Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಜೀ ಕನ್ನಡ ವಾಹಿನಿ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಅವಮಾನ; ಬಹಿಷ್ಕಾರಕ್ಕೆ ನಿರ್ಧಾರ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ತುಳಸಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 29ರಂದು ಆಯೋಜಿಸಲಾಗಿದ್ದ
'ಜೀ ಕನ್ನಡ' ವಾಹಿನಿಯ ಧಾರಾವಾಹಿ ಕಾರ್ಯಕ್ರಮವು ಹಿರಿಯ ನಾಗರಿಕರು ಹಾಗೂ ರೈತ ಮುಖಂಡರನ್ನು ಕಡೆಗಣಿಸುವ ಮೂಲಕ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆಯೋಜಕರ ಬೇಜವಾಬ್ದಾರಿತನವನ್ನು ಖಂಡಿಸಿ ಹಿರಿಯೂರು ನಾಗರಿಕರು, ರೈತ ಸಂಘ ಹಾಗೂ ರೆಡ್ ಕ್ರಾಸ್ ಸಂಸ್ಥೆಯು ವಾಹಿನಿಯ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ನಿರ್ಧರಿಸಿದೆ.

​ಘಟನೆಯ ವಿವರ:
​50 ವರ್ಷಗಳ ದಾಂಪತ್ಯ ಪೂರೈಸಿದ ಜೋಡಿಗಳನ್ನು ಗೌರವಿಸುವ ನೆಪದಲ್ಲಿ ಮಧ್ಯಾಹ್ನ 3 ಗಂಟೆಗೆ ಆಹ್ವಾನಿಸಲಾಗಿತ್ತು. ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಂದರ ರಾಜ್ ಮತ್ತು ಅವರ ಪತ್ನಿ
, ಹಾಗೂ ರೈತ ಸಂಘದ ಗೌರವಾಧ್ಯಕ್ಷರು ಮತ್ತು ರೆಡ್ ಕ್ರಾಸ್ ನಿರ್ದೇಶಕರಾದ ಆಲೂರು ಸಿ. ಸಿದ್ದರಾಮಣ್ಣ ಮತ್ತು ಅವರ ಪತ್ನಿಯವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು.

​ಆದರೆ, 83 ವರ್ಷ ವಯಸ್ಸಿನ ಸಿದ್ದರಾಮಣ್ಣನವರು ಹಾಗೂ ಅವರ ಪತ್ನಿ ಮಧ್ಯಾಹ್ನದಿಂದ ರಾತ್ರಿ 9:30ರವರೆಗೆ ವೇದಿಕೆಯ ಕರೆಯನ್ನು ಎದುರು ನೋಡುತ್ತಾ ಕುಳಿತಿದ್ದರೂ, ಆಯೋಜಕರು ಅವರನ್ನು ಕರೆಯದೆ ಅವಮಾನಿಸಿದ್ದಾರೆ. ಆರು ಗಂಟೆಗಳ ಕಾಲ ಹಿರಿಯರನ್ನು ಕಾಯಿಸಿ ಕಡೆಗಣಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

​ಮೂಲಸೌಕರ್ಯಗಳ ಕೊರತೆ:
​ಕಾರ್ಯಕ್ರಮದಲ್ಲಿ ಜನಸಾಮಾನ್ಯರ ಸ್ಥಿತಿ ಗಂಭೀರವಾಗಿತ್ತು ಎಂದು ಸಿದ್ದರಾಮಣ್ಣ ದೂರಿದ್ದಾರೆ.


​ಶೌಚಾಲಯಕ್ಕೆ ಬೀಗ: ಕಲ್ಯಾಣ ಮಂಟಪದ ಶೌಚಾಲಯಗಳಿಗೆ ಬೀಗ ಹಾಕಿದ್ದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ತೀವ್ರ ಸಂಕಟ ಅನುಭವಿಸಬೇಕಾಯಿತು.

​ನೀರಿನ ವ್ಯವಸ್ಥೆ ಇಲ್ಲ: ಕುಡಿಯುವ ನೀರಿನ ಕನಿಷ್ಠ ವ್ಯವಸ್ಥೆಯನ್ನೂ ಮಾಡದೆ ಸಾರ್ವಜನಿಕರನ್ನು ಜೈಲುವಾಸಿಗಳಂತೆ ನಡೆಸಿಕೊಳ್ಳಲಾಗಿದೆ.

​ಕೇವಲ ಗಿಮಿಕ್: ಕಾರ್ಯಕ್ರಮದಲ್ಲಿ ಯಾವುದೇ ಮನೋರಂಜನೆ ಅಥವಾ ಸತ್ವ ಇರಲಿಲ್ಲ, ಕೇವಲ ಚಪ್ಪಾಳೆ ಮತ್ತು ಕೇಕೆ ಹಾಕಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿತ್ತು ಎಂದು ಆರೋಪಿಸಲಾಗಿದೆ.

​"ಜೀ ಕನ್ನಡ ವಾಹಿನಿಯವರು ಕೇವಲ ಹಣ ಮಾಡುವ ದಂದೆಗೆ ಇಂತಹ ಗಿಮಿಕ್ ಮಾಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಮತ್ತು ರೈತರಿಗೆ ದ್ರೋಹ ಎಸಗಿರುವ ಈ ವಾಹಿನಿಯನ್ನು ನಾವು ಸಂಪೂರ್ಣವಾಗಿ ಬಹಿಷ್ಕರಿಸುತ್ತೇವೆ."
ಆಲೂರು ಸಿ. ಸಿದ್ದರಾಮಣ್ಣ
, ಗೌರವಾಧ್ಯಕ್ಷರು, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ.

​ಈ ಹಿನ್ನೆಲೆಯಲ್ಲಿ ಹಿರಿಯೂರು ನಾಗರಿಕರು, ರೈತ ಸಂಘ ಹಾಗೂ ರೆಡ್ ಕ್ರಾಸ್ ಸಂಸ್ಥೆಯು ಒಕ್ಕೊರಲಿನಿಂದ ವಾಹಿನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡದಿರಲು ತೀರ್ಮಾನಿಸಿದೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು