ಚಂದ್ರವಳ್ಳಿ ನ್ಯೂಸ್, ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷಿಗಳು ಸಿಕ್ಕಿದ್ದು, ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ. ದರ್ಶನ್ ವಿರುದ್ಧ ಸಾಕ್ಷಿ ಹೇಳಲು ಮೂವರು ಸಿದ್ಧರಾಗಿದ್ದಾರೆ. ಅವರು ಯಾರು? ಅವರು ಏನು ಹೇಳಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರು ಜೈಲು ಸೇರಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದು, ಅವರ ವಿರುದ್ಧ ಚಾರ್ಜ್ಶೀಟ್ ಕೂಡ ಸಲ್ಲಿಕೆ ಆಗಿದೆ. ಈ ಪ್ರಕರಣದಲ್ಲಿ ಬರೋಬ್ಬರಿ 3991 ಪುಟಗಳ ಚಾರ್ಜ್ಶೀಟ್ ನ್ಯಾಯಾಲಯದ ಕೈ ಸೇರಿದೆ. ದರ್ಶನ್ ವಿರುದ್ಧ ಸಾಕ್ಷಿ ಹೇಳಲು ಮೂವರು ಸಿದ್ಧರಾಗಿದ್ದಾರೆ. ಅವರು ಯಾರು? ಅವರು ಏನು ಹೇಳಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಕೋರ್ಟ್ನಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಈಗ ದರ್ಶನ್ ವಿರುದ್ಧ 3 ಜನರು ಸಾಕ್ಷಿ ಹೇಳಲು ರೆಡಿ ಆಗಿದ್ದಾರೆ. ಅದರಲ್ಲಿ ಸಾಕ್ಷಿ ನಂಬರ್ 1 ಶೆಡ್ಡಿನ ವಾಚ್ಮ್ಯಾನ್. ದರ್ಶನ್ ಶೆಡ್ಗೆ ಬಂದಿದ್ದು, ಹೋಗಿದ್ದು ಸೇರಿ ಎಲ್ಲಾ ಮಾಹಿತಿ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಯಾರು ಬಂದರು, ಯಾವಾಗ ಬಂದರು, ಯಾವ ವಾಹನಗಳು ಬಂದಿದ್ದವು ಎಂದು ಮಾಹಿತಿ ನೀಡಿದ್ದಾರೆ. ರೇಣುಕಾ ಸ್ವಾಮಿ ಬದುಕಿದ್ದಾಗ ವಾಚ್ ಮ್ಯಾನ್ ನೋಡಿದ್ದರು ಎನ್ನಲಾಗಿದೆ.
ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಎರಡು ಹಾಗೂ ಮೂರನೇ ಪ್ರತ್ಯಕ್ಷ ಸಾಕ್ಷಿ ಎಂದು ಪರಿಗಣಿಸಲಾಗಿದೆ. ರೇಣುಕಾ ಸ್ವಾಮಿಗೆ ಎಷ್ಟು ಸಮಯ ಹೊಡೆದರು, ಯಾರು ಏನು ಮಾಡಿದರು ಎಂಬ ಸಂಪೂರ್ಣ ಮಾಹಿತಿಯನ್ನು ಸಾಕ್ಷಿದಾರರು ನೀಡಿದ್ದಾರೆ. ಇವುಗಳು ದರ್ಶನ್ಗೆ ಮುಳುವಾಗುವ ಸಾಧ್ಯತೆ ಇದೆ.
ದರ್ಶನ್ ಸೇರಿ ಬಂಧನಕ್ಕೆ ಒಳಗಾದ 17 ಮಂದಿಯಲ್ಲಿ ಯಾರು ಕೊಲೆ ಮಾಡಿದ್ದು ಎಂಬುದು ಇನ್ನೂ ಸಾಬೀತಾಗಿಲ್ಲ. ಸದ್ಯ ಎಲ್ಲರ ಭಾಗಿದಾರತ್ವ ಇರುವ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಈ ಪೈಕಿ ಯಾರು ತಪ್ಪು ಮಾಡಿದ್ದಾರೆ, ಯಾರ ಪಾತ್ರ ಎಷ್ಟಿದೆ ಎನ್ನುವ ವಿಚಾರ ಕೋರ್ಟ್ ವಿಚಾರಣೆ ಬಳಿಕ ಗೊತ್ತಾಗಬೇಕಿದೆ.