Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಯಲು ಸೀಮೆಗೆ ಭದ್ರೆ ಹೋರಾಟಗಾರರ ಕಿತ್ತಾಟ ಏಕೆ: ಎಂ.ಜಿ ರಂಗಸ್ವಾಮಿ ಪ್ರಶ್ನೆ

ಚಂದ್ರವಳ್ಳಿ ನ್ಯೂಸ್ಹಿರಿಯೂರು:
ದಶಕಗಳ ಕಾಯುವಿಕೆಯ ನಂತರ ಭದ್ರಾ ಜಲಾಶಯದ ನೀರು ಗೋನೂರು ಕೆರೆಗೆ ಹರಿದು ಬಂದಿರುವುದು ಚಿತ್ರದುರ್ಗ ಜಿಲ್ಲೆಯ ಬಯಲುಸೀಮೆಯ ಜನರಲ್ಲಿ ಹೊಸ ಆಶಾವಾದ ಹಾಗೂ ಅಳಿಸಲಾಗದ ಸಂತಸವನ್ನು ತಂದಿದೆ. ಆದರೆಈ ಐತಿಹಾಸಿಕ ಯೋಜನೆಯ ಸಾಕಾರದ ಬೆನ್ನಲ್ಲೇಇದರ ಕ್ರೆಡಿಟ್ (ಶ್ರೇಯಸ್ಸು) ತೆಗೆದುಕೊಳ್ಳಲು ನಾಯಕರು ಮುಗಿಬೀಳುತ್ತಿರುವುದು ನೈಜ ಹೋರಾಟಗಾರರು ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿರುವ ಹಿರಿಯೂರಿನ ಹಿರಿಯ ನಾಗರಿಕರಾದ ಎಂ.ಜಿ. ರಂಗಸ್ವಾಮಿಯವರು, "ಬಯಲುಸೀಮೆಗೆ ನೀರು ತರುವುದು ಲಕ್ಷಾಂತರ ಜನರ ದಶಕಗಳ ಕನಸಾಗಿತ್ತು. ವಿವಿಧ ಕಾಲಘಟ್ಟಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳ ಜೀವಪರ ಚಿಂತನೆ ಮತ್ತು ಸಾಂಘಿಕ ಹೋರಾಟದ ಫಲವಾಗಿ ಈ ಯೋಜನೆ ಇಂದು ಸಾಕಾರಗೊಂಡಿದೆ. ಆದರೆಹೋರಾಟ ನಡೆದ ಸಮಯದಲ್ಲಿ ಯಾವುದೇ ಪಾತ್ರ ವಹಿಸದವರು ಹಾಗೂ ಶೋಕೇಸ್ ಗೊಂಬೆಗಳಂತಿದ್ದವರು ಈಗ ಗೆಲುವಿನ ಶ್ರೇಯಸ್ಸನ್ನು ತಮ್ಮ ಮುಡಿಗೇರಿಸಿಕೊಳ್ಳಲು ಮುಗಿಬೀಳುತ್ತಿರುವುದು ತೀರಾ ಖಂಡನೀಯ ನಡವಳಿಕೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಲಕ್ಷಾಂತರ ಜನರ ಶ್ರಮದ ಫಲ:
ಈ ಯೋಜನೆಯ ಅನುಷ್ಠಾನದ ಹಿಂದೆ ಲಕ್ಷಾಂತರ ಸಾರ್ವಜನಿಕರಅನ್ನದಾತರ ಮತ್ತು ಹೋರಾಟಗಾರರ ಸತತ ಶ್ರಮವಿದೆ. ನೂರಾರು ರೈತರು ಮತ್ತು ಹೋರಾಟಗಾರರು ತಮ್ಮ ಸ್ವಂತ ಬದುಕನ್ನು ಲೆಕ್ಕಿಸದೆ ವರ್ಷಗಳ ಕಾಲ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ನೀರಿಲ್ಲದೆ ದಶಕಗಳ ಕಾಲ ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದ ಬಯಲುಸೀಮೆಯ ರೈತರ ಹಿತದೃಷ್ಟಿಯಿಂದ ಹಾಗೂ ಯೋಜನೆಗೆ ತಮ್ಮ ಅಮೂಲ್ಯವಾದ ಭೂಮಿಯನ್ನೇ ದಾನ ಮಾಡಿದ ಮಹನೀಯರ ತ್ಯಾಗದಿಂದಾಗಿ ಇದು ಸಾಧ್ಯವಾಗಿದೆ.

