ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ರಾಜ್ಯದಲ್ಲಿ ಈಗಾಗಲೇ ವಿವಿಧ ಹಂತಗಳಲ್ಲಿ ಪರೀಕ್ಷೆಗಳು ಆರಂಭ ಆಗಿವೆ. ಪಿಯುಸಿ ಪರೀಕ್ಷೆಗಳು ಮುಕ್ತಾಯವಾಗಿವೆ. 10ನೇ ತರಗತಿ ಪರೀಕ್ಷೆಗಳು ಮಾ-21 ರಿಂದ ಆರಂಭ ಆಗಲಿವೆ. ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿವಿಧ ತರಗತಿಗಳ ಪರೀಕ್ಷೆಗಳು ಶಾಲಾ ಹಂತದಲ್ಲಿ ಆರಂಭ ಆಗಿವೆ.
ಎಸ್‌ಎಸ್‌ಎಲ್‌ಸಿ ಹೊರೆತುಪಡಿಸಿ ಬಹುತೇಕ ತರಗತಿಗಳ ಎಲ್ಲಾ ಪರೀಕ್ಷೆಗಳೂ ಇದೇ ತಿಂಗಳು ಅಂದರೆ ಮಾರ್ಚ್ ಒಳಗೆ ಮುಕ್ತಾಯ ಆಗಲಿವೆ. ಇನ್ನು ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಕಾರ, ಈ ವರ್ಷದ ಬೇಸಿಗೆ ರಜೆಗಳು ಬಹುತೇಕ ಏಪ್ರಿಲ್‌ನಲ್ಲಿಯೇ ಆರಂಭ ಆಗಲಿದ್ದು, ಮೇ ಅಂತ್ಯದವರೆಗೂ ರಜೆ ಇರಲಿದೆ. ಕಳೆದ ವರ್ಷದ ಶೈಕ್ಷಣಿಕ ಅವಧಿಯಲ್ಲಿಯೇ ಹೊರಡಿಸಿದ್ದ, ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ. 2025ನೇ ಸಾಲಿನ ಬೇಸಿಗೆ ರಜೆಗಳು ಏಪ್ರಿಲ್‌ರಿಂದಲೇ ಆರಂಭ ಆಗಲಿದ್ದು, 2025ರ ಮೇ 28ರ ವರೆಗೆ ರಜೆಗಳು ಇರಲಿವೆ ಎನ್ನುವ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ.
ಈಗಾಗಲೇ ರಾಜ್ಯದೆಲ್ಲೆಡೆ ರಣಬಿಸಿಲು ಮುಂದುವರೆದ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಯಾವಾಗ ಪರೀಕ್ಷೆಗಳನ್ನು ಮುಗಿಸಿ. ರಜೆ ನೀಡಲಾಗುತ್ತದೆ ಎಂದು ಕಾದು ಕುಳಿತ ಪೋಷಕರಿಗೆ, ನೆಮ್ಮದಿಯ ಸುದ್ದಿಯೊಂದು ಸಿಕ್ಕಾಂತಾಗಿದೆ.
ಅಧೀಕೃತ ಮಾಹಿತಿ ಪ್ರಕಾರ ಈ ವರ್ಷದ ಬೇಸಿಗೆ ರಜೆ ಏಪ್ರಿಲ್-11ರಿಂದ ಆರಂಭ ಆಗಲಿದ್ದು ಮೇ 28 ರವರೆಗೆ ಶಾಲಾ ಕಾಲೇಜ್ ಗಳು ಬೇಸಿಗೆ ರಜೆಗಳು ಇರಲಿದೆ ಎಂದು ತಿಳಿದು ಬಂದಿದೆ. ಇನ್ನು ಜೂನ್‌ಗಿಂತ ಒಂದು ವಾರ ಮುಂಚೆ, ಅಂದರೆ ಮೇ ಕೊನೆಯ ವಾರದಲ್ಲಿಯೇ ಶಾಲೆ ಕಾಲೇಜ್ ಗಳು ಪ್ರಾರಂಭವಾಗುತ್ತವೆ ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.