E-PAPER
24 Nov 2026, 03:55:08 PM|
Gold₹12519/gGold24K ₹12,519/g - 22K ₹11,465/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಕಾನೂನು ಉಲ್ಲಂಘಿಸಿದ ಸ್ಕೂಲ್ ಪರವಾನೆಗಿ ರದ್ದುಪಡಿಸಲು ಆಗ್ರಹ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಹೆಗಡೆ ನಗರದ ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್  ಸ್ಕೂಲ್ ( ಜಮೀಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ – ಮುಂಬೈ) ಭಾರೀ ಅಕ್ರಮಗಳಲ್ಲಿ ತೊಡಗಿದ್ದು, ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಹಲವು ನೋಟಿಸ್ ಗಳನ್ನು ಈ ಸಂಸ್ಥೆಗೆ ನೀಡಿದ್ದು, ಈ ವರೆಗೆ ಪೂರಕ ದಾಖಲೆ ಮತ್ತು ಮಾಹಿತಿ ಒದಗಿಸಿಲ್ಲ. ಎಲ್ಲಾ ನೀತಿ, ನಿಯಮಗಳನ್ನು ಗಾಳಿಗೆ ತೂರಿದ್ದು, ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದಿದೆ ಎಂದು ಕರ್ನಾಟಕ ರಕ್ಷಣಾ (ಶಿವರಾಮೇಗೌಡರ ಬಣ) ವೇದಿಕೆ ಚಾಮರಾಜಪೇಟೆ ಘಟಕದ ಅಧ್ಯಕ್ಷ ಚಾನ್ ಪಾಷ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆ ನೆಲದ ಕಾನೂನು ಉಲ್ಲಂಘಿಸಿ ಹೆಜ್ಜೆ ಹೆಜ್ಜೆಗೂ ತಪ್ಪುಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸೂಕ್ತ ಮಾಹಿತಿ ಒದಗಿಸುವಂತೆ ಶಿಕ್ಷಣ ಇಲಾಖೆ ಹಲವು ಬಾರಿ ನೀಡಿದ ನಿರ್ದೇಶನವನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಸಂಸ್ಥೆ ಮಹಾರಾಷ್ಟ್ರ ಶಿಕ್ಷಣ ಇಲಾಖೆಯಿಂದಲೂ ಸಹ ನೋಂದಣಿಯಾಗಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆ ಮಾಹಿತಿಯಿಂದ ತಿಳಿದು ಬಂದಿದೆ.

 ರಾಜ್ಯದಲ್ಲೂ ವಿವಿಧ ಇಲಾಖೆಗಳಿಗೆ ಸುಳ್ಳು ಮಾಹಿತಿ ನೀಡಿ, ಮೋಸ ವಂಚನೆ ಮಾಡುತ್ತಿದೆ. ಈ ಶಾಲೆಯನ್ನು “ಜಾಮಿಯಾ ಮೊಹಮ್ಮದೀಯ ಮಂನ್ಸೂರ” ಎಂಬ ಆಡಳಿತ ಮಂಡಳಿ ಹೆಸರಿನಿಂದ ನೋಂದಾಯಿಸಿದ್ದಾರೆ. ಶಿಕ್ಷಣ ಇಲಾಖೆಗೆ ಶಾಲಾ ಆಡಳಿತ ಮಂಡಳಿ ಹೆಸರನ್ನು ಜಾಮೀಯ ಮಹಮದೀಯ ಎಜಿಕೇಷನ್ ಸೊಸೈಟಿ ಎಂದು ವಿವರಗಳನ್ನು ಒದಗಿಸಿದ್ದಾರೆ ಎಂದರು.

ಒಂದು ಶಾಲೆ ನಡೆಸಲು ಮೂರು ಆಡಳಿತ ಮಂಡಳಿ ಹೆಸರಿನಿಂದ ನೋಂದಾಯಿಸಿರುವುದು ಭಾರೀ ಸಂಶಯಕ್ಕೆ ಕಾರಣವಾಗಿದೆ. ಈ ಶಾಲೆಯವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮದರಸಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಯೋಜನೆಯಡಿ 2017-2018 ನೇ ಸಾಲಿನಲ್ಲಿ ಜಾಮೀಯ ಮಹಮದೀಯ ಮನ್ಸೂರ್ ಹೆಸರಿನಲ್ಲಿ ಮತ್ತು ಜಾಮೀಯ ಮಹಮ್ಮದೀಯ ಎಜುಕೇಷನ್ ಸೊಸೈಟಿ ಪರವಾಗಿ 10 ಲಕ್ಷ ರೂಗಳ ಅನುದಾನ ಪಡೆದಿದ್ದಾರೆ. ಅನುದಾನ ರಹಿತ ಶಾಲೆ ಎಂದು ನೋಂದಾಯಿಸಿದ್ದರೂ ಸರ್ಕಾರದಿಂದ ಅನುದಾನ ಪಡೆದಿರುವುದು ಭಾರೀ ವಂಚನೆಯಾಗಿದೆ ಎಂದರು.

ಶಿಕ್ಷಣ ಸಂಸ್ಥೆಯ ಕುರಿತು ಸೂಕ್ತ ಮಾಹಿತಿ ನೀಡುವಂತೆ ಜನವರಿ, ಫೆಬ್ರವರಿಯಲ್ಲಿ ಎರಡು ಬಾರಿ ನೋಟೀಸ್ ನೀಡಿದ್ದು, ಇದಕ್ಕೆ ಸಮರ್ಪಕ ಮಾಹಿತಿ ಒದಗಿಸಿಲ್ಲ.   ಜೊತೆಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಮತ್ತು  ದೌರ್ಜನ್ಯ ಪ್ರಕರಣಗಳು ಸಹ ದಾಖಲಾಗಿವೆ. ಪ್ರತಿಯೊಂದು ಹಂತದಲ್ಲೂ ಈ ಶಾಲೆಯವರು ಅಕ್ರಮ ಚಟುವಟಿಕೆ, ವಂಚನೆ, ದಬ್ಬಾಳಿಕೆ, ದೌರ್ಜನ್ಯ, ಕಾನೂನು ಉಲ್ಲಂಘನೆ ಮತ್ತು ಭೂಕಬಳಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಈ ಶಾಲೆಯ ಪರವಾನಗಿ ರದ್ದುಪಡಿಸಿ ಮಕ್ಕಳ ರಕ್ಷಣೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ಮೋಸ ತಡೆಯಬೇಕು ಎಂದು ಚಾನ್ ಪಾಷ ಆಗ್ರಹಿಸಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ: ಇಬ್ಬರು ಆರೋಪಿಗಳಿಗೆ ಸಾದಾ ಶಿಕ್ಷೆ ಮತ್ತು ದಂಡ ವಿಧಿಸಿದ ನ್ಯಾಯಾಲಯಕುವೆಂಪು ಕಂಡ ಕ್ರಾಂತಿವೀರ, ಶಿವರುದ್ರಪ್ಪ ಮೆಚ್ಚಿದ ಮಹಾಚೇತನ! ಬಸವಣ್ಣನವರನ್ನು ಅಳೆಯುವ ಅರ್ಹತೆ ಯಾರಿಗಿದೆ?ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ: 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟರಾಷ್ಟ್ರೀಯ ಮತದಾರರ ದಿನಾಚರಣೆ: ಜಿಲ್ಲಾಮಟ್ಟದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜನೆಆರ್.ಆರ್. ನಗರದಲ್ಲಿ ರಾಜಕೀಯ ಬೆಳವಣಿಗೆ; ಮುನಿರತ್ನ ಆಪ್ತರು ಕಾಂಗ್ರೆಸ್ ಸೇರ್ಪಡೆರೇಣುಕಾಸ್ವಾಮಿ ಕೊಲೆ ಕೇಸ್: ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪಟ್ಟಣಗೆರೆ ಶೆಡ್ ಗಾರ್ಡ್, ಪ್ರಾಸಿಕ್ಯೂಷನ್‌ಗೆ ಹಿನ್ನಡೆ!ಕಾಡಾನೆ ಸ್ಥಳಾಂತರಕ್ಕೆ ತೀವ್ರ ವಿರೋಧ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ನಯನಾ ಮೋಟಮ್ಮಏಷ್ಯಾ ಪವರ್ ಇಂಡೆಕ್ಸ್ 2026: 3ನೇ ಸ್ಥಾನ ಉಳಿಸಿಕೊಂಡ ಭಾರತ; ಪ್ರಾದೇಶಿಕ ನಾಯಕತ್ವದಲ್ಲಿ ಮೋದಿಗೆ 2ನೇ ಸ್ಥಾನಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಡಿ: ಡಿಸಿಎಂ ಜಿ. ಪರಮೇಶ್ವರ್ಚೆಕ್ ಬೌನ್ಸ್ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು