ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀಗಂಧ ಮರಗಳ ಕಳವು ಪ್ರಕರಣಗಳು ಸೇರಿದಂತೆ ಶ್ರೀಗಂಧ ಮತ್ತು ರಕ್ತ ಚಂದನ ಮರಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂಡಾರು ಅವರ ಕಚೇರಿಯಲ್ಲಿ
ನವೆಂಬರ್-13 ರಂದು 12.30ಕ್ಕೆ ರೈತರೊಂದಿಗೆ ಸಭೆ ಕರೆಯಲಾಗಿದೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ನವಕೃಷಿ ಬೆಳೆಗಾರ ಸಂಘದ ಗೌರವಾಧ್ಯಕ್ಷ ಕೆ.ಅಮರನಾರಾಯಣ ಅವರು ತಿಳಿಸಿದ್ದಾರೆ.
ಕಾರ್ಬನ್ ಕ್ರೆಡಿಟ್ ಜಾಗೃತಿ ಸಮಾವೇಶ- ರಾಜ್ಯ ಸರ್ಕಾರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ನವಕೃಷಿ ಬೆಳೆಗಾರ ಸಂಘ, ಸುಸ್ಥಿರ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಗ್ರೀನ್ ಸಿಲ್ಕ್ ಅಕಾಡೆಮಿ ಬೆಂಗಳೂರು, ಆರಿಗ್ರಾಫ್ ಮಾರ್ಕೆಟ್ಸ್ ಬೆಂಗಳೂರು
ಇವರುಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 13 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ(ಹಿಂಭಾಗ)ಲ್ಲಿರುವ ಪತ್ರಿಕಾ ಭವನದಲ್ಲಿ ಕಾರ್ಬನ್ ಕ್ರೆಡಿಟ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಆಸಕ್ತ ರೈತರು ಆಗಮಿಸುವಂತೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ನವಕೃಷಿ ಬೆಳೆಗಾರ ಸಂಘದ ಗೌರವಾಧ್ಯಕ್ಷ ಕೆ.ಅಮರನಾರಾಯಣ ಮನವಿ ಮಾಡಿದ್ದಾರೆ.