ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಎಲ್ಲಿರುವೆ ಶ್ರೀನಿವಾಸ
ಶ್ರೀನಿವಾಸ
ನನ್ನ ಗೆಳೆಯ
ಮಿಡ್ಲ್ ಸ್ಕೂಲಿನಲ್ಲಿ
ನನ್ನ ಜೊತೆಗಾರ
ಮನೆಯಿಂದ ಸ್ಕೂಲಿಗೆ
ಹೋಗಿ ಬರುತ್ತಿದ್ದವನಿಗೆ
ದಾರಿಯುದ್ದಕ್ಕೂ
ಕಿಚಾಯಿಸಿ ಕೆಣಕುತ್ತಿದ್ದೆ
ಅದು ಆ ಕಾಲದ raging
ನೋಡಲು ಬಹು ಸುಂದರ
ನವಿಲುಗರಿಯ ಕಿರೀಟ
ಧರಿಸಿದರೆ ಕೃಷ್ಣನಂತೆಯೂ
ತಲೆ ಬೋಳಿಸಿ
ಕೋಲು ಹಿಡಿದರೆ
ಗಾಂಧಿಯೆಂತೆಯೂ
ಕಾಣುವ ಗಾಂಧಿ ಕಿವಿಯ
ಕೋಲು ಮುಖದ
ಸಂಪಿಗೆ ಮೂಗಿನ
ಸೊಗಸುಗಾರ
ಅವನೇ ಶ್ರೀನಿವಾಸ
ನನಗೀಗ ಎಪ್ಪತ್ತು
ಅವನಿಗೂ ಅಷ್ಟೇ
1969 ರಲ್ಲಿ
ದಾವಣಗೆರೆಯಲ್ಲಿ
ಅವರಕ್ಕನ ಮನೆಯಲ್ಲಿದ್ದವ
ಕೆಣಕಿಸಿಕೊಂಡವ
ತಿರುಗಿಬಿದ್ದಮೊಮ್ಮೆ
ನನ್ನ ಕೆಡವಿಕೊಂಡ
ಜಾಡಿಸಿ ಒದ್ದನೊಮ್ಮೆ
ಅಂದಿನಿಂದಲೇ
ಆತ್ಮೀಯ ಸ್ನೇಹಿತರಾದೆವು
ಅಂದು
ವರ್ಗಾವಣೆಗೊಂಡು
ಅಕ್ಕನೊಂದಿಗೆ ಹೋದವನು ಇಂದಿಗೂ
ಕಂಡಿಲ್ಲ ಗಾಂಧಿ ಕಿವಿಯ
ಬಾಳೆ ದಿಂಡಿನ ಬಣ್ಣದ
ನೀಳ ಮೂಗಿನ
ಶ್ರೀನಿವಾಸನ ಹುಡುಕ್ಕುತ್ತಿರುವೆ
ಎಲ್ಲಿರುವೆ ಶ್ರೀನಿವಾಸ
ನಾನು ಮಿಡ್ಲ್ ಸ್ಕೂಲ್
ಗೆಳೆಯ…
ಕವಿತೆ-ಗುಜ್ಜರ್, ದಾವಣಗೆರೆ.