ಇದು ಯಾರೊಬ್ಬರ ವೈಯಕ್ತಿಕ ಸಾಧನೆಯಲ್ಲ:
ಹೋರಾಟಗಳು ನಡೆಯುತ್ತಿದ್ದ ಸಮಯದಲ್ಲಿ ಹೋರಾಟಗಾರರನ್ನು ಹತ್ತಿಕ್ಕಲುಭಯಗೊಳಿಸಲು ಯತ್ನಿಸಿದ ಘಟನೆಗಳೂ ನಡೆದಿವೆ. ಹೀಗಿರುವಾಗಈ ಯೋಜನೆಯನ್ನು ತಮ್ಮದೇ ವೈಯಕ್ತಿಕ ಸಾಧನೆ ಅಥವಾ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಕೊಡುಗೆ ಎಂದು ಬಿಂಬಿಸಿಕೊಳ್ಳುವುದು 'ಭದ್ರಾ ಯೋಜನೆಗೆಮತ್ತು ಅದಕ್ಕಾಗಿ ಹೋರಾಡಿದ ಜೀವಗಳಿಗೆ ಎಸಗುವ ದ್ರೋಹವಾಗಿದೆ.

ಈ ಯೋಜನೆಯ ಯಶಸ್ಸು ಹಲವು ಸಂಘಟನೆಗಳನೈಜ ಹೋರಾಟಗಾರರ ಬೆವರ ಹನಿಯ ಕೊಡುಗೆಯಾಗಿದ್ದುಇದರ ಪ್ರತಿಯೊಂದು ಫಲಶೃತಿಯು ಕಡೆಯ ಹಂತದ ನೈಜ ಹೋರಾಟಗಾರನಿಗೂ ತಲುಪಬೇಕಿದೆ ಎಂದು ಅಭಿಪ್ರಾಯಪಡಲಾಗಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಯಲು ಸೀಮೆಗೆ ಭದ್ರೆ ಹೋರಾಟಗಾರರ ಕಿತ್ತಾಟ ಏಕೆ: ಎಂ.ಜಿ ರಂಗಸ್ವಾಮಿ ಪ್ರಶ್ನೆಸ್ವಾಭಿಮಾನಿ ಸಶಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ: ಶಾಂತಾ ಸುರೇಂದ್ರಜೀವಸಂಕುಲ ಉಳಿವಿಗೆ ಪ್ರಕೃತಿದೊಡ್ಡ ಶಕ್ತಿ-ಎಸ್.ಬಸವರಾಜುಜನಸಾಮಾನ್ಯರ ಪ್ರಗತಿಗಾಗಿ ಸರ್ಕಾರದ ಮಹತ್ವದ ಯೋಜನೆಗಳುಕೋಟೆನಾಡಿಗೆ ಹರಿದ ಭದ್ರಾ ನೀರು: ಗೊನೂರು ಕೆರೆಗೆ 'ಮೇಲ್ಭದ್ರಾ' ಸ್ಪರ್ಶ—ರೈತರ ಹರ್ಷ!ಕೆಪಿಎಸ್ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ—ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ!ಸರ್ಕಾರ ‘ಸರಿಯಾದ ದಿಕ್ಕಿನಲ್ಲಿ’ ಸಾಗುತ್ತಿದೆ; ಸಿದ್ದರಾಮಯ್ಯ! ಸಿಎಂ ಡಿ.ಕೆ ಶಿವಕುಮಾರ್‌ಸರ್ಕಾರಕ್ಕೆ 100 ದಿನದ ಸಂಭ್ರಮ: ಹೊಸ ಯೋಜನೆಗಳ ಮಹಾಪೂರ!ಸಚಿವ ಸತೀಶ್ ಜಾರಕಿಹೊಳಿ ಮತ್ತು ಆಪ್ತರ ನಿವಾಸಗಳ ಮೇಲೆ 2ನೇ ದಿನವೂ ಇ.ಡಿ ದಾಳಿ: ಸುದೀರ್ಘ ಪರಿಶೀಲನೆರಾಜ್ಯ ಕಾಂಗ್ರೆಸ್‌ಗೆ ನೂತನ 35 ಜಿಲ್ಲಾಧ್ಯಕ್ಷರ ನೇಮಕ: ಎಐಸಿಸಿ ಅಧಿಕೃತ ಪಟ್ಟಿ ಬಿಡುಗಡೆ