ವಿಜ್ಞಾನಿ ಮತ್ತು ಇಂಜಿನಿಯರ್ಸ್ ರಾಜ್ಯ ಪ್ರಶಸಿ ಪ್ರದಾನ ಸಮಾರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪ್ರತಿ ವರ್ಷ ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್ಗಳಿಗೆ ಸರ್. ಎಂ. ವಿಶ್ವೇಶ್ವರಯ್ಯ, ಡಾ. ರಾಜಾರಾಮಣ್ಣ, ಸರ್. ಸಿ.ವಿರಾಮನ್,  ಪ್ರೊ. ಸತೀಶ್ ಧವನ್ ಮತ್ತು  ಡಾ. ಕಲ್ಪನಾ ಚಾವ್ಲಾ ಹೆಸರಿನಲ್ಲಿ  ವಿಜ್ಞಾನಿ ಮತ್ತು ಇಂಜಿನಿಯರ್ಸ್ಗಳಿಗೆ  ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾ ಬಂದಿದೆ.

2022 ಮತ್ತು 2023 ನೇ ಸಾಲಿಗೆ ಪ್ರಶಸ್ತಿಗಳ ಆಯ್ಕೆಗೆ ಸಂಬಂಧಿಸಿದಂತೆ ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಅಧ್ಯಕ್ಷತೆಯಲ್ಲಿ ಹೆಸರಾಂತ ವಿಜ್ಞಾನಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಆಯ್ಕೆ ಮಾಡಲಾದ ಪಟ್ಟಿಗೆ ಸರ್ಕಾರವು ಅನುಮೋದನೆ ನೀಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ 26 ರಂದು ಸಂಜೆ 4 ಗಂಟೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು.

ಸರ್. ಎಂ. ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ರಾಜ್ಯಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಜೀವನಾವಧಿಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಇಬ್ಬರು ಹಿರಿಯ ವಿಜ್ಞಾನಿ / ಇಂಜಿನಿಯರ್ಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ರೂ. 2,00,000 ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿಗೆ 2022ನೇ ಸಾಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಮೆದುಳಿನ ಸಂಶೋಧನಾ ಕೇಂದ್ರ ನಿರ್ದೇಶಕರು ಹಾಗೂ  ಕಂಪ್ಯೂಟರ್ ಸೈನ್ಸ್ ಮತ್ತು ಆಟೋಮೆಷಿನ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವೈ.ನರಹರಿ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳು ಮತ್ತು ನವದೆಹಲಿ ಪಿಪಿವಿ & ಎಫ್ಆರ್, ಭಾರತ ಸರ್ಕಾರದ ಮಾಜಿ ಅಧ್ಯಕ್ಷರಾದ ಪ್ರೊ. ರಾಮಪ್ಪ ರಾಯಪ್ಪ ಹಂಚಿನಾಳ್ ಅವರು ಮತ್ತು 2023 ನೇ ಸಾಲಿಗೆ ಡಾ. ಶುಭ ವಿ. ಮಾಜಿ ಪ್ರತಿಷ್ಠಿತ ವಿಜ್ಞಾನಿ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಸಿಎಸ್ಐಆರ್ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್, ಬೆಂಗಳೂರು ಮತ್ತು ಪ್ರೊ.ಮದನ್ರಾವ್ ಹಿರಿಯ ಪ್ರಾಧ್ಯಾಪಕರು (I) ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ, ಜಿಕೆವಿಕೆ, ಕ್ಯಾಂಪಸ್ ಬಳ್ಳಾರಿ ರಸ್ತೆ, ಬೆಂಗಳೂರು ಅವರುಗಳು  ಭಾಜನರಾಗಿದ್ದಾರೆ.

