ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನರ ಮನದಲ್ಲಿ ಪ್ರಭುತ್ವದ ರಾಜಕೀಯ ಬೆಳೆದು ನಿಂತಿದೆ. ಸಾರ್ವಜನಿಕ ಸಮತೋಲನವನ್ನು ಸರಿಪಡಿಸುವ ಜ್ಞಾನ ಅರಿತ ವ್ಯಕ್ತಿಗಳಿಗೆ ಜನಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ರಾಜಕೀಯ ಪಕ್ಷಗಳು ಕಲ್ಪಿಸಬೇಕು. ಸಾಂವಿಧಾನಿಕ ನೀತಿಯಲ್ಲಿ ನಮ್ಮ ಮತ ನಮ್ಮ ಹಕ್ಕು ಈ ವಿಚಾರ ಮತದಾರರು ಅರಿಯಬೇಕು. ಸ್ವಾಭಿಮಾನದ ಬದುಕಿನ ಜೊತೆ ಜೊತೆಗೆ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಮತ ಎಂಬ ಸಂಕಲ್ಪಮಾಡಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾರ ಪ್ರಭುಗಳು ಮತದಾನ ಮಾಡಬೇಕು.
ರಾಜಕೀಯದ ಅಧಿಕಾರದಲ್ಲಿ ತಂತ್ರ ಕುತಂತ್ರಗಳ ನೀತಿಯಲ್ಲಿ ಆಸ್ತಿ ಅಂತಸ್ತು ಗಳಿಸಲು ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠೆ ಪ್ರದರ್ಶಿಸಲು ರಾಜಕೀಯ ಕ್ಷೇತ್ರಕ್ಕೆ ಬರಬಾರದು. ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಜೊತೆಗೆ ಜನತೆಯ ಸ್ವಾಭಿಮಾನದ ಜೀವನ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು. ಈ ಮಹತ್ವದ ವಿಚಾರದಲ್ಲಿಯೇ ರಾಜಕೀಯ ಮುಖಂಡರು ಸ್ಪರ್ಧಾತ್ಮಕ ನೀತಿಯಲ್ಲಿ ಬೆಳೆಯಬೇಕು.
ಹಣ ಹೂಡಿಕೆ ಮಾಡಿ. ಹಣ ಸಂಪಾದನೆ ಮಾಡುವ ವ್ಯಾಪಾರಿ ನೀತಿ ರಾಜಕೀಯ ಕ್ಷೇತ್ರದಲ್ಲಿ ಅಡಗಿರುವುದಿಲ್ಲ . ರಾಜಕೀಯ ಎಂಬುದು ಸೇವಾ ಮನೋಭಾವದ ಪರಂಪರೆ. ಸೇವೆಯ ಮನೋಧರ್ಮದ ಜನಾನುರಾಗಿಯೇ ನಮ್ಮ ಜನನಾಯಕ. ಇದುವೇ ಜನರಿಂದ ಜನರಿಗಾಗಿರುವ ವರ್ತಮಾನದ ಭವ್ಯ ಭವಿಷ್ಯ.
ಲೇಖನ-ರಘು ಗೌಡ.