Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಅನಧಿಕೃತ ಮೀಟರ್ ಅಳವಡಿಸಿ ವಿದ್ಯುತ್ ವಂಚನೆ: ನೌಕರರ ವಿರುದ್ಧ ಬೆಸ್ಕಾಂ ದೂರು

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ದೊಡ್ಡಬಳ್ಳಾಪುರ ನಗರ ಉಪವಿಭಾಗ )ಯನ್ನು ವಂಚಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿರುವವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಹೌದು ಕಳೆದ ಜನವರಿ 30ರಂದು ಬೆಸ್ಕಾಂ(ದೊಡ್ಡಬಳ್ಳಾಪುರ ನಗರ ವಿಭಾಗ) ನೌಕರ ಮನು ಎಂಬುವರ ಮೇಲೆ ಮೋಸ ಹಾಗೂ ವಂಚನೆ ಆರೋಪದ ಹಿನ್ನಲೆ ದೂರು ದಾಖಲಾಗಿದ್ದು, ಪ್ರಕರಣವು ಸದ್ಯ ತನಿಖೆ ಹಂತದಲ್ಲಿದೆ.

ದೊಡ್ಡಬಳ್ಳಾಪುರ ಬೆಸ್ಕಾಂ ಸಂಸ್ಥೆಯಲ್ಲಿ ಕೇವಲ ಮನು ಅಷ್ಟೇ ಅಲ್ಲ ಕೆಲ ನೌಕರರು, ಗುತ್ತಿಗೆದಾರರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಅಲ್ಲದೇ ಕೆಲವು ಶಾಖಾ ಅಧಿಕಾರಿಗಳು ಖಾಸಗಿ ಕೆಲಸಗಳನ್ನು ಪಡೆದು ಆಯ್ದ ಕೆಲ ಗುತ್ತಿಗೆದಾರರಿಗೆ ನೀಡಿ ಬಂದ ಹಣದಲ್ಲಿ ಭಾಗಂಶ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದ್ದು  ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಈ ಕುರಿತು ತನಿಖೆ ಕೈಗೊಳ್ಳುವ ಅಗತ್ಯವಿದೆ.

ಏನಿದು ಪ್ರಕರಣ?
ತಾಲ್ಲೂಕಿನ ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ) ನೌಕರ ಮನು ಎಂಬುವರು ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ
, ವಿದ್ಯುತ್ ಮೀಟರ್ ಅಳವಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು. ಹಲವು(30ಕ್ಕೂ ಅಧಿಕ)ಬೆಸ್ಕಾಂ ಅನುಮತಿಯಿಲ್ಲದೇ ಮೀಟರ್ ಅಳವಡಿಕೆ ಮಾಡಿ ವಿದ್ಯುತ್ ಕಳ್ಳತನ ಮಾಡಲು ಸಹಕರಿಸಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಕೇಳಿಬಂದ ಹಿನ್ನಲೆ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ  ಬೆಸ್ಕಾಂ ವತಿಯಿಂದ ದೂರು ದಾಖಲು ಮಾಡಲಾಗಿದೆ.

ನಿಮಗೆ ವಿದ್ಯುತ್ ಬಿಲ್ ಬರುತ್ತಿಲ್ಲವೇ ಹಾಗಾದರೆ ಎಚ್ಚರ-
ಪ್ರತಿ ತಿಂಗಳು ವಿದ್ಯುತ್ ಬಿಲ್ ಬರುವುದು ಸರ್ವೇ ಸಾಮಾನ್ಯ
, ನಿಮ್ಮ ವಿದ್ಯುತ್ ಮೀಟರ್ ಸಂಬಂಧ ಮೂರ್ನಾಲ್ಕು ತಿಂಗಳು ವಿದ್ಯುತ್ ಬಳಕೆಯ ಬಿಲ್ ಬರಲಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ  ಬೆಸ್ಕಾಂ ದೃಡೀಕರಿಸದ ಮೀಟರ್ ಅಳವಡಿಕೆ ನಿಮ್ಮನ್ನು ಜೈಲು ವಾಸಕ್ಕೆ ಅಥವಾ ದಂಡ ಕಟ್ಟುವಂತೆ ಮಾಡಬಹುದು. ಬಿಲ್ ಬರುತ್ತಿಲ್ಲ ಎಂಬ ಸಂತೋಷ ಬೇಡ ಕೂಡಲೇ ಎಚ್ಚೆದ್ದುಕೊಳ್ಳಿ ನಿಮ್ಮ ವಿದ್ಯುತ್ ಮೀಟರ್ ಅನ್ನು ಬೆಸ್ಕಾಂ ನಿಂದ ದೃಷ್ಟಿಕರಿಸಿಕೊಳ್ಳಿ ವಂಚನೆ ಮೋಸಗಳಿಂದ ಪರಾಗಿ..ಅಧಿಕಾರಿಗಳನ್ನು ನೇರ ಸಂಪರ್ಕ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

ಅಧಿಕೃತವಲ್ಲದ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಕಳ್ಳತನಕ್ಕೆ ಅನುವು ಮಾಡಿಕೊಟ್ಟಿರುವ ಮನು ಅವರ ವಿರುದ್ದ ಬೆಸ್ಕಾಂ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಸಂಸ್ಥೆಗೆ ಆಗಿರುವ ನಷ್ಟ ಹೇಗೆ ಹಿಂಪಡೆಯಲಿದೆ ಸಂಸ್ಥೆಗೆ ವಂಚಿಸಿರುವವರ ವಿರುದ್ಧ ಕಾನೂನು ಕ್ರಮ ನೆಡೆಯುವುದೇ ಎಂದು ಸಾಮಾಜಿಕ ವಲಯದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಕಾದುನೋಡಬೇಕಿದೆ.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು