E-PAPER
24 Nov 2026, 04:36:30 AM|
Gold₹12536/gGold24K ₹12,536/g - 22K ₹11,481/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮರೆಯಾಗುತ್ತಿರುವ ಹಿರಿಯರ ತಲೆಮಾರು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಬ್ಬೊಬ್ಬರಾಗಿ ನಮಗೆ ಶಾಶ್ವತ ವಿದಾಯ ಹೇಳುತ್ತಾ ಒಂದು ಅದ್ಭುತ ತಲೆಮಾರು ನಿಧಾನವಾಗಿ ನಮ್ಮಿಂದ ದೂರವಾಗುತ್ತಿದೆ.
1. ಊಟ ಮಾಡುವ ಮೊದಲು ಇತರರ ಹಸಿವನ್ನು ಅರಿತ ತಲೆಮಾರು.
2. ಇಕ್ಕಟ್ಟಿನ ಮನೆಗಳಲ್ಲೂ ಅಪಾರ ಪ್ರೀತಿ ಮತ್ತು ಸಂತೋಷದಿಂದ ಬದುಕಿದ ತಲೆಮಾರು.
3. ಜವಾಬ್ದಾರಿಯನ್ನು ಅರಿತ ತಲೆಮಾರು. "ನಾನು" ಎನ್ನುವುದಕ್ಕಿಂತ "ನಾವು" ಎಂದು ಬದುಕಿದ ತಲೆಮಾರು.

 news_1789431932_0_820.webp

 

4. ಪದವಿಗಳಿಲ್ಲದಿದ್ದರೂ ಜೀವನವನ್ನೇ ಓದಿದ ತಲೆಮಾರು.
5. ಗಡಿಯಾರವಿಲ್ಲದಿದ್ದರೂ ಸಮಯವನ್ನು ಸರಿಯಾಗಿ ಬಳಸಿದ ತಲೆಮಾರು.
6. ಇಂಟರ್ನೆಟ್ ಇಲ್ಲದಿದ್ದರೂ ಜ್ಞಾನವನ್ನು ಸಂಪಾದಿಸಿದ ತಲೆಮಾರು.
7. ಕ್ಯಾಲ್ಕುಲೇಟರ್ ಇಲ್ಲದಿದ್ದರೂ ಲೆಕ್ಕ ಹಾಕಬಲ್ಲ ತಲೆಮಾರು.

8. ಮೊಬೈಲ್ ಫೋನ್‌ಗಳಿಲ್ಲದಿದ್ದರೂ ಸ್ನೇಹ ಮತ್ತು ಮಾತುಕತೆಯಲ್ಲಿ ಕೊರತೆಯಿಲ್ಲದ ತಲೆಮಾರು.
9. ಟಿವಿ ಇಲ್ಲದಿದ್ದರೂ ಸಂತೋಷದಿಂದ ಸಮಯ ಕಳೆಯುತ್ತಿದ್ದ ತಲೆಮಾರು.
10. GPS ಇಲ್ಲದಿದ್ದರೂ ಗುರಿಯನ್ನು ನಿಖರವಾಗಿ ತಲುಪಿದ ತಲೆಮಾರು.
11. ತಂತ್ರಜ್ಞಾನವಿಲ್ಲದಿದ್ದರೂ ಸುಖ-ಸಂತೋಷದಿಂದ ಬದುಕಿದ ತಲೆಮಾರು.

12. ಎಸಿ ಅಥವಾ ಕೂಲರ್ ಇಲ್ಲದಿದ್ದರೂ ತೆರೆದ ಗಾಳಿಯಲ್ಲಿ ಸುಖವಾಗಿ ನಿದ್ರಿಸಿದ ತಲೆಮಾರು.
13. ಮಿನರಲ್ ವಾಟರ್ ಬದಲು ಬಾವಿ ಅಥವಾ ಕೆರೆಯ ನೀರು ಕುಡಿದು ಆರೋಗ್ಯವಾಗಿ ಬದುಕಿದ ತಲೆಮಾರು.
14. ಪಿಜ್ಜಾ, ಬರ್ಗರ್ ಇಲ್ಲದೇ ಅತ್ತಿ ಹಣ್ಣು,ಮಿಠಾಯಿ, ಮಂಡಕ್ಕಿ ಮುಂತಾದ ಸರಳ ಆಹಾರಗಳಲ್ಲಿ ಸಂತೋಷ ಕಂಡ ತಲೆಮಾರು.

