Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಪೊಲೀಸರ ಮಿಂಚಿನ ಕಾರ್ಯಚರಣೆ: ಬೈಕ್ ಕಳ್ಳನ ಬಂಧನ, 34 ಬೈಕ್ ಪತ್ತೆ

 ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ವರ್ಷಗಳಿಂದ ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಟಾರ್‌ ಬೈಕ್‌ಗಳ ಕಳ್ಳತನವನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಹಿರಿಯೂರಿನ ಆದಾಜ್‌ನಗರ ನಿವಾಸಿ ಮಹಮ್ಮದ್‌ ಶರೀಫ್(೩೫) ಎಂಬ ಬೈಕ್ ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಗುರುಪಡಿಸಿ ೧೧ ಪ್ರಕರಣ ಪತ್ತೆಹಚ್ಚಿದ್ದಲ್ಲದೆ
, ೧.೪೦ ಲಕ್ಷ ಮೌಲ್ಯದ 34 ಮೋಟಾರ್‌ ಬೈಕ್ ವಶಪಡಿಸಿಕೊಳ್ಳುವ ಮೂಲಕ ಬಾರಿ ಪ್ರಮಾಣದ ಬೈಕ್‌ ಕಳ್ಳತನವನ್ನು ಪತ್ತೆಹಚ್ಚಿ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.


ಇನ್ಸ್‌ಪೆಕ್ಟರ್ ಕೆ.ಕುಮಾರ್ ಮಾಹಿತಿ ನೀಡಿ, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಶಿವಕುಮಾರ್, ಪ್ರಭಾರ ಡಿವೈಎಸ್ಪಿ ಉಮೇಶ್‌ ಈಶ್ವರ ನಾಯ್ಕ, ನೂತನ ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಪ್ರಕರಣ ಪತ್ತೆ ಹಚ್ಚಿ ಬೈಕ್‌ಗಳನ್ನು ಕಳ್ಳನಿಂದ ವಶಪಡಿಸಿಕೊಳ್ಳಲಾಗಿದೆ ಎಂದರು.

ಚಳ್ಳಕೆರೆ ಪೊಲೀಸ್ ಠಾಣಾವ್ಯಾಪ್ತಿ-೬, ಹೊಸದುರ್ಗ-೪, ಹೊಳಲ್ಕೆರೆ-೨ ಚಿತ್ರದುರ್ಗ ನಗರ ಠಾಣೆ-೨ ಚಿತ್ರದುರ್ಗ ಬಡಾವಣೆ-೦೧, ಹಿರಿಯೂರು ನಗರಠಾಣೆ-೦೧, ತುಮಕೂರು ಜಿಲ್ಲೆ-೦೬, ದಾವಣಗೆರೆ-೩, ಶಿವಮೊಗ್ಗ-೨, ಚಿಕ್ಕಮಗಳೂರು ಜಿಲ್ಲೆ-೧ ಹಾಗೂ ೧೧ ಮೋಟಾರ್‌ ಬೈಕ್‌ಗಳ ಬಗ್ಗೆ ವಿವರಗಳು ಲಭ್ಯವಾಗಬೇಕಿದ್ದು ಒಟ್ಟು ೩೪ ಬೈಕ್‌ಗಳನ್ನು ವಶಪಡಿಸಿಕೊಂಡಿದ್ಧಾರೆ.

ತಲೆಮರಿಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಚಳ್ಳಕೆರೆ ಪೊಲೀಸರ ಕಾರ್ಯಕ್ಕೆ ಜಿಲ್ಲಾರಕ್ಷಣಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಆರ್.ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ಧಾರೆ.

ನೂತನ ಡಿವೈಎಸ್ಪಿ ಎಂ.ಜೆ.ಸತ್ಯನಾರಾಯಣರಾವ್ ಮಾತನಾಡಿ, ಕಳ್ಳತನವೂ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪೊಲೀಸರು ಪತ್ತೆಹಚ್ಚುವ ಕಾರ್ಯದಲ್ಲಿ ಹೆಚ್ಚು ಜಾಗೃತೆ ವಹಿಸಿದ್ದರೂ ಸಾರ್ವಜನಿಕರು ಕೆಲವೊಮ್ಮೆ ಪೊಲೀಸರ ಕಾರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಪೊಲೀಸ್ ಇಲಾಖೆ ಸದಾಕಾಲ ಸಾರ್ವಜನಿಕರ ಹಿತದೃಷ್ಠಿಯಿಂದ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಗೆಹೆಚ್ಚು ಸಹಕಾರ ನೀಡಿದಲ್ಲಿ ಪ್ರಕರಣಗಳ ಪತ್ತೆಕಾರ್ಯಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಪತ್ತೆ ಕಾರ್ಯದಲ್ಲಿ ಪಿಎಸ್‌ಐಗಳಾದ ಈರೇಶ್, ಜೆ.ಶಿವರಾಜ್, ಧರೆಪ್ಪ ಬಾಳಪ್ಪ ದೊಡ್ಡಮನಿ, ಎಎಸ್‌ಐ ರಾಘವರೆಡ್ಡಿ, ಮುಖ್ಯಪೇದೆ ಎಚ್.ವಸಂತಕುಮಾರ್, ಎಚ್.ವೆಂಕಟೇಶ್, ಶ್ರೀನಿವಾಸ್, ಶಿವಕುಮಾರ್, ಪೇದೆಗಳಾದ ಮಂಜುನಾಥ, ಪರಶುರಾಮ, ಶ್ರೀಧರ ಧರೆಣ್ಣನವರ್, ರಮೇಶ್‌ ಬಾರ್ಕಿ, ಅಶೋಕ್‌ ರೆಡ್ಡಿ, ತಿರುಕಪ್ಪ ತಳವಾರ್, ಬಸವರಾಜ, ಕೊಂಡ್ಲಿ ಮಂಜುನಾಥ ಮುಂತಾದವರು ಶ್ರಮಹಿಸಿದ್ದು ಎಲ್ಲರನ್ನೂ ಜಿಲ್ಲಾರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು