ಓವರ್ ಡೋಸ್ ಇಂಜೆಕ್ಷನ್ ಎಫೆಕ್ಟ್ ಬಾಲಕ ಸಾವು

News Desk

ಚಂದ್ರವಳ್ಳಿ ನ್ಯೂಸ್, ಅಜ್ಜಂಪುರ :
ಜ್ವರದಿಂದ ಬಳಲುತ್ತಿದ್ದ ಬಾಲಕನೋರ್ವನಿಗೆ, ವೈದ್ಯರು ನೀಡಿದ ಓವರ್ ಡೋಸ್ ಇಂಜೆಕ್ಷನ್ ನಿಂದಲೇ ಮೃತಪಟ್ಟಿದ್ದಾನೆಂಬ ಆರೋಪ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಯಿಂದ ಕೇಳಿಬಂದಿದೆ.  

ಸೋನೇಶ್ (7) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಬುಕ್ಕಾಂಬುಧಿ ಆಸ್ಪತ್ರೆ ವೈದ್ಯನ ವಿರುದ್ದ, ಪೋಷಕರು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 ಘಟನೆಯ ಹಿನ್ನೆಲೆ :
ಕೆಂಚಾಪುರ ಗ್ರಾಮದ ಬಾಲಕ ಸೋನೇಶ್ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಬಾಲಕನನ್ನು ಪೋಷಕರು ಬುಕ್ಕಾಂಬುಧಿ ಆಸ್ಪತ್ರೆಗೆ ಕರೆತಂದಿದ್ದರು. ಕರ್ತವ್ಯದಲ್ಲಿದ್ದ ವೈದ್ಯರು ಬಾಲಕನಿಗೆ ಇಂಜೆಕ್ಷನ್ ನೀಡಿದ್ದರು.

ಬಾಲಕನಿಗೆ ಇಂಜೆಕ್ಷನ್ ನೀಡಿದ್ದ ಸ್ಥಳದಲ್ಲಿ ಬೊಬ್ಬೆ ಹಾಗೂ ಕೀವು ಕಾಣಿಸಿಕೊಂಡಿತ್ತು. ಸೋನೇಶ್ ನ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ, ಪೋಷಕರು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆ ಗೆ ಬಾಲಕನನ್ನು ದಾಖಲಿಸಿದ್ದರು.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಅಸುನೀಗಿದ್ದಾನೆ. ಬುಕ್ಕಾಂಬುಧಿ ಆಸ್ಪತ್ರೆಯಲ್ಲಿ ವೈದ್ಯರು ಓವರ್ ಡೋಸ್ ಇಂಜೆಕ್ಷನ್ ನೀಡಿದ್ದರಿಂದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";