15. ರಾತ್ರಿ ಮನೆಯ ಮುಂಭಾಗದಲ್ಲಿ ಕುಳಿತು ಕಥೆ ಹೇಳುತ್ತಾ ಕಾಲ ಕಳೆಯುತ್ತಿದ್ದ ತಲೆಮಾರು.
16. ಆರು ವರ್ಷದವರೆಗೆ ಮಕ್ಕಳ ಬಾಲ್ಯವನ್ನು ಆಟ-ಪಾಟಗಳಿಂದ ತುಂಬಿಸಿದ ತಲೆಮಾರು.
17. ಉಚಿತ ಸರ್ಕಾರಿ ಶಾಲೆಗಳಲ್ಲಿ ತಾಯಿನುಡಿಯಲ್ಲಿ ಶಿಕ್ಷಣ ನೀಡಿ, ಮಕ್ಕಳು ಹಿಂದೀ ಮತ್ತು ಆಂಗ್ಲದಲ್ಲೂ ಪಾಂಡಿತ್ಯ ಗಳಿಸುವಂತೆ ಮಾಡಿದ ತಲೆಮಾರು.

18. ಹಲವು ಕಿಲೋಮೀಟರ್ ದೂರವನ್ನೂ ಸುಲಭವಾಗಿ ನಡೆದು ಹೋಗುತ್ತಿದ್ದ ತಲೆಮಾರು.
19. ಶಾಲೆಯಲ್ಲಿ ಶಿಕ್ಷಕರು ತಪ್ಪು ಮಾಡಿದ ಮಗುವಿಗೆ ಹೊಡೆದರೆ, ಮನೆಯಲ್ಲಿ ಮತ್ತಷ್ಟು ಶಿಸ್ತು ಕಲಿಸಿದ ತಲೆಮಾರು.
20. ಬೀದಿ ನಾಟಕ, ತೊಗಲು ಗೊಂಬೆಯಾಟ ಮತ್ತು ಪುರಾಣ ಕಥೆಗಳನ್ನು ಆಸ್ವಾದಿಸಿದ ತಲೆಮಾರು.

21. ಸೆನ್ಸಾರ್ ಅಗತ್ಯವಿಲ್ಲದ ಅರ್ಥಪೂರ್ಣ ಕಪ್ಪು-ಬಿಳಿ ಸಿನಿಮಾಗಳನ್ನು ನೋಡಿದ ತಲೆಮಾರು.
22. ಮನೆಯ ಬಾಗಿಲನ್ನು ರಂಗೋಲಿಯಿಂದ ಅಲಂಕರಿಸಿದ ತಲೆಮಾರು.
23. ಯೋಗ, ಜಿಮ್ ಅಥವಾ ವ್ಯಾಯಾಮ ಕೇಂದ್ರಗಳಿಲ್ಲದೆ ಕಷ್ಟಪಟ್ಟು ದುಡಿದು, ಬೆವರು ಸುರಿಸಿ ದೀರ್ಘಾಯುಷ್ಯ ಪಡೆದ ತಲೆಮಾರು.

24. ಬಂಧು-ಬಳಗ ಮತ್ತು ಸಂಬಂಧಗಳಿಗೆ ಮೌಲ್ಯ ನೀಡಿದ ತಲೆಮಾರು.
25. ಆಸ್ತಿಗಿಂತ ಪ್ರೀತಿ ಮತ್ತು ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ ತಲೆಮಾರು. 26. ಕೂಡು ಕುಟುಂಬಗಳಲ್ಲಿ ಸಂತೋಷದಿಂದ ಬದುಕಿದ ತಲೆಮಾರು.

27. ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಿಕೊಂಡ ತಲೆಮಾರು.
28. ವ್ಯಾಪಾರದಲ್ಲಿ ಕಲಬೆರಕೆಗೆ ಅವಕಾಶ ಕೊಡದ ತಲೆಮಾರು.
29. ಇತರರ ಒಳಿತನ್ನೇ ಬಯಸಿದ ತಲೆಮಾರು.
30. ನ್ಯಾಯ, ಪ್ರಾಮಾಣಿಕತೆಯಿಂದ ಯಾರನ್ನೂ ಮೋಸ ಮಾಡದೆ ಬದುಕಿದ ತಲೆಮಾರು.

31. ಎಂತಹ ಕಠಿಣ ಆಹಾರವನ್ನೂ ಜೀರ್ಣಿಸಬಲ್ಲ ದೇಹ ಹೊಂದಿದ್ದ ತಲೆಮಾರು. 32. ಕಾರ್ಪೊರೇಟ್ ಆಸ್ಪತ್ರೆಗಳಿಲ್ಲದಿದ್ದರೂ ಆರೋಗ್ಯದಿಂದ ಬದುಕಿದ ತಲೆಮಾರು.
33. ಹೃದಯಾಘಾತ, ಕ್ಯಾನ್ಸರ್‌ಗಳ ಬಗ್ಗೆ ಅಷ್ಟಾಗಿ ತಿಳಿಯದ ತಲೆಮಾರು.
34. ರಕ್ತದೊತ್ತಡ ಮತ್ತು ಮಧುಮೇಹವನ್ನು ದೂರವಿಟ್ಟ ತಲೆಮಾರು.

35. ಲಾಂಟರ್ನ್ ದೀಪದ ಬೆಳಕಿನಲ್ಲಿ ಜೀವನವನ್ನು ಬೆಳಗಿಸಿದ ತಲೆಮಾರು.
36. ಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ತಲೆಮಾರು.
37. ಎಷ್ಟೇ ಇದ್ದರೂ ಇನ್ನೂ ಬೇಕೆಂಬ ಅತಿಯಾದ ಆಸೆ ಇಲ್ಲದೆ ಸಂತೋಷದಿಂದ ಬದುಕಿದ ತಲೆಮಾರು.
38. ಆಡಂಬರದಿಂದ ದೂರವಿದ್ದು, ಪೋಸ್ಟ್‌ಕಾರ್ಡ್‌ಗಳ ಮೂಲಕ ಭಾವನೆಗಳನ್ನು ಹಂಚಿಕೊಂಡ ತಲೆಮಾರು.
39. ತಮ್ಮ ತ್ಯಾಗಗಳಿಂದ ಮಕ್ಕಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿದ, ಜಾತಿ-ಧರ್ಮಗಳಾಚೆ ಸಹೋದರತ್ವದಿಂದ ಬದುಕಿದ ತಲೆಮಾರು.
40. ಕಾಫಿ, ಟಿಫಿನ್ ಇಲ್ಲದೇ ತಂಗಳ ಅನ್ನ ತಿಂದು ಶಾಲೆಗೆ ಓಡಿದ ತಲೆಮಾರು.

ಇಂತಹ ಅಮೂಲ್ಯ ತಲೆಮಾರಿನವರು ಇಂದು ಒಬ್ಬೊಬ್ಬರಾಗಿ ನಮ್ಮನ್ನು ಅಗಲುತ್ತಿದ್ದಾರೆ. ಅವರನ್ನು ಕಳೆದುಕೊಳ್ಳುವಾಗ, ನಮ್ಮ ಜೀವನದ ಅಮೂಲ್ಯವಾದ ಒಂದು ಯುಗವೇ ಕಳೆದುಹೋದಂತೆ ಅನಿಸುತ್ತದೆ.
ಸಂಗ್ರಹ
: ಸಾಮಾಜಿಕ ಜಾಲತಾಣ(ಫೇಸ್ ಬುಕ್).

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರು ಕರಡಿಗಳೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ; ತಲೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ!ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ: ಗೋವಿಂದ ಕಾರಜೋಳ ಕಿಡಿಸಂಭ್ರದಿಂದ ನಡೆದ ತುಳಸಿ ಹಬ್ಬದ ಆಚರಣೆಭೀಕರ ರಸ್ತೆ ಅಪಘಾತ: ದೇಗುಲ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ದುರ್ಮರಣಹಿರಿಯೂರು ಉಪಚುನಾವಣೆ: ಅಮಿತ್ ಶಾ ಅಂಗಳಕ್ಕೆ ಅಭ್ಯರ್ಥಿ ಆಯ್ಕೆ ಚೆಂಡುಡಿ.ಕೆ. ಶಿವಕುಮಾರ್ ಔತಣಕೂಟ ವಿವಾದ: ಬಿ.ವೈ ವಿಜಯೇಂದ್ರ ಅಸಮಾಧಾನಕ್ಕೆ ಜನಾರ್ದನ ರೆಡ್ಡಿ ತಿರುಗೇಟುಭಾರತ್ ಜೋಡೋ ಯೋಜನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಪ್ರತಿಭಟನೆ ಮತ್ತಷ್ಟು ತೀವ್ರಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಕಡ್ಡಾಯ ಜಾಮೀನಿಗೆ ಹೈಕೋರ್ಟ್ ಅಸ್ತು!ರೌಡಿಗಳಿಗೆ ಖಾಕಿ ಶಾಕ್: 30ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ, ಆರ್ಥಿಕ ಮೂಲಗಳಿಗೂ ಕತ್ತರಿ!