ ಫೋನಿಡು, ಹೇಳುತ್ತಲೇ ಗಾಡಿ ಮಂಜಪ್ಪ ಸಂಪರ್ಕ ಕಟ್ ಮಾಡಿದ.
ಮನ್ಸೇಕೋ ಮತ್ತಷ್ಟು ಹೊಯ್ದಾಡತೊಡಗಿತ್ತು ಫ್ಯಾನ್ ತಿರುಗುತ್ತಿದ್ದರೂ ಮೈಯೆಲ್ಲಾ ಬೆವರುತ್ತಿತ್ತು
, ಇಷ್ಟಕ್ಕೆಲ್ಲಾ ಆ ಮಾಜಿ ದೇವಪ್ಪನೇ ಕಾರಣ,

ನನಿಗೆ ಕೆಟ್ಟೆಸ್ರು ತಂದು ಮುಂದೆ ಗೆಲ್ಲೋ ಪ್ರಯತ್ನ ಅವನ್ದು, ನಿಟ್ಟುಸಿರು ಬಿಟ್ಟು ಕೈಲಿದ್ದ ಮೊಬೈಲ್ ನಲ್ಲಿ ನಂಬರ್ ಗಳನ್ನ ಒತ್ತಿ ಕಿವಿಗೆ ಇಟ್ಕೊಂಡ, ಹಲೋ..... ನಮಸ್ಕಾರ ಸರ್.. ನಾನು MLA ಗಾಡಿ ಮಂಜಪ್ಪ. ನಮಸ್ಕಾರ...ಅಲ್ರೀ ಮಂಜಪ್ಪ ನೀವು ಗೆದ್ದಿರೋ ಕ್ಷೇತ್ರ ಆಗಿರಬಹುದು, ಹಾಗಂತ ಈ ಜಿಲ್ಲೆಗೇ ಮಂತ್ರಿ ಅನ್ಸಿಕೊಂಡಿರೋ ನನಗೂ ಕೂಡ ಕೆಟ್ಟ ಹೆಸರು ಬರಲ್ವೇನ್ರಿ, ಜನ ಕೊಟ್ಟ ಅಧಿಕಾರ ಇದು, ಅವರ ಸೇವೆ ನಮ್ಮ ಗುರಿ, ಆ ದೇವಪ್ಪನ ಮೇಲಿನ ಸಿಟ್ಟಿಗೆ ನೀವು ಹಳ್ಳಿಗಳನ್ನೇ ಎದುರಾಕ್ಕೊಂಡ್ರೆ?.

news_1779062521_0_651.webp

 

ನಾಳೆ ಮತ್ತೇ ನಾವು ಚುನಾವಣೆಗೆ ಬರೋರು, ಮುಖ್ಯಮಂತ್ರಿಯವರ ಕಿವಿಗೆ ಈ ವಿಷಯ ಬಿದ್ರೆ ನಮ್ಮನ್ನ ಕರೆದು ಉಗಿತಾರೆ ಅಷ್ಟೇ. ಜಿಲ್ಲಾ ಮಂತ್ರಿ ಸೋಮೇಂದ್ರು ಅವರು ಶಾಸಕನ ಕುತಂತ್ರಕ್ಕೆ ಸಿಟ್ಟಾಗಿಯೇ ಮಾತಾಡಿದ್ರು. 
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.    ನಾಳೆಗೆ........

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲಾ ಗೊಲ್ಲರ ಸಂಘದ ಚುನಾವಣೆ: ಮೀಸೆ ಮಹಲಿಂಗಪ್ಪ ಗುಂಪಿಗೆ ಭರ್ಜರಿ ಜಯ; ಎದುರಾಳಿ ತಂಡದ ಹಿಂದಿದ್ದ ‘ಕೈ’ ನಾಯಕರಿಗೆ ಮುಖಭಂಗ!ಕರುಳ ಬಳ್ಳಿಯ ತಡವುತ್ತಾ-ಎಚ್.ಕೆ ವಿವೇಕಾನಂದಹಳ್ಳಿ ಧ್ವನಿಗಳು ಭಾಗ-3: ಕುಮಾರ್ ಬಡಪ್ಪಹಳ್ಳಿ ಧ್ವನಿಗಳು ಭಾಗ-2: ಕುಮಾರ್ ಬಡಪ್ಪಹಳ್ಳಿ ಧ್ವನಿಗಳು ಭಾಗ-1: ಕುಮಾರ್ ಬಡಪ್ಪಅಂತರ್ ಜಿಲ್ಲಾ ಮನೆಗಳ್ಳರ ಬಂಧನ: 12.62 ಲಕ್ಷ ಮೌಲ್ಯದ ಚಿನ್ನಾಭರಣ ವಶ​ ರೈತರೊಂದಿಗೆ ಡಿಸಿಎಂ ಶಿವಕುಮಾರ್ ಸಮಾಲೋಚನೆ: ಕಾನೂನು ಚೌಕಟ್ಟಿನಲ್ಲಿ ಸೂಕ್ತ ನಿರ್ದೇಶನದ ಭರವಸೆKEA ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ಆರೋಪ: ಮರುಪರೀಕ್ಷೆಗೆ ಆರ್. ಅಶೋಕ್ ಆಗ್ರಹಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನತೆಗೆ ದ್ರೋಹಬೆಂಗಳೂರು - ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್‌ರೈಲು ಸಂಚಾರ ಆರಂಭ: ಸಚಿವ ವಿ. ಸೋಮಣ್ಣ ಭಾಗಿ