ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತ್ತ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಲು ಡಿಕೆಶಿ ಪ್ರಯತ್ನಪಟ್ಟರೆ ಇತ್ತ ಕೆಪಿಸಿಸಿ ಹುದ್ದೆಯಿಂದ ಡಿಕೆ ಶಿವಕುಮಾರ್ ಅವರನ್ನು ಇಳಿಸಲು ಜಾರಕಿಹೊಳಿ ತಂಡ ಮುಂದಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸುರ್ಜೇವಾಲಾ ರಾಜ್ಯಕ್ಕೆ ಬಂದು ಕರ್ನಾಟಕ ಕಾಂಗ್ರೆಸ್ ಶಾಸಕರಿಗೆ ವಾರ್ನ್‌ಕೊಟ್ಟರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಶಮನವಾಗುವ ಯಾವುದೇ ಲಕ್ಷಣಗಳು ಯಾವುದೂ ಕಾಣಿಸುತ್ತಿಲ್ಲ. ಸತೀಶ್‌ಜಾರಕಿಹೊಳಿ ಹಾಗೂ ಡಿಕೆಶಿ ನಡುವಿನ ಗುದ್ದಾಟ ತಾರಕಕ್ಕೇರಿದೆ.
ಡಿನ್ನರ್‌ಪಾಲಿಟಿಕ್ಸ್‌ಬಳಿಕ ಈಗ ಟೂರ್‌ಪಾಲಿಟಿಕ್ಸ್‌ಕಾಂಗ್ರೆಸ್ ಪಕ್ಷದಲ್ಲಿ ಆರಂಭಗೊಂಡಿದೆ. 15 -20 ಶಾಸಕರು ದುಬೈ ಪ್ರವಾಸ ನಡೆಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಆಪ್ತ ಶಾಸಕ ಆಸೀಫ್‌ಸೇಠ್‌ಹೇಳಿಕೆ ನೀಡಿದ ಬೆನ್ನಲ್ಲೆ ದುಬೈ ಟೂರಿಗೆ ಬ್ರೇಕ್ ಹಾಕಿದರೂ, ಡಿಕೆಶಿಯನ್ನು ಕಟ್ಟಿಹಾಕಲು ರಣತಂತ್ರಗಳನ್ನು ಸತೀಶ್ ಜಾರಕಿಹೊಳಿ ಹೆಣೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಕುರ್ಚಿಗೆ ಕಣ್ಣಿಟ್ಟಿದ್ದ ಡಿಕೆಶಿಗೆ ಈಗ ಕೆಪಿಸಿಸಿ ಅಧ್ಯಕ್ಷಗಿರಿ ಉಳಿಸಿಕೊಳ್ಳುವ ಸವಾಲ್‌ಎದುರಾಗಿದೆ ಎಂದು ಅಶೋಕ್ ಟೀಕಿಸಿದ್ದಾರೆ.