ಗಂಧದ ಮರ ಕಡಿದ ಓರ್ವ ಸೆರೆ: ಇಬ್ಬರು ನಾಪತ್ತೆ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಆಯನೂರು ಹೋಬಳಿ ಕೂಡಿ ಗ್ರಾಮ ಸರ್ವೆ ನಂಬರ್ 33ರ ಸೀಗೆಹಳ್ಳ ಡ್ಯಾಮ್ ನ ಹತ್ತಿರ ಮೂರು ಶ್ರೀಗಂಧ ಮರಗಳನ್ನು ಅಕ್ರಮ ಕಡಿತಲೆ ಮಾಡಿದ ಆರೋಪಿಯನ್ನು ಹಣಗೆರೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

- Advertisement - 

ಅರೆನೆಲ್ಲಿ ಗ್ರಾಮದ ವಾಸಿ ಕಲ್ಲುಬಂಡೆ ಮಂಜಪ್ಪ ಬಿನ್ ಸಿದ್ದಪ್ಪ ಬಂಧಿತ ವ್ಯಕ್ತಿ. ಅರಣ್ಯ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ಈತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

- Advertisement - 

ತಲೆ ಮರೆಸಿಕೊಂಡ ಇದೇ ಗ್ರಾಮದ ರಾಮಕೃಷ್ಣ ಬಿನ್ ಹನುಮಂತಯ್ಯ ಹಾಗೂ ವಿಜಯ್ ಕುಮಾರ್ ಬಿನ್ ಉಮೇಶ ಇವರ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಅರಣ್ಯಾಧಿಕಾರಿ ಅರವಿಂದ್ ಪಿ ಹಾಗೂ ಅವರ ಸಿಬ್ಬಂದಿಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಶಿವಕುಮಾರ್ . ಕೊಟ್ರೇಶ ದಾನಮ್ಮನವರ್ ಮಂಜುನಾಥ್, ಗಿರೀಶ್, ಮಾರುತಿ, ರಾಕೇಶ್ ಭಾಗಿಯಾಗಿದ್ದರು.

- Advertisement - 

Share This Article
error: Content is protected !!
";