Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಅರ್ಕಾವತಿ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೆರೆಗಳಿಗೆ ಬಿಡುತ್ತಿರುವುದರಿಂದ
  ಕುಡಿಯುವ ನೀರು ಹಾಗು ಬೆಳೆ ಬೆಳೆಯಲು ಯೋಗ್ಯವಲ್ಲದ ಸ್ಥಿತಿಗೆ ಈ ನೀರು ವಿಷ ವಾಗಿದೆ ಅದ್ದರಿಂದ ಶುದ್ಧ ನೀರಿಗಾಗಿ ಆಗ್ರಹಿಸಿ ಅಂಬೇಡ್ಕರ್ ಜಯಂತಿ ದಿನವೇ ಗ್ರಾಮಸ್ಥರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. 

 ಅರ್ಕಾವತಿ ನದಿ ಹೋರಾಟ ಸಮಿತಿ  ಮೂರನೇ ಹಂತದ ಶುದ್ಧೀಕರಣಕ್ಕಾಗಿ ನಗರದ ತಹಶೀಲ್ದಾರ್ ಕಛೇರಿ ಮುಂದೆ  ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಾಸಾಯಿನಿಕ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಬಿಡುತ್ತಿರುವುದರಿಂದ. ಕೊಳವೆ ಬಾವಿ ಹಾಗು ಕೆರೆ ನೀರು  ಯಾವುದಕ್ಕೂ ಯೋಗ್ಯ ಸ್ಥಿತಿಯಲ್ಲಿ ರುವುದರಿಂದ ನಮಗೆ ಶುದ್ದ ನೀರು ಕೊಡಿ ಎಂದು ಅರ್ಕಾವತಿ ನದಿಪಾತ್ರದ ಗ್ರಾಮಸ್ಥರು ಹಾಗು ಹೋರಾಟಗಾರರ ಆಕ್ರೋಶ ಕಾರಣವಾಗಿದೆ

 ಇದೇ ವೇಳೆ.ಆರ್ಕಾವತಿ ಹೋರಾಟ ಸಮಿತಿ ಮುಖಂಡ ವಸಂತಕುಮಾರ್, ಮಾತನಾಡಿದ ನಮ್ಮ ಹೊಲ ಗದ್ದೆಗಳಿಗೆ ದನ ಕರುಗಳಿಗೆ ನಮ್ಮ ದಿನನಿತ್ಯ ಬಳಕೆಗೆ ಈ ಕೆರೆಯ ನೀರೇ ಆಶ್ರಯ ವಾಗಿತ್ತು ಅದರೆ ಈ. ದಿನ ನಮ್ಮ ಬದುಕು ನಾಶವಾಗಿ ಬೀದಿಗೆ ಬಂದಿದ್ದೇವೆ.  ಅದರೆ ನಮ್ಮ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆಯ ಹಕ್ಕಿನ ಹಾದಿ ತೋರಿಸಿ ಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ನಾವು ಬಹಳ ಸಂಭ್ರಮದಿಂದ ಆಚರಣೆ ಮಾಡಬೇಕು.

ಆದರೆ ಈ ದಿನ  ಸಂವಿಧಾನ ವಿರೋಧಿಯಾಗಿ ಕೆರೆಗಳಿಗೆ ತ್ಯಾಜ್ಯ ನೀರನ್ನು ಬಿಡುತ್ತಿದ್ದಾರೆ, ಇದರಿಂದ ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಯ 17 ಗ್ರಾಮಗಳ ಜನರ ಕುಡಿಯುವ ನೀರನ್ನು ವಿಷ ಮಾಡಿದ್ದಾರೆ, ಜನರಿಗೆ ಕುಡಿಯಲು ಶುದ್ಧ ನೀರು ಕೊಡುವುದು ಸರ್ಕಾರದ ಕರ್ತವ್ಯ, ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕು ಆ ಕಾರಣಕ್ಕಾಗಿ ನಾವು ಎಲ್ಲರೂ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವುದ್ದಾಗಿ ಹೇಳಿದರು.

 ಈ ಉಪವಾಸ ಸತ್ಯಾಗ್ರಹದ ಹೋರಾಟದಲ್ಲಿ ಗ್ರಾಮಸ್ಥರಾದ  ವಿಜಿ ಕುಮಾರ್ ದೊಡ್ಡ ತುಮಕೂರು, ಮುನಿಕೃಷ್ಣಪ್ಪ, ಚನ್ನಕೇಶವ, ರಮೇಶ್, ಸತೀಶ್, ಮೂರ್ತಿ , ವಿಜಿ ಕುಮಾರ್ ದೊಂಬರಹಳ್ಳಿ, , ಮಂಜುನಾಥ್ ಭಾಗವಹಿಸಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು