ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿ ಹರೀಶ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ ಗ್ರಾಮ ಆಡಳಿತಾಧಿಕಾರಿ ಲಂಚಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

- Advertisement - 

ಬುಧವಾರ ಮಧ್ಯಾಹ್ನ ಸುಮಾರು ೧೨.೩೦ರ ಸಮಯದಲ್ಲಿ ಗ್ರಾಮದ ಚನ್ನಕೇಶವ ಎಂಬುವವರ ಜಮೀನು ಪೌತಿಖಾತೆಗೆ ೧೦ ಸಾವಿರ ರೂ ಲಂಚ ಕೊಡುವಂತೆ ಗ್ರಾಮ ಆಡಳಿತಾಧಿಕಾರಿ ಹರೀಶ್ ಬೇಡಿಕೆ ಇಟ್ಟಿದ್ದಲ್ಲದೆ,

- Advertisement - 

ಕಚೇರಿಯಲ್ಲಿ ಚನ್ನಕೇಶವರಿಂದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿ ವಾಸುದೇವ್ ಮತ್ತು ಸಿಬ್ಬಂದಿ ವರ್ಗ ಬೀಸಿದ ಬಲೆಗೆ ಸಿಕ್ಕಿದ್ದಾನೆ.

ಈ ಬಗ್ಗೆ ಚನ್ನಕೇಶವ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಇದರ ಜೊತೆಗೆ ಸಹಕರಿಸಿದ ಬೋರೇಯ್ಯ ಎಂಬುವವರನ್ನು ಸಹ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement - 

 

 

Share This Article
error: Content is protected !!
";