ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಬೆಂಗಳೂರು ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್ಸಿ (ಆನರ್ಸ್)ಕೃಷಿ, ಬಿ. ಎಸ್ಸಿ (ಆನರ್ಸ್)ಕೃಷಿ ವ್ಯವಹಾರ ನಿರ್ವಹಣೆ ಹಾಗೂ ಬಿ.ಟೆಕ್ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ಕೃಷಿ ಕಾರ್ಯನುಭವದ,ಕಾರ್ಯಗಾರನ್ನು ಅಂತರಹಳ್ಳಿಯಲ್ಲಿಆಯೋಜಿಸಲಾಗಿತ್ತು.
ಶಿಬಿರಾರ್ಥಿಗಳು ರೈತರೊಂದಿಗೆ ಹಲವು ಬಗೆಯ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹಲವಾರು ರೈತ ಸಹಕಾರಿ ಕಾರ್ಯಕ್ರಮಗಳನ್ನು ಮಾಡಿದ್ದು, ರೈತರ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬಿಡುಗಡೆಗೊಳಿಸಿರುವ ವಿವಿಧ ರೀತಿಯ ನೂತನ ತಳಿಗಳು ಹಾಗೂ ಕೃಷಿ ತಂತ್ರಜ್ಞಾನಗಳೊಂದಿಗೆ ವೈವಿಧ್ಯಮಯ ಬೆಳೆ ಪದ್ಧತಿಗಳಿಗೆ ಅನುಗುಣವಾಗಿ ರೈತರ ಸಹಭಾಗಿತ್ವದಲ್ಲಿ ಬೆಳೆಗಳನ್ನು ಬೆಳೆಸಿ ಸುತ್ತಮುತ್ತಲಿನ ಎಲ್ಲಾ ಪ್ರಗತಿ ರೈತ ಭಾಂದವರಿಗೆ ಪರಿಚಯಿಸಲಾಯಿತು.
ಸಮಾರಂಭದಲ್ಲಿ, ಕೃಷಿ ವಿದ್ಯಾರ್ಥಿಗಳು ನಿರ್ಮಿಸಿರುವ ‘ಹಸಿರು ಸಿರಿ‘ ಬೆಳೆಗಳ ತಾಕು ಮತ್ತು ಪೌಷ್ಟಿಕ ಕೈ ತೋಟವನ್ನು ಕೃಷಿ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ.ಎಸ್.ವಿ ಸುರೇಶರವರು ಉದ್ಘಾಟಿಸಿದರು.
ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ ಪೌಷ್ಟಿಕ ಕೈ ತೊಟ ಸಮಗ್ರ ಬೇಸಾಯ ಕೃಷಿ. ಪದ್ಧತಿಗಳು. ಕುರಿ, ಕೋಳಿ, ಮೇಕೆ ಸಾಕಾಣಿಕೆ .
ವಿವಿಧ ಬಗೆಯ ಔಷದಿ ಸಸಿಗಳು. ಜಲಕೃಷಿ (ಹೈಡ್ರೋಫೋನಿಕ್ಸ್) ಸಮಗ್ರ ಕೀಟ ನಿರ್ವಹಣೆ. ಸಾವಯವ ಕೃಷಿ ಕುರಿತಾದ ಮಾಹಿತಿ ಜೈವಿಕ ಇಂಧನ ಸಸ್ಯಗಳ ತಾಕು. ಕಿರು ಜಲನಯನ ಮಾದರಿ .
ಕೃಷಿ ಯಂತ್ರೋಪಕರಣಗಳು. ರೈತ ಸಹಭಾಗಿತ್ವ ತಂತ್ರಜ್ಞಾನ ಪ್ರಾತ್ಯೆಕ್ಷಿಕೆಗಳು ತಾಕಿ ನಾ ವಿಶೇಷ ಆಕರ್ಷಣೆಗಳಾಗಿದ್ದವು
ಈ ಸಂದರ್ಭದಲ್ಲಿ, ಕೃಷಿ ವಿಸ್ತರಣೆ ನಿರ್ದೇಶಕ ಡಾ.ವೈ.ಎನ್. ಶಿವಲಿಂಗಯ್ಯ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ.ಬಿ. ಜಿ ಹನುಮಂತರಾಯಪ್ಪ, ಗ್ರಾಮಪಂಚಾಯತಿ ಅಧ್ಯಕ್ಷರಾದ ಎಂ ಶ್ರೀನಿವಾಸ್ ಮತ್ತು ಶಿಬಿರಾಧಿಕಾರಿ ಡಾ.ಹೆಚ್. ಕೆ ಪಂಕಜ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.