Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

2028ಕ್ಕೆ ಕ್ಷೇತ್ರಗಳ ಪುನರ್ ವಿಂಗಡಣೆ ಆಗುತ್ತಾ?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2028
ರ ಚುನಾವಣೆ ವೇಳೆಗೆ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಆಗುವುದುರ ಜೊತೆಗೆ ಮಹಿಳಾ ಮೀಸಲು ಹಾಗೂ ಎಸ್‌ಸಿ ಮೀಸಲು ಸಾಧ್ಯತೆ ಹೆಚ್ಚಿರುತ್ತದೆ.


ಹಿರಿಯೂರು ಕ್ಷೇತ್ರದ ಭವಿಷ್ಯ ಹೇಗೆ?
2028ರ ವಿಧಾನಸಭೆ ಚುನಾವಣೆ ಹೊತ್ತಿಗೆ ಕ್ಷೇತ್ರ ಪುನರ್ ವಿಂಗಡಣೆ ನಡೆಯುವ ಸಾಧ್ಯತೆ ಮತ್ತು ಮಹಿಳಾ ಮೀಸಲು ಜಾರಿಗೆ ಬರುವ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದು ನಡೆದರೆ ಹಿರಿಯೂರು ವಿಧಾನಸಭೆ ಕ್ಷೇತ್ರದ ರಾಜಕೀಯ ಭವಿಷ್ಯದಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆ ಆಗುವ ಸಂಭವ ಇದೆ.

ಹಿಂದಿನ ಇತಿಹಾಸ ನೋಡಿದರೆ, 2008ರ ತನಕ ಹಿರಿಯೂರು ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿತ್ತು. ನಂತರ 2008ರಲ್ಲಿ ನಡೆದ ಕ್ಷೇತ್ರಗಳ ಪುನರ್ ವಿಂಗಡಣೆಯ ವೇಳೆ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಆ ಬಳಿಕ ಹಲವು ನಾಯಕರು ಹಾಗೂ ವಿವಿಧ ಸಮುದಾಯಗಳು ಈ ಕ್ಷೇತ್ರದಲ್ಲಿ ತಮ್ಮ ರಾಜಕೀಯ ನೆಲೆ ಗಟ್ಟಿಗೊಳಿಸಿಕೊಂಡಿದ್ದಾರೆ.

ಆದರೆ 2028ರಲ್ಲಿ ಮತ್ತೆ ಕ್ಷೇತ್ರ ಪುನರ್ ವಿಂಗಡಣೆ ಆದರೆ, ಕ್ಷೇತ್ರದ ಗಡಿ ಹಾಗೂ ಮತದಾರರ ಸಮೀಕರಣದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಕೆಲವು ಗ್ರಾಮಗಳು ಬೇರೆ ಕ್ಷೇತ್ರಗಳಿಗೆ ಸೇರುವ ಸಾಧ್ಯತೆ ಇದೆ. ಮತ್ತೊಂದಿಷ್ಟು ಹೊಸ ಪ್ರದೇಶಗಳು ಹಿರಿಯೂರು ಕ್ಷೇತ್ರಕ್ಕೆ ಸೇರಬಹುದು. ಇದರ ಪರಿಣಾಮವಾಗಿ ರಾಜಕೀಯ ಲೆಕ್ಕಾಚಾರವೂ ಸಂಪೂರ್ಣವಾಗಿ ಹೊಸದಾಗಿ ರೂಪುಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಇದರ ಜೊತೆಗೆ ಮಹಿಳಾ ಮೀಸಲು ಜಾರಿಯಾದರೆ, ಈಗ ಸಾಮಾನ್ಯ ಕ್ಷೇತ್ರವಾಗಿರುವ ಹಿರಿಯೂರು ಕ್ಷೇತ್ರವು ಮಹಿಳಾ ಮೀಸಲು ಕ್ಷೇತ್ರವಾಗುವ ಸಾಧ್ಯತೆ ಕೂಡ ಇದೆ. ಹೀಗೆ ಆದರೆ ಕ್ಷೇತ್ರದ ರಾಜಕೀಯದಲ್ಲಿ ಮಹಿಳಾ ನಾಯಕತ್ವಕ್ಕೆ ಹೊಸ ಅವಕಾಶಗಳು ಸೃಷ್ಟಿಸಲಿದೆ.

ಮತ್ತೊಂದು ಪ್ರಮುಖ ಸಾಧ್ಯತೆ ಎಂದರೆ, ಪುನರ್ ವಿಂಗಡಣೆ ವೇಳೆ ಹಿರಿಯೂರು ಕ್ಷೇತ್ರ ಮತ್ತೆ ಎಸ್‌ಸಿ ಮೀಸಲು ಕ್ಷೇತ್ರವಾಗುವ ಸಾಧ್ಯತೆಯನ್ನೂ ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಹಿಂದೆಯೂ ಈ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದ ಇತಿಹಾಸ ಇದೆ. ಜನಸಂಖ್ಯೆಯ ಅನುಪಾತ ಮತ್ತು ಆಡಳಿತಾತ್ಮಕ ಲೆಕ್ಕಾಚಾರಗಳನ್ನು ಆಧರಿಸಿ ಈ ರೀತಿಯ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ.

ಹೀಗೆ ಎಸ್‌ಸಿ ಮೀಸಲು ಕ್ಷೇತ್ರವಾದರೆ, ಆ ಸಮುದಾಯದ ನಾಯಕತ್ವಕ್ಕೆ ಮತ್ತೆ ದೊಡ್ಡ ರಾಜಕೀಯ ಅವಕಾಶ ದೊರೆಯಬಹುದು. ಇದರಿಂದ ಕ್ಷೇತ್ರದ ರಾಜಕೀಯ ಸಮೀಕರಣ ಮತ್ತೊಮ್ಮೆ ಸಂಪೂರ್ಣವಾಗಿ ಬದಲಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ನೋಡಿದರೆ, 2028ರ ಚುನಾವಣೆ ಹಿರಿಯೂರು ಕ್ಷೇತ್ರಕ್ಕೆ ಕೇವಲ ಮತ್ತೊಂದು ಚುನಾವಣೆ ಅಲ್ಲ. ಅದು ಮತ್ತೊಮ್ಮೆ ಕ್ಷೇತ್ರದ ರಾಜಕೀಯ ದಿಕ್ಕು ಬದಲಾಗುವ ಮಹತ್ವದ ಘಟ್ಟವಾಗಬಹುದು. ಮರು ವಿಂಗಡಣೆ, ಮಹಿಳಾ ಮೀಸಲು ಅಥವಾ ಎಸ್‌ಸಿ ಮೀಸಲು ಎಂಬ ಯಾವುದೇ ಬದಲಾವಣೆ ಬಂದರೂ, ಹಿರಿಯೂರು ಕ್ಷೇತ್ರದಲ್ಲಿ ಹೊಸ ನಾಯಕತ್ವ ಮತ್ತು ಹೊಸ ರಾಜಕೀಯ ಸಮೀಕರಣಗಳು ಮೂಡಿಬರುವ ಸಾಧ್ಯತೆ ಇದೆ.

ಹೀಗಾಗಿ ಈಗಲೇ ರಾಜಕೀಯ ವಲಯದಲ್ಲಿ ಒಂದು ಪ್ರಶ್ನೆ ಚರ್ಚೆಯಾಗುತ್ತಿದೆ. “2028ರಲ್ಲಿ ಮರು ವಿಂಗಡಣೆ, ಮಹಿಳಾ ಮೀಸಲು ಅಥವಾ ಮತ್ತೆ ಎಸ್‌ಸಿ ಮೀಸಲು ಜಾರಿಯಾದರೆ ಹಿರಿಯೂರು ಕ್ಷೇತ್ರದ ಮುಂದಿನ ರಾಜಕೀಯ ಅಧ್ಯಾಯ ಬರೆಯುವವರು ಯಾರು......?”
ಲೇಖನ: ಶ್ರೀನಿವಾಸ್ ಕೆ ಟಿ, ಚಿಂತಕ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು