ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ಠಾಣಾ ವ್ಯಾಪ್ತಿಯ ಬಾಲೇನಹಳ್ಳಿ, ಕುರುಡಿಹಳ್ಳಿ ರಸ್ತೆಯಲ್ಲಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ್ದು, ಇರ್ವರಿಗೆ ಕಾಲುಗಳು ಮುರಿದು, ಓರ್ವ ವ್ಯಕ್ತಿ ಚಿಕ್ಕಮ್ಮನಹಳ್ಳಿಯ ಕಿರಣ್(೨೪) ಮೃತಪಟ್ಟಿದ್ಧಾನೆ.
ತಳಕು ಠಾಣಾ ವ್ಯಾಪ್ತಿಯ ಗಿರಿಯಮ್ಮನಹಳ್ಳಿ ಬಳಿ ಮೋಟಾರ್ ಬೈಕ್‌ನಿಂದ ಬಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ವಿವರಗಳು ಲಭ್ಯವಾಗಬೇಕಿದೆ.
ಚಳ್ಳಕೆರೆ ಮತ್ತು ತಳಕು ಪೊಲೀಸರು ಎರಡೂ ಪ್ರಕರಣದ ವಿಚಾರಣೆ ಮುಂದುವರೆಸಿದ್ದಾರೆ.