ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಜಿಲ್ಲೆ ಕನಕಪುರವನ್ನು ರಿಪಬ್ಲಿಕ್‌ಮಾಡಿಕೊಂಡು ರೌಡಿ ರಾಜಕಾರಣ ಮಾಡುತ್ತಿರುವ ಡಿ.ಕೆ ಶಿವಕುಮಾರ್ ಮತ್ತು ಪಟಾಲಂ ಅಟ್ಟಹಾಸ ಮಿತಿ ಮೀರಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಕನಕಪುರ ವ್ಯಾಪ್ತಿಯ ಅರಣ್ಯದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದನ್ನು ಪ್ರಶ್ನಿಸಿದ ಅರಣ್ಯ ಸಿಬ್ಬಂದಿ ಹಾಗೂ ಆರಕ್ಷಕರ ಮೇಲೆಯೇ ಡಿಕೆಶಿ ಗ್ಯಾಂಗ್‌ಹಲ್ಲೆಗೈದು ಕೊಲೆಗೆ ಯತ್ನಿಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಡಿಸಿಎಂ ಡಿಕೆಶಿ ನಟ್ಟು, ಬೋಲ್ಟು ಟೈಟ್‌ಮಾಡ್ತೀನಿ ಎಂದು ವಾರ್ನಿಂಗ್‌ಕೊಡುತ್ತಿದ್ದಾರೆ, ಅತ್ತ ಕನಕಪುರದಲ್ಲಿ ಪುಡಿ ರೌಡಿಗಳೇ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.
ದುಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದ್ದು, ರೌಡಿಗಳು, ಪುಂಡ ಪೋಕರಿಗಳಿಗೆ ಕಾನೂನಿನ ಭಯವೇ ಇಲ್ಲದೇ, ಮೆರೆದಾಡುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.