Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಜ್ರ ಖಚಿತ ಕಿರೀಟದ ಮುತ್ತುಗಳು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು
. ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು, ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ, ಆ ದೇಶದಲ್ಲಿ ಚಲಿಸುವ  ಬುಲೆಟ್ ರೈಲುಗಳ ವೇಗ, ಅಲ್ಲಿ ಇರಬಹುದಾದ 5 ಸ್ಟಾರ್, 7 ಸ್ಟಾರ್ ಹೋಟೆಲ್ ಗಳ ಸಂಖ್ಯೆ, ಅಲ್ಲಿ ಓಡಾಡುವ ಕಾರುಗಳ ವೈಭವೋಪೇತ ಮೆರವಣಿಗೆ, ಅಲ್ಲಿನ ರಾಜಕೀಯ ನೇತಾರರ ಶ್ರೀಮಂತ ಜೀವನ ಶ್ಯೆಲಿ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್, ಡಿಜಿಟಲ್ ಆಡಳಿತ  ಇತ್ಯಾದಿಗಳು..

 ಇನ್ನೊಂದೆಡೆ, ಒಂದು ದೇಶದ ಬಡತನವೆಂಬ ತಗಡು ಕಿರೀಟದ  ಹರಳುಗಳು. ಊಟಕ್ಕೇ ಇಲ್ಲದೆ ಕೆಲವರು ಆಗಾಗ ಹಸಿವಿನಿಂದ ಸಾಯುವುದು, ಪೌಷ್ಟಿಕಾಂಶದ ಕೊರತೆಯಿಂದ ಅನೇಕ ಮಕ್ಕಳು ನರಳುತ್ತಿರುವುದು, ಇನ್ನೂ ನೀರು, ವಿದ್ಯುತ್‌, ರಸ್ತೆಗಳ ಸೌಕರ್ಯವಿಲ್ಲದ ಹಳ್ಳಿಗಳು, ಆಗಾಗ ಪ್ರತಿಭಟನೆ, ಮುಷ್ಕರ, ಬಂದ್ ಗಳು, ಇಲ್ಲಿನ ಕೋರ್ಟುಗಳಲ್ಲಿ ದಾಖಲಾಗಿರುವ ಕೇಸುಗಳು, ತುಂಬಿ ತುಳುಕುವ ಆಸ್ಪತ್ರೆ, ಜೈಲುಗಳು, ಬೀದಿ ಬದಿಯಲ್ಲಿಯೇ ಸಂಸಾರ ಸಾಗಿಸುವ ಕುಟುಂಬಗಳು, ಇಲ್ಲಿರುವ ವೃದ್ದಾಶ್ರಮ ಅನಾಥಾಶ್ರಮಗಳ ಸಂಖ್ಯೆ, ಹೆಣ ಸುಡಲೂ ಕೊಡಬೇಕಾದ ಲಂಚ, ಇಲ್ಲಿ ದಾಖಲಾಗುವ ಅತ್ಯಾಚಾರ, ಕೊಲೆ, ಕಳ್ಳತನ, ವಂಚನೆಗಳ ಸಂಖ್ಯೆ, ಓಟಿಗಾಗಿ ಜನಗಳು ಸಲ್ಲಿಸುವ ಹಣದ ಬೇಡಿಕೆ, ಇಲ್ಲಿನ ರಸ್ತಗಳಿಂದಾಗುವ ಅಪಘಾತಗಳ ಸಾವು, ನೋವು, ಇತ್ಯಾದಿಗಳು.

ಈಗ ಆಯ್ಕೆ ನಿಮ್ಮದೇ ......ನಮ್ಮ ದೇಶ ಭಾರತ, ವಜ್ರ ಖಚಿತ ಕಿರೀಟದ ಅಸಲಿ ರಾಷ್ಟ್ರವೇ ? ಅಥವಾ ತಗಡಿನ ಕಿರೀಟದ ನಕಲಿ ಹರಳುಗಳೇ ಇರುವ ರಾಷ್ಟ್ರವೇ ? ಆತ್ಮವಂಚನೆ ಮಾಡಿಕೊಳ್ಳದೇ ಉತ್ತರಿಸಿಕೊಳ್ಳಿ.........

ಎರಡೂ ಇದೆ ಎಂಬುವವರಿಗೆ ನಾವು ಈಗ ಹೆಚ್ಚಾಗಿ ಗಮನಹರಿಸಬೇಕಾದದ್ದು ಯಾವ ಕಡೆ ಎಂಬ ಪ್ರಶ್ನೆಯೂ ಬರುತ್ತದೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಬಲಪಂಥೀಯ ಚಿಂತನೆಗಳು, ದೇಶ ತೀರಾ ಅಧೋಗತಿಗೆ ಇಳಿಯುತ್ತಿದೆ ಎಂಬ ಎಡಪಂಥೀಯ ಚಿಂತನೆಗಳು ವಾಸ್ತವಕ್ಕೆ ಹತ್ತಿರವಾಗಿರುವುದಿಲ್ಲ,

ಆದರೆ ನಮ್ಮ ದೇಶದ ಮೂಲಭೂತ ಸಮಸ್ಯೆಗಳಾದ ಅಪೌಷ್ಟಿಕತೆ, ಮೌಢ್ಯ, ಅಜ್ಞಾನ, ಹಿಂಸೆ, ತಾರತಮ್ಯ, ಭ್ರಷ್ಟಾಚಾರ, ಜಾತಿ ಪದ್ಧತಿ, ಹೆಣ್ಣಿನ ಮೇಲಿನ ದೌರ್ಜನ್ಯ ಇವುಗಳನ್ನು ಪರಿಗಣಗೆ ತೆಗೆದುಕೊಂಡರೆ ಖಂಡಿತವಾಗಲು ಭಾರತ ಸಾಕಷ್ಟು ಹಿಂದುಳಿದಿದೆ,

ತಾಂತ್ರಿಕವಾಗಿ ಮುಂದುವರೆಯುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ, ಆದರೆ ಮಾನವೀಯ ಮೌಲ್ಯಗಳ ವಿಷಯದಲ್ಲಿ ತೀರಾ ಕೆಳಹಂತಕ್ಕೆ ಜಾರುತ್ತಿರುವುದರಿಂದ ದೇಶದ ಅಭಿವೃದ್ಧಿಯ ಪರಿಕಲ್ಪನೆಯನ್ನು ಮತ್ತೊಮ್ಮೆ ಪುನರ್ ವಿಮರ್ಶಗೊಳಪಡಿಸಬೇಕಿದೆ... ಲೇಖನ:ವಿವೇಕಾನಂದ. ಎಚ್. ಕೆ. 9844013068..........

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು