ಅಂಗಡಿ ಮಳಿಗೆ ಹಾಗೂ ಕಟ್ಟಡಗಳ ಮೇಲೆ ಏರದಿರಲು ಸಾರ್ವಜನಿಕರಿಗೆ ಸೂಚನೆ

News Desk

ಅಂಗಡಿ ಮಳಿಗೆ ಹಾಗೂ ಕಟ್ಟಡಗಳ ಮೇಲೆ ಏರದಿರಲು ಸಾರ್ವಜನಿಕರಿಗೆ ಸೂಚನೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೆ.28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಪ್ರಯುಕ್ತ ಚಿತ್ರದುರ್ಗ ನಗರದಲ್ಲಿ ಬೃಹತ್ ಶೋಭಾ ಯಾತ್ರೆ ಜರುಗಲಿದೆ. ಶೋಭಾ ಯಾತ್ರೆ ಮೆರವಣಿಗೆಯು ಚಳ್ಳಕೆರೆ ಗೇಟ್ನಿಂದ ಬಿ.ಡಿ.ರಸ್ತೆ ಮುಖಾಂತರ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆಯ ಮೂಲಕ ಚಂದ್ರವಳ್ಳಿ ತೋಟಕ್ಕೆ ತಲುಪಲಿದೆ.

ಈ ವೇಳೆ ಸಾರ್ವಜನಿಕರು ಯಾವುದೇ ಅಂಗಡಿ ಮುಂಗಟ್ಟು, ಮಳಿಗೆ ಹಾಗೂ ಕಟ್ಟಡದ ಮೇಲೆ ಏರದಿರುವಂತೆ ಬೆಸ್ಕಾಂ ಸೂಚನೆ ನೀಡಿದೆ. ವಿದ್ಯುತ್ ತಂತಿಗಳು ಕಟ್ಟಡದ ಸಮೀಪವೇ ಹಾದು ಹೊಗಿರುತ್ತವೆ.

ಇದರಿಂದ ವಿದ್ಯುತ್ ಅವಘಡಗಳು ಸಂಭವಿಸಬಹುದು. ಆದ್ದರಿಂದ ಅಂಗಡಿ ಹಾಗೂ ಕಟ್ಟಡ ಮಾಲಿಕರು ಈ ಬಗ್ಗೆ ನಿಗಾ ವಹಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಕೋರಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";