E-PAPER
24 Nov 2026, 03:42:46 PM|
Gold₹12519/gGold24K ₹12,519/g - 22K ₹11,465/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯಲ್ಲಿ ಖಾಲಿಯಿರುವ ಭೂ ವಿಜ್ಞಾನಿ - 01, ಜಿಲ್ಲಾ ಪ್ರಯೋಗಾಲಯದಲ್ಲಿರುವ ಕಿರಿಯ ವಿಶ್ಲೇಷಣೆಗಾರರು-01, ನೀರಿನ ಮಾದರಿಗಳ ಸಂಗ್ರಹಗಾರರು - 01 ಹುದ್ದೆಗಳಿಗೆ ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 


ಭೂ ವಿಜ್ಞಾನಿ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕನಿಷ್ಠ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ದೂರಶಿಕ್ಷಣವನ್ನು ಪರಿಗಣಿಸುವುದಿಲ್ಲ. ಭೂವಿಜ್ಞಾನಿಯಾಗಿ ಕನಿಷ್ಟ 5 ವರ್ಷಗಳ ಅನುಭವ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 45 ವರ್ಷಗಳ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಸೇವಾ ಶುಲ್ಕ ಮತ್ತು ಜಿಎಸ್.ಟಿ ಹೊರತುಪಡಿಸಿ 35,000 ಸಂಭಾವನೆ ನೀಡಲಾಗುವುದು.


ಕಿರಿಯ ವಿಶ್ಲೇಷಣೆಗಾರರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೈಕ್ರೋ ಬಯಾಲಜಿ / ಬಯೋಕೆಮಿಸ್ಟ್ರಿ, ಬಯೋ ತಂತ್ರಜ್ಞಾನ/ಪರಿಸರ ವಿಜ್ಞಾನದಲ್ಲಿ  ಎಂ.ಎಸ್ಸಿ / ಬಿ.ಎಸ್ಸಿ ಪದವಿ ಪಡೆದಿರಬೇಕು. ಕನಿಷ್ಠ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ದೂರಶಿಕ್ಷಣವನ್ನು ಪರಿಗಣಿಸುವುದಿಲ್ಲ. ನೀರಿನ ಗುಣಮಟ್ಟ ವಿಶ್ಲೇಷಣೆ ಮತ್ತು ಪರೀಕ್ಷೆಯಲ್ಲಿ ಕನಿಷ್ಟ 3 ವರ್ಷಗಳ ಅನುಭವ, ಎಂ.ಎಸ್.ಆಫೀಸ್‍ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 45 ವರ್ಷಗಳ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಸೇವಾ ಶುಲ್ಕ ಮತ್ತು ಜಿಎಸ್.ಟಿ ಹೊರತುಪಡಿಸಿ 21,000 ಸಂಭಾವನೆ ನೀಡಲಾಗುವುದು.


ನೀರಿನ ಮಾದರಿಗಳ ಸಂಗ್ರಹಗಾರರ ಹುದ್ದೆಗೆ ಪಿಯುಸಿ ಯಲ್ಲಿ ವಿಜ್ಞಾನ ವಿಷಯ ಓದಿರಬೇಕು. ಕನಿಷ್ಟ ಶೇಕಡ 50 ರಷ್ಟು ಅಂಗಳನ್ನು ಗಳಿಸಿರಬೇಕು. ಲ್ಯಾಬ್ ಅಟೆಂಡರ್ ಸಹಾಯಕರಾಗಿ ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. 35 ವರ್ಷಗಳ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಸೇವಾ ಶುಲ್ಕ ಮತ್ತು ಜಿಎಸ್.ಟಿ ಹೊರತುಪಡಿಸಿ ಇಎಸ್‍ಐ, ಪಿಎಫ್, ಸಾರಿಗೆ ವೆಚ್ಚದೊಂದಿಗೆ 21,000 ಸಂಭಾವನೆ ನೀಡಲಾಗುವುದು.


ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುವುದು. ದೂರಶಿಕ್ಷಣ ಮೂಖಾಂತರ ಪಡೆದ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.

ಅರ್ಜಿಗಳನ್ನು ಸೆಪ್ಟೆಂಬರ್ 08 ರೊಳಗಾಗಿ          ಇ-ಮೇಲ್ [email protected] ಮೂಲಕ ಅಥವಾ ಖುದ್ದಾಗಿ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾಡಳಿತ ಭವನ, ಚಪ್ಪರದಕಲ್ಲು, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ: ಇಬ್ಬರು ಆರೋಪಿಗಳಿಗೆ ಸಾದಾ ಶಿಕ್ಷೆ ಮತ್ತು ದಂಡ ವಿಧಿಸಿದ ನ್ಯಾಯಾಲಯಕುವೆಂಪು ಕಂಡ ಕ್ರಾಂತಿವೀರ, ಶಿವರುದ್ರಪ್ಪ ಮೆಚ್ಚಿದ ಮಹಾಚೇತನ! ಬಸವಣ್ಣನವರನ್ನು ಅಳೆಯುವ ಅರ್ಹತೆ ಯಾರಿಗಿದೆ?ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ: 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟರಾಷ್ಟ್ರೀಯ ಮತದಾರರ ದಿನಾಚರಣೆ: ಜಿಲ್ಲಾಮಟ್ಟದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಆಯೋಜನೆಆರ್.ಆರ್. ನಗರದಲ್ಲಿ ರಾಜಕೀಯ ಬೆಳವಣಿಗೆ; ಮುನಿರತ್ನ ಆಪ್ತರು ಕಾಂಗ್ರೆಸ್ ಸೇರ್ಪಡೆರೇಣುಕಾಸ್ವಾಮಿ ಕೊಲೆ ಕೇಸ್: ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪಟ್ಟಣಗೆರೆ ಶೆಡ್ ಗಾರ್ಡ್, ಪ್ರಾಸಿಕ್ಯೂಷನ್‌ಗೆ ಹಿನ್ನಡೆ!ಕಾಡಾನೆ ಸ್ಥಳಾಂತರಕ್ಕೆ ತೀವ್ರ ವಿರೋಧ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ನಯನಾ ಮೋಟಮ್ಮಏಷ್ಯಾ ಪವರ್ ಇಂಡೆಕ್ಸ್ 2026: 3ನೇ ಸ್ಥಾನ ಉಳಿಸಿಕೊಂಡ ಭಾರತ; ಪ್ರಾದೇಶಿಕ ನಾಯಕತ್ವದಲ್ಲಿ ಮೋದಿಗೆ 2ನೇ ಸ್ಥಾನಮುಖ್ಯಮಂತ್ರಿಗಳ ಮಾತಿನ ಮೇಲೆ ವಿಶ್ವಾಸವಿಡಿ: ಡಿಸಿಎಂ ಜಿ. ಪರಮೇಶ್ವರ್ಚೆಕ್ ಬೌನ್ಸ್ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು