ಆಟೋ ಪಲ್ಟಿ: ಓರ್ವ ವ್ಯಕ್ತಿ ಸಾವು, ಐವರಿಗೆ ಗಾಯ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಅಜ್ಜಯ್ಯಗುಡಿ ರಸ್ತೆಯ ದೊಡ್ಡಹಟ್ಟಿಕಪ್ಪಿಲೆ ಬಳಿ ಆಟೋರಿಕ್ಷಾ ಹಸುವಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು
, ಐವರು ಗಾಯಗೊಂಡಿದ್ದಾರೆ.

- Advertisement - 

ಆಟೋಚಾಲಕ ನಾಗೇಶ ಚಳ್ಳಕೆರೆಯಿಂದ ನನ್ನಿವಾಳ ಕಡೆಗೆ ಸಾರ್ವಜನಿಕರನ್ನು ಹತ್ತಿಸಿಕೊಂಡು ಅತಿವೇಗವಾಗಿ ಆಟೋ ಚಲಾಯಿಸಿದ್ದು, ಅಡ್ಡಬಂದ ಹಸುವಿಗೆ ಡಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ.

- Advertisement - 

ತೀರ್ವವಾಗಿ ಗಾಯಗೊಂಡ ಜಗಲೂರ ತಾಲ್ಲೂಕು ಕಲ್ಲದೇವಪುರದ ನಾಗರಾಜ(೪೫) ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಗೊರ್‍ಲಕಟ್ಟೆ ಗ್ರಾಮದ ಕಾಟಯ್ಯ, ಮಹಂತೇಶ್, ಜಯಮ್ಮ, ಗಿರೀಶ್, ಚಾಲಕ ನಾಗೇಶ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್‌ಐ ಕೆ.ಸತೀಶ್‌ನಾಯ್ಕ ಪ್ರಕರಣ ದಾಖಲಿಸಿದ್ಧಾರೆ.

                           

- Advertisement - 

Share This Article
error: Content is protected !!
";