Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯತ್ನಾಳ್‌ವಿಜಯೇಂದ್ರ ದಿಢೀರ್‌ಭೇಟಿ; ಕಮಲ ಪಾಳೆಯದಲ್ಲಿ ಹೊಸ ಸಂಚಲನ!  

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ’ ಎಂಬ ಮಾತು ಮತ್ತೆ ಸಾಬೀತಾಗಿದೆ. ಕಟು ವೈರಿಗಳಂತೆ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮುಖಾಮುಖಿಯಾಗಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

ಧಾರವಾಡ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಅಪರೂಪದ ಹಾಗೂ ಅನಿರೀಕ್ಷಿತ ಭೇಟಿ ಸಂಭವಿಸಿದೆ.

ಛಬ್ಬಿಯಲ್ಲಿ ಉಭಯ ನಾಯಕರ ಸೌಜನ್ಯದ ಭೇಟಿ :
ಛಬ್ಬಿಯ ಖಾಸಗಿ ಮನೆಗೆ ಆಗಮಿಸಿದ್ದ ಯತ್ನಾಳ್ ಹಾಗೂ ಬಿ. ವೈ. ವಿಜಯೇಂದ್ರ ಅವರು ಪರಸ್ಪರ ಎದುರುಬದುರಾಗಿ ಕುಳಿತು ಸೌಜನ್ಯದ ಉಭಯ ಕುಶಲೋಪರಿ ನಡೆಸಿದ್ದಾರೆ. ಬಹಿರಂಗವಾಗಿಯೇ ಕಿತ್ತಾಡಿಕೊಳ್ಳುತ್ತಿದ್ದ ಇಬ್ಬರೂ ನಾಯಕರು ಅತ್ಯಂತ ಸೌಹಾರ್ದಯುತವಾಗಿ ಮಾತನಾಡಿದ್ದು, ಇವರ ಭೇಟಿಯ ದೃಶ್ಯಗಳು ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಿವೆ.

ಯತ್ನಾಳ್ ಉಚ್ಚಾಟನೆಗೆ ಕಾರಣವೇನು?:
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಾ ಬಂದಿದ್ದರು. "ಪಕ್ಷದ ಮತ್ತು ನಾಯಕರ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡಬೇಡಿ" ಎಂದು ಬಿಜೆಪಿ ಹೈಕಮಾಂಡ್ ಹಲವು ಬಾರಿ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್‌ನೀಡಿದ್ದರೂ, ಅವರು ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.

 ನೋಟಿಸ್‌ಗಳ ನಂತರವೂ ಬಿಎಸ್‌ವೈ ಕುಟುಂಬ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಬಹಿರಂಗವಾಗಿಯೇ ವಾಗ್ದಾಳಿ ಮುಂದುವರಿಸಿದ್ದರು.

ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಡಿ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ರಾಜಕೀಯ ಲೆಕ್ಕಾಚಾರಗಳು ಶುರು!   ಉಚ್ಚಾಟನೆಯ ಬಳಿಕವೂ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ತೊಡೆ ತಟ್ಟಿದ್ದ ಯತ್ನಾಳ್ ಅವರನ್ನು ಈಗ ಸ್ವತಃ ವಿಜಯೇಂದ್ರ ಅವರೇ ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವು ಅನುಮಾನ ಮತ್ತು ಕುತೂಹಲಗಳನ್ನು ಹುಟ್ಟುಹಾಕಿದೆ.   ಈ ಭೇಟಿಯು ಕೇವಲ ಸೌಜನ್ಯದ ಮಾತುಕತೆಯೋ ಅಥವಾ ಭವಿಷ್ಯದಲ್ಲಿ ಯತ್ನಾಳ್ ಮತ್ತೆ ಬಿಜೆಪಿಗೆ ಮರಳುವ ಹಾಗೂ ಆಂತರಿಕ ಭಿನ್ನಾಪ್ರಾಯಗಳಿಗೆ ತೆರೆ ಬೀಳುವ ಮುನ್ಸೂಚನೆಯೋ ಎಂಬ ಚರ್ಚೆಗಳು ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ರಾಜಕೀಯ ಪಂಡಿತರಲ್ಲಿ ತೀವ್ರವಾಗಿ ನಡೆಯುತ್ತಿವೆ.  

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭ್ರಮೆಯಿಂದ ಹೊರಬರಬೇಕುಅವಳಿ ಕರುವಿಗೆ ಜನ್ಮ ನೀಡಿದ ಹಸುದಸರಾ ಹಬ್ಬದ ಅಂಗವಾಗಿ ಚಿಕ್ಕ ಮಕ್ಕಳ ಪಾದ ತೊಳೆದು ಹೊಸಯಳನಾಡು ಶಶಿಕಲಾ ಪ್ರಕಾಶ್ಆಗ್ನೇಯ ಪದವೀಧರರ ಕ್ಷೇತ್ರದ ಗೆಲುವು ನಮ್ಮದೇ: ಶಾಸಕ ಎಂ. ಚಂದ್ರಪ್ಪದುರ್ಗಾಷ್ಟಮಿ ಸಂಭ್ರಮ 108 ಹೆಣ್ಣು ಮಕ್ಕಳಿಗೆ ಮೂಗುತಿಧಾರಣೆಹೆಚ್.ಡಿ. ದೇವೇಗೌಡರಿಗೆ 'ಶ್ರೀ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ' ಪ್ರದಾನ: ಭಾವನಾತ್ಮಕ ಕ್ಷಣವಿಕಲಚೇತನರ ಪಿಂಚಣಿಗೂ ಹಣವಿಲ್ಲದ ಸರ್ಕಾರ ದಿವಾಳಿಯಾಗಿದೆ:ಆರ್. ಅಶೋಕ್!ಪ್ರಧಾನಿ ಮೋದಿ ಅವರಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರಒಲಿಂಪಿಕ್ಸ್ ಗುರಿಯತ್ತ ಬಿಲ್ಲುಗಾರ್ತಿ ದೇವಮ್ಮ: ಎಂ.ಬಿ ಪಾಟೀಲ್ ಪ್ರಶಂಸೆಕಿಚ್ಚ ಸುದೀಪ್‌ಹಾಗೂ ಪತ್ನಿ ಪ್ರಿಯಾ ಸುದೀಪ್‌ಅವರ ದಾಂಪತ್ಯ ಜೀವನಕ್ಕೆ ಬೆಳ್ಳಿ ಹಬ್ಬದ ಸಂಭ್ರಮ