ಡಾ. ರಾಜಾರಾಮಣ್ಣ ವಿಜ್ಞಾನಿ ರಾಜ್ಯ ಪ್ರಶಸ್ತಿ: ರಾಜ್ಯದಲ್ಲಿ ವಿಜ್ಞಾನ ಶಿಕ್ಷಣ / ವಿಜ್ಞಾನದ ಇತಿಹಾಸ ಮತ್ತು ತತ್ವಜ್ಞಾನ / ವಿಜ್ಞಾನ ಮತ್ತು ಸಮಾಜ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇಬ್ಬರು ಹಿರಿಯ ವಿಜ್ಞಾನಿ / ಇಂಜಿನಿಯರ್ಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ರೂ. 1,50,000/-ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿಗೆ 2022 ನೇ ಸಾಲಿಗೆ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ನಿರ್ದೇಶಕರು (ಸಂಶೋಧನೆ) ಮತ್ತು ಪ್ರಾಧ್ಯಾಪಕರಾದ ಪ್ರೊ.ಕಾಪೇಟ್ಟು ಸತ್ಯಮೂರ್ತಿ ಹಾಗೂ ಹುಬ್ಬಳ್ಳಿಯ ಕೆಎಲ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಪ್ರಭುಗೌಡ ಎಂ.ಗೌಡ ಪಾಟೀಲ್, ಮತ್ತು 2023 ನೇ ಸಾಲಿಗೆ ವಿಜ್ಞಾನದ ಇತಿಹಾಸ ಮತ್ತು ತತ್ವಶಾಸ್ತ್ರ / ವಿಜ್ಞಾನ ಮತ್ತು ಸಮಾಜ / ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಡಾ. ಸಿ.ವಿ. ಯಲಮಗ್ಗಡ್, ವಿಜ್ಞಾನಿಎಫ್, ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ, ಅರ್ಕಾವತಿ ಸರ್ವೆ ನಂ.7, ಶಿವನಾಪುರ, ದಾಸನಪುರ ಹೋಬಳಿ, ಬೆಂಗಳೂರು ಹಾಗೂ ಪ್ರೊ.ರಾಮನಾಥನ್ ಸೌಧಾಮಿನಿ, ಹಿರಿಯ ಪ್ರಾಧ್ಯಾಪಕರು, ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಬಳ್ಳಾರಿ ರಸ್ತೆ, ಬೆಂಗಳೂರು ಅವರುಗಳು ಭಾಗಿಯಾಗಿದ್ದಾರೆ.

ಸರ್. ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ: ಪ್ರಶಸ್ತಿಗಳನ್ನು ರಾಜ್ಯದ ಯುವ ವಿಜ್ಞಾನಿಗಳನ್ನು ಪೆÇ್ರೀತ್ಸಾಹಿಸಲು, ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ಭೌತ ವಿಜ್ಞಾನ ಮತ್ತು ಗಣಿತಶಾಸ್ತ್ರ, ರಾಸಾಯನ ವಿಜ್ಞಾನ, ಜೀವ ವಿಜ್ಞಾನ, ವೈದ್ಯಕೀಯ ವಿಜ್ಞಾನ,  ಕೃಷಿ ವಿಜ್ಞಾನ ಮತ್ತು ಪಶುಸಂಗೋಪನೆಗಳ ಐದು ಕ್ಷೇತ್ರಗಳಲ್ಲಿ ಪ್ರತಿವರ್ಷ 5 ವಿಜ್ಞಾನಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. 2022ನೇ ಸಾಳಿಗೆ ಭೌತವಿಜ್ಞಾನದಲ್ಲಿ ಪ್ರೊ. .ಪಿ.ಜ್ಞಾನಪ್ರಕಾಶ್, ಪ್ರಾಧ್ಯಾಪಕರು, ಭೌತಶಾಸ್ತ್ರ ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಮೈಸೂರು, ರಸಾಯನಿಕ ವಿಜ್ಞಾನದಲ್ಲಿ ಪ್ರೊ. ಸತೀಶ್ ಅಮೃತರಾವ್ ಪಾಟೀಲ್, ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಎಸ್ಎಸ್ಸಿಯು, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು,

ವೈದ್ಯಕೀಯ ವಿಜ್ಞಾನದಲ್ಲಿ ಡಾ. ರಾಜ್ಕುಮಾರ್ ಟಿ, ಪ್ರಾಧ್ಯಾಪಕರು, ಬಯೋ ಕೆಮೆಸ್ಟ್ರಿ ವಿಭಾಗ, ಜೆ.ಎಸ್.ಎಸ್. ವೈಧ್ಯಕೀಯ ಕಾಲೇಜು, ಜೆ.ಎಸ್.ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಆಕಾಡೆಮಿ, ಎಸ್.ಎಸ್. ನಗರ, ಮೈಸೂರು, ಜೀವವಿಜ್ಞಾನ ವಿಭಾಗದಲ್ಲಿ ಡಾ. ಮೋಹನ್ ಸಿ.ಡಿ, ಹಿರಿಯ ವಿಜ್ಞಾನಿ, ಎಫ್..ಎಸ್.ಟಿ ವಿಭಾಗ, ಸಿ.ಎಸ್..ಆರ್. ಇಂಡಿಯನ್ ಇನ್ಸಿಟ್ಯೂಟ್ ಆಫ್ ಟಾಕ್ಸಿಕಾಲಜಿ ಸಂಶೋಧನೆ, ವಿರ್ಶವ ವಿಜ್ಞಾನ ಭವನ, 31, ಮಹಾತ್ಮ ಗಾಂಧಿ ಮಾರ್ಗ ಲಕ್ನೋ ಉತ್ತರ ಪ್ರದೇಶ, ಕೃಷಿ ವಿಜ್ಞನ ಮತ್ತು ಪಶು ಸಂಗೋಪನೆ ವಿಭಾಗದಲ್ಲಿ ಡಾ. ಸತೀಶ್ ಬಿ ಶಿವಚಂದ್ರ, ಪ್ರಧಾನ ವಿಜ್ಞಾನಿ, .ಸಿ..ಆರ್. ನ್ಯಾಷನಲ್ ಇನ್ಸಿಟ್ಟಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸಿಜ್ ಇನ್ಫರ್ಮೆಟಿಕ್ಸ್ (ನಿವೇದಿ) ಬೆಂಗಳೂರು ಮತ್ತು 2023ನೇ ಸಾಲಿಗೆ ಗಣಿತ ವಿಜ್ಞಾನ ವಿಭಾಗದಲ್ಲಿ ಪ್ರಸನ್ನಕುಮಾರ ಬಿ.ಸಿ, ಪ್ರಾಧ್ಯಾಪಕರು, ಗಣಿತ ಶಾಸ್ತ್ರ ವಿಭಾಗ, ದಾವಣೆಗೆರೆ ವಿಶ್ವವಿದ್ಯಾಲಯ, ಶಿವಗಂಗೋತ್ರಿ, ದಾವಣಗೆರೆ, ರಸಾಯನಿಕ ವಿಜ್ಞಾನ ವಿಭಾಗದಲ್ಲಿ ಪ್ರೊ. ನರೇಂದ್ರ ರೆಡ್ಡಿ, ಪ್ರಾಧ್ಯಾಪಕರು, ಇನ್ಕ್ಯೂಬೇಷನ್ ಇನ್ನೋವೇಷನ್ ರಿಸರ್ಚ್ ಮತ್ತು ಕನ್ಸಲ್ಟೆನ್ಸಿ ಕೇಂದ್ರ, ಜ್ಯೋತಿ ಇನ್ಸಿಟ್ಯೂಷನ್ ಆಫ್ ಟೆಕ್ನಾಲಜಿ ಕ್ಯಾಂಪಸ್ ತಥಾಗುಣಿ ಪೋಸ್ಟ್, ಬೆಂಗಳೂರು, ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಡಾ. ದ್ವಾರಕನಾಥ್ ಶ್ರೀನಿವಾಸ್ ಪ್ರಾಧ್ಯಾಪಕರು ಮತ್ತು ಘಟಕದ ಮುಖ್ಯಸ್ಥರು,

ನರಶಸ್ತ್ರ ಚಿಕಿತ್ಸಾ ವಿಭಾಗ, ನ್ಯೂರೋ ಸೆಂಟರ್, ನಿಮಾನ್ಸ್ ಬೆಂಗಳೂರು, ಜೀವ ವಿಜ್ಞಾನ ವಿಭಾಗದಲ್ಲಿ ಪ್ರೊ. ಸಂದೀಪ್ ಎಂ. ಈಶ್ವರಪ್ಪ , ಅಸೋಸಿಯೇಟ್ ಪ್ರೊಫೆಸರ್, ಬಯೋ ಕೆಮಿಸ್ಟ್ರಿ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಕೃಷಿ ವಿಜ್ಞಾನ ಪಶು ಸಂಗೋಪನಾ ವಿಭಾಗದಲ್ಲಿ ಡಾ. ಬಸವಪ್ರಭು ಎಲ್. ಪಾಟೀಲ್, ಪ್ರಧಾನ ವಿಜ್ಞಾನಿ, (ಕೃಷಿ ಜೈವಿಕ ತಂತ್ರಜ್ಞಾನ) ಜೈವಿಕ ತಂತ್ರಜ್ಞಾನ ವಿಭಾಗ, .ಸಿ..ಆರ್ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಟಿಕಚರಲ್ ರಿಸಚ್, ಬೆಂಗಳೂರು ಅವರುಗಳು ಭಾಜನರಾಗಿದ್ದಾರೆ.  

ಪ್ರೊ. ಸತೀಶ್ ಧವನ್ ಯುವ ಇಂಜಿನಿಯರ್  ರಾಜ್ಯ ಪ್ರಶಸ್ತಿ: ಪ್ರಶಸ್ತಿಗಳನ್ನು ರಾಜ್ಯದ ಯುವ ಇಂಜಿನಿಯರುಗಳನ್ನು ಪ್ರೊತ್ಸಾಹಿಸಲು ಅವರ ವಿಶಿಷ್ಟ ಕಾರ್ಯ ಸಾಧನೆಯನ್ನು ಪರಿಗಣಿಸಿ, ಇಂಜಿನಿಯರಿಂಗ್ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರತಿ ವರ್ಷ 4 ಇಂಜಿನಿಯರ್ಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಸದರಿ ಪ್ರಶಸ್ತಿಗೆ 2022ನೇ ಸಾಲಿಗೆ ಇಂಜಿನಿಯರಿಂಗ್ ವಿಜ್ಞಾನ ಕ್ಷೇತ್ರದಲ್ಲಿ ಪ್ರೊ. ಕಲಬುರಗಿ ವಿ.ಟಿ.ಯು ಸಂಯೋಜಕರು ಹಾಗೂ ಪ್ರಾಧ್ಯಪಕರಾದ ಪ್ರೊ. ಶುಭಾಂಗಿ ದಿಗಂಬರ್ ಚಿಕ್ತೆ, ಮಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಹೇಮಂತ್ ಕುಮಾರ,

ಕಲಬುರಗಿಯ ಪಿ.ಡಿ.. ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರೊ. ಜಯಶ್ರೀ ಅಗರಖೇಡ್, ಬೆಂಗಳೂರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಡಾ. ಮಾದೇವ ನಾಗರಾಳ್ ಮತ್ತು 2023ನೇ ಸಾಲಿಗೆ ಬೆಂಗಳೂರು ...ಟಿಯ ಅಸೋಸಿಯೇಟ್ ಪ್ರೊ. ಮಾಧವ ರಾಮಕೃಷ್ಣರಾವ್, ಬೆಂಗಳೂರು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್, ಧಾರವಾಡ  ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸೋಸಿಯೇಟ್ ಪ್ರೊ. ಅಮರನಾಥ ಹೆಗಡೆ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಅಸೋಸಿಯೇಟ್ ಪ್ರೊ. ಶ್ರೀಶರಾವ್. ಎಂ.ವಿ ಅವರುಗಳು ಭಾಜನರಾಗಿದ್ದಾರೆ.

ಡಾ. ಕಲ್ಪನಾ ಚಾವ್ಲಾ ಮಹಿಳಾ ಯುವ ವಿಜ್ಞಾನಿ ಪ್ರಶಸ್ತಿ : ಪ್ರಶಸ್ತಿಗೆ ರಾಜ್ಯದ ಯುವ ಮಹಿಳಾ ವಿಜ್ಞಾನಿ / ಇಂಜಿನಿಯರ್ಗಳನ್ನು ಪ್ರೊತ್ಸಾಹಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅವರ ವಿಶಿಷ್ಟ ಕಾರ್ಯಸಾಧನೆಯನ್ನು ಪರಿಗಣಿಸಿ, ಪ್ರತಿವರ್ಷ ಒಬ್ಬ ಮಹಿಳಾ ಯುವ ವಿಜ್ಞಾನಿ / ಇಂಜಿನಿಯರ್ಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

2022ನೇ ಸಾಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಸೂರಿನ ಪ್ಲಾಂಟೇಷನ್ ಉತ್ಪನ್ನಗಳು, ಮಸಾಲೆಗಳು ಮತ್ತು ಸುವಾಸನೆ ತಂತ್ರಜ್ಞಾನ ಇಲಾಖೆಯ  ಹಿರಿಯ ಪ್ರಧಾನ ವಿಜ್ಞಾನಿ ಡಾ. ಪುಷ್ಪ ಎಸ್. ಮೂರ್ತಿ ಮತ್ತು 2023ನೇ ಸಾಲಿಗೆ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಎಸ್..ಆರ್.ಬಿ ಸಂಶೋಧನಾ ವಿಜ್ಞಾನಿ ಡಾ. ಸಂಧ್ಯಾ ಶೆಣೈ ಯು ಅವರುಗಳು ಭಾಜನರಾಗಿರುತ್ತಾರೆ.
ಸರ್. ಸಿ.ವಿ. ರಾಮನ್, ಪೆÇ್ರ. ಸತೀಶ್ಧವನ್ ಮತ್ತು ಡಾ. ಕಲ್ಪನಾ ಚಾವ್ಲಾ ಪ್ರಶಸ್ತಿಗಳು ರೂ. 1,00,000/- ನಗದು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತವೆ.

 

- Advertisement -  - Advertisement - 
Share This Article
error: Content is protected !!
";